More

    12 ವರ್ಷಗಳ ಬಳಿಕ ಭಾರತಕ್ಕೆ ಬಂದ ಪಾಕ್​ ವಿದೇಶಾಂಗ ಸಚಿವರಿಗೆ ಜೈ ಶಂಕರ್​ ಸ್ವಾಗತ ಕೋರಿದ್ದು ಹೀಗೆ!

    ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಇಂದು (ಮೇ 5) ಗೋವಾದಲ್ಲಿ ನಡೆಯುವ ಶಾಂಘೈ ಸಹಕಾರ ಸಂಘಟನೆಯ (SCO) ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಗೋವಾಕ್ಕೆ ಆಗಮಿಸಿದ್ದಾರೆ.

    ಪಾಕ್ ವಿದೇಶಾಂಗ ಸಚಿವರನ್ನು ಗುರುವಾರ (ಮೇ 4) ದಂದು ಗೋವಾದ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪಾಕಿಸ್ತಾನ-ಅಫ್ಘಾನಿಸ್ತಾನ-ಇರಾನ್ ವಿಭಾಗದ ಮುಖ್ಯಸ್ಥರಾಗಿರುವ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ಅವರು ಬರಮಾಡಿಕೊಂಡಿದ್ದರು.

    ಇಂದು ಗೋವಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು ಸ್ವಾಗತಿಸಿದರು. ಈ ವೇಳೆ ಹಸ್ತಲಾಘನ ಮಾಡದೇ, ನಮಸ್ತೆ ಮಾಡುವ ಸ್ವಾಗತ ಕೋರಿದರು.

    ಬಿಲಾವಲ್ ಭುಟ್ಟೊ ಅವರು ಸುಮಾರು 12 ವರ್ಷಗಳಲ್ಲಿ ಭಾರತಕ್ಕೆ ಭೇಟಿ ನೀಡಿದ ನೆರೆಯ ದೇಶದ ಮೊದಲ ಹಿರಿಯ ನಾಯಕರಾಗಿದ್ದಾರೆ. ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರ ನಡುವಿನ ದ್ವಿಪಕ್ಷೀಯ ಸಂಬಂಧದ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ.

    ಇದನ್ನೂ ಓದಿ: ಟರ್ಕಿ ಶೃಂಗಸಭೆಯಲ್ಲಿ ರಷ್ಯಾದ ಪ್ರತಿನಿಧಿಗೆ ಹೊಡೆದ ಉಕ್ರೇನಿಯನ್​ ಸಂಸದ; ವಿಡಿಯೋ ವೈರಲ್

    ಮಾಧ್ಯಮಗಳೊಂದಿಗೆ ಮಾತನಾಡಿದ ಭುಟ್ಟೋ, ಶಾಂಘೈ ಸಹಕಾರ ಸಂಘದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗಿಯಾಗಲು ಗೋವಾಗೆ ಬಂದಿರುವುದಾಗಿ ತಿಳಿಸಿದರು. ಜತೆಗೆ ಈ ಸಭೆಯಲ್ಲಿ ಪಾಕಿಸ್ತಾನದ ನಿಯೋಗವನ್ನು ಮುನ್ನಡೆಸುತ್ತಿರುವುದು ನನಗೆ ಸಂತೋಷ ತಂದಿದೆ. ವಿದೇಶಾಂಗ ಸಚಿವರ ಸಭೆ ಯಶಸ್ವಿಯಾಗಲಿ ಎಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದಾರೆ.

    ಈ ಹಿಂದೆ 2011 ರಲ್ಲಿ ಪಾಕಿಸ್ತಾನದ ಆಗಿನ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖಾರ್ ಅವರು ಭಾರತಕ್ಕೆ ಭೇಟಿ ನೀಡಿದ್ದರು. ಅಂದಿನ ವಿದೇಶಾಂಗ ಸಚಿವ ಎಸ್‌.ಎಂ. ಕೃಷ್ಣ ಅವರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು.

    VIDEO| ಬೈಕ್​​ ಮೇಲೆ ಕುಳಿತು ಪರಸ್ಪರ ಅಪ್ಪಿಕೊಂಡು ಲಿಪ್​ಲಾಕ್​ ​​ಮಾಡಿದ ಹುಡುಗಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts