More

    ರಾಮನಗರದಲ್ಲಿ ಚರ್ಮ, ಮಾಂಸಕ್ಕಾಗಿ ಹಸುಗಳ ಕಳ್ಳತನ

    ರಾಮನಗರ: ಬೆಳಗ್ಗೆ ಎದ್ದಾಗ ನಿತ್ಯವೂ ಹುಲ್ಲು, ಮೇವು, ಅಕ್ಕಚ್ಚು ಕೊಟ್ಟು ಸಾಕಿ ಹುಷಾರು ತಪ್ಪಿದ್ದಾಗ ವೈದ್ಯರನ್ನು ಕರೆದು ಉಪಚಾರ ಮಾಡಿಸುತ್ತಿದ್ದ ಹಸುಗಳು ಕಾಣೆ ಆದರೆ ಹೇಗೆನಿಸಬಹುದು? ಇಂತಹದೇ ಅನುಭವ ರಾಮನಗರದಲ್ಲಿನ ಈ ರೈತ ಕುಟುಂಬಕ್ಕೆ ಆಗಿದೆ.

    ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪ್ರಸ್ತಾವಕ್ಕೆ ವಿರೋಧ; ನಾಗರಿಕ ವೇದಿಕೆಯಿಂದ ಜಾಗೃತಿ ಸಮಾವೇಶ

    ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಗೀನಗೆರೆ ಗ್ರಾಮದಲ್ಲಿ ನಡೆದಿದ್ದು, ಕೊಟ್ಟಿಗೆಯಲ್ಲಿ ಕಟ್ಟಿದ್ದ 4 ಹಸುಗಳನ್ನು ಕದ್ದೊಯ್ಯಲಾಗಿದೆ. ಈ ಕಳ್ಳರು, ಹಸುಗಳನ್ನು ಕದ್ದು ಗ್ರಾಮದ ಹೊರವಲಯದಲ್ಲಿ ಹತ್ಯೆ ಮಾಡಿ ಮಾಂಸ ಹೊತ್ತೊಯ್ದಿದ್ದಾರೆ. ಕದಿಯಲಾದ ಹಸುಗಳು ರೈತ ರಾಮಯ್ಯ ಎಂಬುವವರಿಗೆ ಸೇರಿದವು.

    ಇದನ್ನೂ ಓದಿ: ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ರದ್ಧತಿ : ಪಂಚಪೀಠ ಜಗದ್ಗುರುಗಳ ವಿರೋಧ

    ತೋಟದ ಮನೆಯ ಕೊಟ್ಟಿಗೆಯಲ್ಲಿದ್ದ ಹಸುಗಳ ರಾತ್ರೋರಾತ್ರಿ ಕಳ್ಳತನ ಮಾಡಲಾಗಿದ್ದು, ಹಸುಗಳನ್ನು ಗ್ರಾಮದ ಹೊರವಲಯದಲ್ಲಿ ಕೊಂದು ಮಾಂಸ ಹಾಗೂ ಚರ್ಮವನ್ನು ಬೇರ್ಪಡಿಸಿ ಉಳಿದ ಶರೀರದ ಭಾಗಗಳನ್ನು ಅಲ್ಲೇ ಬಿಟ್ಟು ಪರಾರಿ ಆಗಿದ್ದಾರೆ.

    ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ಪರಾಮರ್ಶೆ ಸಲ್ಲದು: ಕುರುಬೂರು ಶಾಂತಕುಮಾರ್

    ಈ ಸಂಬಂಧ ರೈತ ರಾಮಯ್ಯ ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಾರು 2ಲಕ್ಷ ಬೆಲೆಬಾಳುವ ಹಸುಗಳನ್ನು ಕಳೆದುಕೊಂಡು ರಾಮಯ್ಯ ಕಂಗಾಲಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಿ, ಸೂಕ್ತ ಪರಿಹಾರ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts