More

    ಪೆಟ್ರೋಲ್​, ಡೀಸೆಲ್​ ಬೆಲೆ ಕಡಿತ: ತೈಲ ಕಂಪನಿಗಳ ಷೇರು ಬೆಲೆ ಕುಸಿತವಾಗಿದ್ದೇಕೆ?

    ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ ತಲಾ 2 ರೂಪಾಯಿ ಕಡಿತಗೊಳಿಸಿದ ನಂತರ ತೈಲ ಮಾರುಕಟ್ಟೆ ಕಂಪನಿಗಳ (ಒಎಂಸಿ) ಷೇರುಗಳ ಬೆಲೆ ಶುಕ್ರವಾರದ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ.

    ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಷೇರುಗಳ ಬೆಲೆಗಳು ಶುಕ್ರವಾರ ಕುಸಿತ ಕಂಡವು.

    ಪೆಟ್ರೋಲ್ ಮತ್ತು ಡೀಸೆಲ್‌ನ ಚಿಲ್ಲರೆ ಬೆಲೆಗಳನ್ನು ಕಡಿತಗೊಳಿಸುವ ಸರ್ಕಾರದ ನಿರ್ಧಾರವು ಕಂಪನಿಗಳ ಲಾಭದ ಪ್ರಮಾಣವನ್ನು ಘಾಸಿಗೊಳಿಸಬಹುದೆಂಬ ಭಯದಿಂದ ಹೂಡಿಕೆದಾರರು ಶುಕ್ರವಾರ ತೈಲ ಮಾರುಕಟ್ಟೆ ಕಂಪನಿಗಳ ಷೇರುಗಳನ್ನು ದೂರವಿಟ್ಟರು.

    ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಷೇರುಗಳ ಬೆಲೆ 6.29 ಶೇಕಡಾ ಕುಸಿದು 468.70 ರೂ. ತಲುಪಿತು. ದಿನದ ವಹಿವಾಟಿನ ಅವಧಿಯಲ್ಲಿ ಶೇ. 9.82ರಷ್ಟು ಕುಸಿದು 451 ರೂ.ಕ್ಕೆ ಈ ಷೇರು ತಲುಪಿತ್ತು.

    ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಷೇರುಗಳ ಬೆಲೆ ಶೇ. 5.46ರಷ್ಟು ಕುಸಿದು 161.15 ರೂ. ತಲುಪಿತು. ದಿನದ ವಹಿವಾಟಿ ನಡುವೆ ಈ ಷೇರು ಬೆಲೆ ಶೇ.9.88ರಷ್ಟು ಕುಸಿದು ರೂ. 153.60ಕ್ಕೆ ತಲುಪಿತ್ತು.

    ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಷೇರು ಬೆಲೆ ಶೇ 3.74 ರಷ್ಟು ಕುಸಿದು ರೂ 586.25 ಕ್ಕೆ ತಲುಪಿತು. ದಿನದ ವಹಿವಾಟಿನ ಅವಧಿಯಲ್ಲಿ ಶೇ. 8.20 ರಷ್ಟು ಕುಸಿದು 559.05 ಕ್ಕೆ ತಲುಪಿತ್ತು.

    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಅಂದಾಜು 2 ವರ್ಷಗಳಲ್ಲಿ ದರಗಳಲ್ಲಿ ಇದೇ ಮೊದಲ ಪರಿಷ್ಕರಣೆಯಾಗಿದೆ.

    ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ ಈ ಹಿಂದೆ ಲೀಟರ್‌ಗೆ 96.72 ರೂ.ಗೆ ಹೋಲಿಸಿದರೆ ಈಗ 94.72 ರೂ ಆಗಿದೆ. ಡೀಸೆಲ್ ಬೆಲೆ ಪ್ರಸ್ತುತ ರೂ 89.62 ರಿಂದ ರೂ 87.62ಕ್ಕೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆ ತಿಳಿಸಿದೆ.

    ದುರ್ಬಲ ಜಾಗತಿಕ ಪ್ರವೃತ್ತಿ, ವಿದೇಶಿ ನಿಧಿ ಹೊರಹರಿವು: ಷೇರುಪೇಟೆ ಕುಸಿತದ ನಡುವೆಯೂ ಸ್ಮಾಲ್​ ಕ್ಯಾಪ್​ ಸೂಚ್ಯಂಕ ಏರಿಕೆಯಾಗಿದ್ದೇಕೆ?

    ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್​ ಷೇರು ಬೆಲೆ ಏಕಾಏಕಿ 14% ಏರಿಕೆ: ರಿಲಯನ್ಸ್​ ಪವರ್​ ಅಪ್ಪರ್​ ಸರ್ಕ್ಯೂಟ್ ಹಿಟ್ ಆಗಿದ್ದೇಕೆ?

    ಷೇರು ಮಾರುಕಟ್ಟೆಯಲ್ಲಾಗಿದೆ ಕರೆಕ್ಷನ್​: ಈ ಲಾರ್ಜ್​ ಕ್ಯಾಪ್​ ಖರೀದಿಸಲು 28 ಮಾರುಕಟ್ಟೆ ತಜ್ಞರ ಸಲಹೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts