More

    VIRAL VIDEO | ಪ್ರಧಾನಿ, 2019ರಲ್ಲೇ ಈ ಬಾರಿಯ ಅವಿಶ್ವಾಸ ಗೊತ್ತುವಳಿ ಮಂಡನೆ ಬಗ್ಗೆ ಭವಿಷ್ಯ ನುಡಿದಿದ್ರಾ?!

    ನವದೆಹಲಿ: ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಎರಡು ನೋಟಿಸ್‌ಗಳನ್ನು ಸಲ್ಲಿಸಿದ ಒಂದೇ ದಿನದಲ್ಲಿ, 2019 ರಲ್ಲಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆ ವೈರಲ್ ಆಗಿದೆ. ಇದನ್ನು ಬಿಜೆಪಿಯ ಅನೇಕರು ಇದನ್ನು ಪ್ರಧಾನಿ ಮೋದಿ “ಭವಿಷ್ಯ” ನುಡಿದಿದ್ದಾರೆ ಎಂದು ಕರೆಯುತ್ತಿದ್ದಾರೆ.

    ಇದನ್ನೂ ಓದಿ: ಅಧಿಕಾರದ ದುರಾಸೆ ರಾಷ್ಟ್ರೀಯ ಹಿತಾಸಕ್ತಿಯನ್ನು ಮೀರಬಾರದು; ಹಿಂದಿನ ಸರ್ಕಾರ ಬ್ಯಾಂಕ್​ ವ್ಯವಸ್ಥೆ ನಾಶಗೊಳಿಸಿತ್ತು: ಪ್ರಧಾನಿ ಮೋದಿ

    ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ 7 ಫೆಬ್ರವರಿ 2019ರ ವೀಡಿಯೊದಲ್ಲಿ ಪ್ರಧಾನಿ ಮೋದಿ, “2023ರಲ್ಲಿ ಮತ್ತೊಂದು ಅವಿಶ್ವಾಸ ಗೊತ್ತುವಳಿ ಮಂಡನೆಗೆ ವಿರೋಧ ಪಕ್ಷಗಳು ಸಿದ್ಧರಾಗಬೇಕು” ಎಂದು ಪ್ರಧಾನಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋ ಈಗ ಟ್ವಿಟರ್ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಬಿಜೆಪಿ ಪಕ್ಷದವರು ಪ್ರಧಾನಿ ಭವಿಷ್ಯ ನುಡಿದಿದ್ದಾರೆ ಎಂದಿದ್ದಾರೆ.

    ಅಂದು ಪ್ರಧಾನಿ ಮೋದಿ, “ನಾನು ನನ್ನ ಶುಭಾಶಯಗಳನ್ನು ಹೇಳಲು ಬಯಸುತ್ತೇನೆ. 2023ರಲ್ಲಿ ಮತ್ತೊಮ್ಮೆ ಅವಿಶ್ವಾಸ ನಿರ್ಣಯವನ್ನು ತರಲು ಅವಕಾಶ ಇರುವಷ್ಟು ತಯಾರಿ ಮಾಡಿಕೊಳ್ಳಿ” ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಆಡಳಿತ ಪಕ್ಷದ ಸಂಸದರಿಂದ ನಗು ಮತ್ತು ಡೆಸ್ಕ್ ಡಂಪಿಂಗ್ ಕೇಳಿಬಂದಿತ್ತು.

    ಇದನ್ನೂ ಓದಿ: ಪ್ರಧಾನಿ ಮೋದಿ ಭೇಟಿ ಮಾಡಿ ತೀವ್ರ ಕುತೂಹಲ ಮೂಡಿಸಿದ ತೇಜಸ್ವಿನಿ ಅನಂತ್​ ಕುಮಾರ್!

    “ಇದು ಸಮರ್ಪಣ ಭಾವ. ಇಬ್ಬರು ಸಂಸದರಿಂದ ನಾವು ಅಧಿಕಾರದಲ್ಲಿ ಕುಳಿತಿದ್ದೇವೆ. ಅಹಂಕಾರದ ಫಲಿತಾಂಶವೆಂದರೆ 400 ರಿಂದ 40 ಸೀಟುಗಳಿಗೆ ಇಳಿದಿದ್ದೀರಿ. ಇಂದು ನೀವು ಎಲ್ಲಿದ್ದೀರಿ ನೋಡಿ…” ಎಂದು ಕಾಂಗ್ರೆಸ್ ಅನ್ನು ಹೆಸರಿಸದೆ ವ್ಯಂಗ್ಯವಾಡಿದ್ದರು.

    ಪ್ರಧಾನಿ ಹೇಳಿಕೆ ನೀಡಿದಾಗ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಪಕ್ಷದ ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು. 2018 ರಲ್ಲಿ, ಎನ್ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ಅನೇಕ ವಿರೋಧ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರವು ಅವಿಶ್ವಾಸ ಮತವನ್ನು ಗೆದ್ದಿತು.

    ಇದನ್ನೂ ಓದಿ: VIDEO| ದೆಹಲಿ ವಿಶ್ವವಿದ್ಯಾಲಯ ಶತಮಾನೋತ್ಸವ; OTT ಕುರಿತು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಚರ್ಚೆ3

    ಹೇಳಿಕೆಯ ವೀಡಿಯೊವನ್ನು ಸರ್ಕಾರದ ಮೂಲಗಳು ಹಂಚಿಕೊಂಡಿದ್ದು, ಇದನ್ನು ಪ್ರಧಾನಿ ಮೋದಿ ಅವರ “ಭವಿಷ್ಯ” ಎಂದು ಕರೆದಿದ್ದಾರೆ ಎಂದೇ ಬಿಂಬಿಸಲಾಗುತ್ತಿದೆ. ಈ ಬಾರಿ ಮಣಿಪುರದಲ್ಲಿ ಬಿಕ್ಕಟ್ಟಿನ ನಡುವೆಯೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ವಿರೋಧ ಪಕ್ಷಗಳ INDIA ಒಕ್ಕೂಟದ ಬೆಂಬಲಿತ ನಿರ್ಣಯವು ಲೋಕಸಭೆಯಲ್ಲಿ ಸೋಲುವ ಸಾಧ್ಯತೆಯಿದೆ. ಅಲ್ಲಿ ಸರ್ಕಾರವು ಹೆಚ್ಚಿನ ಬಹುಮತವನ್ನು ಹೊಂದಿದೆ. ಈ ಕ್ರಮವು ಮಣಿಪುರದ ಬಗ್ಗೆ ಹೇಳಿಕೆ ನೀಡುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸುವ ಗುರಿಯನ್ನು ಹೊಂದಿದೆ ಎಂದು ನಾಯಕರು ಹೇಳಿದ್ದಾರೆ.

    ಇದನ್ನೂ ಓದಿ: ಫ್ರಾನ್ಸ್​ನಲ್ಲೂ ಭಾರತದ UPI ಬಳಕೆ, ಐಫೆಲ್​ ಟವರ್​ನಿಂದಲೇ ಆರಂಭಿಸಲಾಗುವುದು: ಪ್ರಧಾನಿ ಮೋದಿ ಹೇಳಿಕೆ

    ಜುಲೈ 20ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳು ಸಂಸತ್ತಿನ ಉಭಯ ಕಲಾಪದಲ್ಲಿ ನಿರಂತರ ಜಗಳಕ್ಕೆ ಪ್ರಮುಖ ಕಾರಣವಾಗಿವೆ. ಅಧಿವೇಶನದ ಒಂದು ದಿನ ಮೊದಲು, ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಭಯಾನಕ ವೀಡಿಯೊ ವೈರಲ್ ಆಗಿದ್ದು, ರಾಷ್ಟ್ರವ್ಯಾಪಿ ಆಕ್ರೋಶವನ್ನು ಕೆರಳಿಸಿತ್ತು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts