ಶಾಲೆಗೆಂದು ಹೋಗಿದ್ದ ವಿದ್ಯಾರ್ಥಿ ಮನೆಗೆ ಮರಳಲೇ ಇಲ್ಲ; ಸಿಕ್ಕಿದ್ದು ಶವವಾಗಿ..

water death
ಸಾಂದರ್ಭಿಕ ಚಿತ್ರ
Published on

ಚಿಕ್ಕಮಗಳೂರು: ರಾಜ್ಯದಲ್ಲಿ 1ನೇ ಇಯತ್ತೆಯಿಂದ 5ರ ವರೆಗೆ ಭೌತಿಕ ತರಗತಿ ನಡೆಸಲು ಅನುಮತಿ ಸಿಕ್ಕಿ ಶಾಲೆಗಳು ಆರಂಭವಾದ ಮೊದಲ ದಿನವೇ ದುರಂತವೊಂದು ಸಂಭವಿಸಿದೆ. ಶಾಲೆಗೆಂದು ಹೇಳಿ ಹೋಗಿದ್ದ ಬಾಲಕನೊಬ್ಬ ಮನೆಗೆ ಮರಳದೆ, ಕೊನೆಗೆ ಶವವಾಗಿ ಪತ್ತೆಯಾದ ಘಟನೆಯೊಂದು ಜರುಗಿದೆ.

ಚಿಕ್ಕಮಗಳೂರಿನ ಚಂದ್ರಕಟ್ಟೆಯ 11 ವರ್ಷದ ಬಾಲಕ ಸುಹಾಸ್​ ಸಾವಿಗೀಡಾಗಿರುವ ವಿದ್ಯಾರ್ಥಿ. ಈತ ಇಲ್ಲಿನ ಕೆಂಪನಹಳ್ಳಿಯ ಸರ್ಕಾರಿ ಶಾಲೆಯ ವಿದ್ಯಾರ್ಥಿ. ಇಂದು ಶಾಲೆಗೆ ಹೋಗುವುದಾಗಿ ಹೇಳಿದ್ದ ಬಾಲಕ ಮನೆಗೆ ಜೀವಂತವಾಗಿ ಮರಳಬೇಕಿತ್ತು. ಆದರೆ ಮನೆಯವರು ಮಗನ ಶವವನ್ನು ನೋಡುವಂತಾಗಿದೆ.

ಸುಹಾಸ್ ಚಂದ್ರಕಟ್ಟೆಯ ಸಮೀಪ ಇರುವ ಕೆರೆಯಲ್ಲಿ ಮಧ್ಯಾಹ್ನದ ನಂತರ ನೀರಿನಲ್ಲಿ ಮೋಜು ಮಾಡಲು ಈಜಿಗೆಂದು ಧುಮುಕಿದ್ದ. ಆದರೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಬಾಲಕನ ಶವವನ್ನು ನೀರಿನಿಂದ ಹೊರತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net