More

    ಭಾರತದಲ್ಲಿ ಇಂಡೋ-ಪಾಕ್​ ಪಂದ್ಯ ಆಯೋಜಿಸುವುದು ಕಷ್ಟವಂತೆ! ಬಿಸಿಸಿಐ ಅಧ್ಯಕ್ಷ ಗಂಗೂಲಿ ಕೊಟ್ಟ ಕಾರಣವಿದು

    ನವದೆಹಲಿ: ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದ ಟಿ20 ವಿಶ್ವಕಪ್​ ಟೂರ್ನಿಯು ಆರಂಭವಾಗಿದೆ. ಆದರೆ, ಇಡೀ ವಿಶ್ವ ಕ್ರಿಕೆಟ್​ನ ಕಣ್ಣು ಅ.24ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ vs ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ನೆಟ್ಟಿದೆ. ಪಂದ್ಯಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಇಂಡೋ-ಪಾಕ್​ ಪಂದ್ಯವನ್ನು ಭಾರತದಲ್ಲಿ ಆಯೋಜಿಸುವುದು ತುಂಬಾ ಕಷ್ಟದ ಕೆಲಸ ಎಂದಿದ್ದಾರೆ.

    ಯಾಕೆ ಕಷ್ಟ ಅನ್ನುವುದಕ್ಕೆ ಉತ್ತರ ನೀಡಿರುವುದ ಗಂಗೂಲಿ, ಭಾರತದಲ್ಲಿ ಟಿಕೆಟ್​ಗೆ ಸಿಕ್ಕಾಪಟ್ಟೆ ಬೇಡಿಕೆ ಇರುತ್ತದೆ. ಇಲ್ಲಿ ಎಲ್ಲವನ್ನು ನಿರ್ವಹಿಸುವುದು ಕಷ್ಟ. ಹೀಗಾಗಿಯೇ ಟಿ20 ವಿಶ್ವಕಪ್ ಅನ್ನು ಕಿಕ್-ಸ್ಟಾರ್ಟ್​ ಮಾಡಲು ಯುನೈಟೆಡ್ ಅರಬ್ ಎಮಿರೇಟ್ಸ್​ಗೆ ಕೊಂಡೊಯ್ಯಲಾಯಿತು ಎಂದು ತಿಳಿಸಿದ್ದಾರೆ.

    ಇಂಡೋ-ಪಾಕ್​ ಕ್ರಿಕೆಟ್​ ಕದನ ಅಂದ್ರೆ ಅದೊಂದು ನಿಜವಾದ ಯುದ್ಧದಂತೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಯಾರೇ ಗೆದ್ದರೂ? ಅಥವಾ ಯಾರೇ ಸೋತರು? ಪರಿಣಾಮ ಮಾತ್ರ ತೀವ್ರವಾಗಿರುತ್ತದೆ. ಗೆದ್ದರೆ ವಿಶ್ವಕಪ್​ ಟ್ರೋಫಿ ಗೆದ್ದಷ್ಟೇ ಸಂಭ್ರಮಿಸುತ್ತಾರೆ. ಒಂದು ವೇಳೆ ಸೋತರೆ ಆಯಾ ದೇಶದ ಜನತೆಯ ಕೆಂಗಣ್ಣಿಗೆ ತಂಡಗಳು ಗುರಿಯಾಗುತ್ತವೆ. ಹೀಗಾಗಿ ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ಹಠದೊಂದಿಗೆ ಎರಡು ತಂಡಗಳು ಕಾದಾಡುತ್ತವೆ. ಹೀಗಾಗಿ ಹೈವೋಲ್ಟೇಜ್​ ಪಂದ್ಯಕ್ಕೆ ಸಾಕ್ಷಿಯಾಗಲು ಕ್ರೀಡಾಭಿಮಾನಿಗಳು ಮುಂದಿನ ಭಾನುವಾರ(ಅ.24)ಕ್ಕಾಗಿ ಕಾದು ಕುಳಿತಿದ್ದಾರೆ.

    ಐಸಿಸಿಯ ಚೊಚ್ಚಲ ಪ್ರಶಸ್ತಿಯ ಹುಡುಕಾಟದಲ್ಲಿರುವ ನಾಯಕ ವಿರಾಟ್​ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಅಲ್ಲದೆ, ಇದೇ ಅವರ ನಾಯಕತ್ವದ ಕೊನೆಯ ಟ20 ವಿಶ್ವಕಪ್​ ಕೂಡ ಆಗಿದೆ.

    ಭಾರತ-ಪಾಕಿಸ್ತಾನ ಪಂದ್ಯದೊಂದಿಗೆ ವಿಶ್ವಕಪ್ ಅನ್ನು ಪ್ರಾರಂಭಿಸುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ನಾವು ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಿದ್ದೇವೆ. ಬಹುಶಃ 2019ರಲ್ಲಿ ಅದು ನಡೆದಿಲ್ಲ. ಆದರೆ, ಚಾಂಪಿಯನ್ಸ್ ಟ್ರೋಫಿಯು ಕೂಡ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭವಾಯಿತು ಮತ್ತು ಫೈನಲ್​ನಲ್ಲೂ ಪಾಕಿಸ್ತಾನವೇ ಎದುರಾಳಿಯಾಯಿತು ಎಂದು ಗಂಗೂಲಿ ಹೇಳಿದರು.

    ಇದು ನಡೆಯುತ್ತಲೇ ಇರುತ್ತದೆ. ಏಕೆಂದರೆ ಕ್ರಿಕೆಟ್​ ಮೇಲೆ ಹೆಚ್ಚಿನ ಆಸಕ್ತಿ ಇದೆ. ಅದರಲ್ಲೂ ಇಂಡೋ-ಪಾಕ್​ ಪಂದ್ಯಗಳ ಮೇಲೆ ಭಾರೀ ಪ್ರಮಾಣದ ಆಸಕ್ತಿ ಇದೆ. ಇಂತಹ ಪಂದ್ಯಗಳನ್ನು ಸಂಘಟಿಸುವುದು ತುಂಬಾ ಕಷ್ಟವಲ್ಲ. ನಾನು ಆಡುವಾಗಲೂ ಇದು ಕಷ್ಟಕರವಾದ ಪಂದ್ಯವೆಂದು ಅನಿಸಲಿಲ್ಲ. ಇಂಡೋ-ಪಾಕ್​ ಪಂದ್ಯಗಳಲ್ಲಿ ಬೇರೆ ರೀತಿಯ ಒತ್ತಡವಿದೆ ಎಂದು ಜನರು ಹೇಳುತ್ತಿದ್ದರು. ನಾನು ಎಂದಿಗೂ ಆ ರೀತಿ ಅನುಭವಿಸಲಿಲ್ಲ ಎಂದು ಹೇಳಿದರು.

    ಇಂಡೋ-ಪಾಕ್​ ಪಂದ್ಯವನ್ನು ಭಾರತದಲ್ಲಿ ಆಯೋಜಿಸುವುದು ಇನ್ನೂ ಕಷ್ಟಕರವಾಗಿದೆ. ಏಕೆಂದರೆ, ಟಿಕೆಟ್‌ಗಳಿಗೆ ತುಂಬಾ ಬೇಡಿಕೆಯಿದೆ. ಆ ಪಂದ್ಯದ ಮೇಲಿನ ಗಮನವು ನಮ್ಮಲ್ಲಿ ವಿಭಿನ್ನವಾಗಿದೆ ಎಂದು ತಿಳಿಸಿದರು. ಅಲ್ಲದೆ, ನಮ್ಮ ದೇಶದಲ್ಲಿ ಕ್ರಿಕೆಟ್ ಬಗ್ಗೆ ತುಂಬಾ ಉತ್ಸಾಹವಿದೆ. ಪ್ರತಿಯೊಬ್ಬರೂ ಉತ್ತಮ ಆಟಗಾರರಾಗಲು ಬಯಸುತ್ತಾರೆ. ಹಾಗಾಗಿ ಅದು ಯಾವಾಗಲೂ ತುಂಬಾ ಆರೋಗ್ಯಕರವಾಗಿರುತ್ತದೆ ಎಂದು ಗಂಗೂಲಿ ಹೇಳಿದರು. (ಏಜೆನ್ಸೀಸ್​)

    ಇಂಡೋ-ಪಾಕ್​ ಕ್ರಿಕೆಟ್​ ಕದನಕ್ಕೆ ದಿನಗಣನೆ: ಮಹತ್ವದ ನಿರ್ಧಾರ ಮಾಡಿದ ಸಾನಿಯಾ ಮಿರ್ಜಾ..!

    ಇಂದಿನಿಂದ ಚುಟುಕು ಕ್ರಿಕೆಟ್ ವಿಶ್ವ ಸಮರ; ವೆಸ್ಟ್ ಇಂಡೀಸ್-ಇಂಗ್ಲೆಂಡ್ ಕದನ

    ಇಂದಿನಿಂದ ಚುಟುಕು ಕ್ರಿಕೆಟ್ ವಿಶ್ವ ಸಮರ; ಆಸ್ಟ್ರೇಲಿಯಾಕ್ಕೆ ದಕ್ಷಿಣ ಆಫ್ರಿಕಾ ಸವಾಲು

    ಆಟೋದಲ್ಲಿ ಬರುತ್ತೆ ಪಡಿತರ!; ಮನೆ ಬಾಗಿಲಿಗೇ ಪೂರೈಕೆ, ಆಂಧ್ರ ಮಾದರಿ ಜಾರಿಗೆ ಸಿದ್ಧತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts