

ವಿಜಯಪುರ: ಹಣ, ಆಸ್ತಿ, ಅಂತಸ್ತು, ಅಧಿಕಾರ.. ಇವು ಯಾವಾಗ ಯಾರನ್ನು ಬೇಕಾದರೂ ಶತ್ರುವಾಗುವಂತೆ ಮಾಡಬಲ್ಲದು. ಇಲ್ಲೊಂದು ಕಡೆ ಭೂವಿವಾದವೇ ವಯೋವೃದ್ಧರೊಬ್ಬರಿಗೆ ಸಾವಾಗಿ ಪರಿಣಮಿಸಿದ್ದು, ದಾಯಾದಿಗಳೇ ಕೊಲೆಗಡುಕರಾಗಿ ಬದಲಾಗಿದ್ದಾರೆ.
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ 60 ವರ್ಷದ ವಿಠ್ಠಲ ಹೊಸಮನಿ ಕೊಲೆಯಾಗಿರುವ ವೃದ್ಧ. ಹಾಡಹಗಲೇ ದಾಯಾದಿಗಳು ಇವರ ಮನೆಗೆ ನುಗ್ಗಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಆಸ್ತಿ ವಿಚಾರವಾಗಿ ದ್ವೇಷ ಹೊಂದಿದ್ದ ದಾಯಾದಿಗಳು ಮನೆಗೆ ನುಗ್ಗಿ ಹರಿತವಾದ ಮಾರಕಾಸ್ತ್ರದಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಬಲೇಶ್ವರ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.