More

    ಗೋವಾ ಬದಲು ಅಯೋಧ್ಯೆ, ವಾರಣಾಸಿಗೆ ಹನಿಮೂನ್ ಟ್ರಿಪ್; ಕೋರ್ಟ್​ ಮೆಟ್ಟಿಲೇರಿದ ಪತ್ನಿ

    ಭೋಪಾಲ್​: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಎಂಬ ಪದ ಸಾಮಾನ್ಯವಾಗಿದ್ದು, ಕ್ಷುಲಕ ಕಾರಣಗಳಿಗೆ ವಿಚ್ಛೇದನ ಕೋರಿದಂಪತಿಗಳು ಕೋರ್ಟ್​ ಮೆಟ್ಟಿಲೇರಿರುವ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದ್ದು, ವಿಚ್ಛೇದನಕ್ಕೆ ನೀಡಲಾಗಿರುವ ಕಾರಣ ಎಲ್ಲರ ಹುಬ್ಬೇರುವಂತೆ ಮಾಡಿದೆ.

    ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಪಿಪ್ಲಾನಿ ಪ್ರದೇಶದ ಮಹಿಳೆಯೊಬ್ಬರ ಈ ವಿಚ್ಛೇದನದ ಕಥೆ ಈಗ ಬಾರೀ ಸುದ್ದಿಯಲ್ಲಿದ್ದು, ವಿಚ್ಛೇದನಕ್ಕೆ ನೀಡಲಾಗಿರುವ ಕಾರಣ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ವಿವಾಹವಾಗಿ ಐದು ತಿಂಗಳು ಕಳೆಯುವಷ್ಟರಲ್ಲಿ ವಿಚ್ಛೇದನಕ್ಕೆ ಅರ್ಜು ಸಲ್ಲಿಸಿದ್ದು, ಜನವರಿ 19 ರಂದು ಭೋಪಾಲ್ ಕೌಟುಂಬಿಕ ನ್ಯಾಯಾಲಯಕ್ಕೆ ಈ ಪ್ರಕರಣ ಬಂದಿದ್ದು, ವಿಚಾರಣೆ ಮುಂದುವರಿದಿದೆ.

    ಅರ್ಜಿಯಲ್ಲಿ ಏನಿದೆ?

    ತನ್ನ ಪತಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಉತ್ತಮ ಸಂಬಳ ಪಡೆಯುತ್ತಿದ್ದಾರೆ. ತಾನೂ ಕೂಡ ದುಡಿಯುತ್ತಿದ್ದು, ಚೆನ್ನಾಗಿ ಸಂಪಾದಿಸುತ್ತಿದ್ದೇನೆ. ಹನಿಮೂನ್‌ಗೆ ವಿದೇಶಕ್ಕೆ ಹೋಗುವುದು ನಮಗೆ ದೊಡ್ಡ ವಿಷಯವಾಗಿರಲಿಲ್ಲ. ಯಾವುದೇ ಹಣಕಾಸಿನ ಅಡಚಣೆಯೂ ಇರಲಿಲ್ಲ. ಆದರೆ ನನ್ನ ಪತಿ ವಿದೇಶಕ್ಕೆ ಕರೆದೊಯ್ಯಲು ನಿರಾಕರಿಸಿದ್ದು, ಭಾರತದಲ್ಲಿಯೇ ಒಂದು ಸ್ಥಳಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದರು.

    ಇದನ್ನೂ ಓದಿ: ಜಗದೀಶ್​ ಶೆಟ್ಟರ್​ ಘರ್​ವಾಪ್ಸಿ; ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ ಎಂದ ಡಿ.ಕೆ. ಶಿವಕುಮಾರ್

    ತಮ್ಮ ಹೆತ್ತವರನ್ನು ನೋಡಿಕೊಳ್ಳಬೇಕು ಎನ್ನುವ ಕಾರಣ ನೀಡಿದ ಪತಿ ಹನಿಮೂನ್‌ಗಾಗಿ ಗೋವಾ ಅಥವಾ ದಕ್ಷಿಣ ಭಾರತಕ್ಕೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದು, ಪತ್ನಿಯೂ ಅದನ್ನು ಒಪ್ಪಿಕೊಂಡಿದ್ದಳು. ಆದರೆ ಪ್ರವಾಸದ ಒಂದು ದಿನದ ಮೊದಲು ಪತಿ ಪತ್ನಿಗೆ ಶಾಕ್‌ ನೀಡಿದ್ದಾನೆ. ಗೋವಾ ಬದಲು ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್‌ಗಳನ್ನು ಬುಕ್‌ ಮಾಡಿರುವುದು ನನಗೆ ತಿಳಿದು ಬಂದಿದ್ದು, ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ.

    ರಾಮಮಂದಿರ ಪ್ರತಿಷ್ಠಾಪನೆ ಸಮಾರಂಭದ ಮೊದಲು ತಾಯಿ ಅಯೋಧ್ಯೆ ನೋಡಲು ಬಯಸಿದರು ಎನ್ನುವ ಕಾರಣಕ್ಕೆ ಆತ ಪತ್ನಿಯೊಂದಿಗಿನ ಗೋವಾ ಟ್ರಿಪ್‌ ಕ್ಯಾನ್ಸಲ್‌ ಮಾಡಿ ಕುಟುಂಬಸ್ಥರೊಂದಿಗೆ ಅಯೋಧ್ಯೆ ಟ್ರಿಪ್‌ಗೆ ತೆರಳಿದ್ದಾರೆ. ಈ ವೇಳೆ ಪತಿಯೊಂದಿಗೆ ಹೋದ ಪತ್ನಿ ಏನು ಮಾತನಾಡದೇ ಸುಮ್ಮನಿದ್ದಳು ಎನ್ನಲಾಗಿದೆ.

    ಧಾರ್ಮಿಕ ಕ್ಷೇತ್ರದ ಪ್ರವಾಸ ಮುಗಿಸಿಕೊಂಡ ವಾಪಸ್​ ಆದ ಬಳಿಕ ಆಕೆ ತನ್ನ ಪತಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ನನ್ನ ಪತಿ ನನಗಿಂತ ಕುಟುಂಬಸ್ಥರ ಬಗ್ಗೆ ಹೆಚ್ಚು ಕಾಳಜಿ, ಹೆಚ್ಚು ಯೋಜಿಸುತ್ತಾನೆ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ತಿಳಿಸಿದ್ದಾಳೆ. ಇತ್ತ ತನ್ನ ಪತ್ನಿ ಸಲ್ಲಿಸಿರುವ ಅರ್ಜಿಗೆ ಪ್ರತಿ ದೂರು ಸಲ್ಲಿಸಿರುವ ಪತಿ ಆಕೆ ತನ್ನೊಂದಿಗೆ ಪ್ರತಿನಿತ್ಯ ಗಲಾಟೆ ಮಾಡುತ್ತಾಳೆ ಎಂದು ತಿಳಿಸಿದ್ದಾನೆ. ಸದ್ಯ ಈ ಪ್ರಕರಣ ಬೋಪಾಲ್​ ಕೌಟುಂಬಿಕ ನ್ಯಾಯಲಯದಲ್ಲಿದ್ದು, ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts