More

    ಪೆಟ್ರೋಲ್​-ಡೀಸೆಲ್​ ಅಗ್ಗ; ಯಾವ ರಾಜ್ಯದಲ್ಲಿ ದರ ಎಷ್ಟಿದೆ?

    ನವದೆಹಲಿ: ರಾಷ್ಟ್ರೀಯ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟಿಸುವ ಮುನ್ನ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಶುಭ ಸುದ್ದಿ ನೀಡಿದ್ದು, ಪೆಟ್ರೋಲ್​ ಹಾಗೂ ಡೀಸೆಲ್​ ದರವನ್ನು ಎರಡು ರೂಪಾಯಿಗಳಷ್ಠು ಇಳಿಸಿ ಆದೇಶ ಹೊರಡಿಸಿದೆ.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಿಂದ ನಾಗರಿಕರಿಗೆ ಲಾಭವಾಗಲಿದ್ದು, ಪ್ರವಾಸೋದ್ಯಮವನ್ನು ಹೆಚ್ಚು ಉತ್ತೇಜಿಸುತ್ತದೆ. VAT, ಸ್ಥಳೀಯ ಶುಲ್ಕಗಳಾದ ಸೆಸ್ ಮತ್ತು ಸರಕು ಸಾಗಣೆ ಶುಲ್ಕಗಳಲ್ಲಿನ ವ್ಯತ್ಯಾಸದಿಂದಾಗಿ ಇಂಧನ ಬೆಲೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಹಾಗಾದರೆ ನಿಮ್ಮ ನಗರದಲ್ಲಿ ಒಂದು ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ನೋಡಿ…

    ಇದನ್ನೂ ಓದಿ: ವಾಹನ ಸವಾರರಿಗೆ ಶುಭಸುದ್ದಿ​; ಪೆಟ್ರೋಲ್​-ಡೀಸೆಲ್​ ದರ ಇಳಿಕೆ

    ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕ್ರಮವಾಗಿ 4.72 ಮತ್ತು 87.62 ರೂಪಾಯಿಗಳಷ್ಠು ಆಗಿದೆ. ಉತ್ತರಪ್ರದೇಶದ ಲಖನೌನಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 96.57 ರೂ.ನಿಂದ 94.65ರೂ.ಗೆ, ಡೀಸೆಲ್ ಬೆಲೆ 89.37 ರೂ.ನಿಂದ 87.41 ರೂ.ಗೆ ಇಳಿದಿದೆ. ಕಲ್ಕತ್ತಾದಲ್ಲಿ ಪೆಟ್ರೋಲ್ ದರ 106.03ರೂ.ನಿಂದ 103.94 ರೂ.ಗೆ ಇಳಿಕೆಯಾಗಿದ್ದು, ಡೀಸೆಲ್ ದರ ಲೀಟರ್​ಗೆ 92.76 ರೂ.ನಿಂದ 90.76 ರೂ.ಗೆ ಇಳಿಕೆಯಾಗಿದೆ.

    ಮುಂಬೈನಲ್ಲಿ ಪೆಟ್ರೋಲ್ 106.31ರೂ.ನಿಂದ 104.21ರೂ.ಗೆ ಹಾಗೂ ಡೀಸೆಲ್ ಲೀಟರ್​ಗೆ 94.27 ರೂ.ನಿಂದ 92.15 ರೂ.ಗೆ ಇಳಿಕೆ ಕಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 101.94 ರೂಪಾಯಿ ಹಾಗೂ ಡೀಸೆಲ್ ಬೆಲೆ 87.89 ರೂಪಾಯಿ ಇದ್ದು, ಪ್ರಸ್ತುತ ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆ ಆಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts