More

    ‘ರೈಡರ್​​’ ಮೋಷನ್​ ಪೋಸ್ಟರ್​ಗೆ ಒಂದು ಮಿಲಿಯನ್​ ಹಿಟ್ಸ್​

    ನಿಖಿಲ್​ ಕುಮಾರ್​ ಅಭಿನಯದ ‘ರೈಡರ್​’ ಚಿತ್ರದ ಪೋಸ್ಟರ್​ ಶುಕ್ರವಾರ ಸಂಜೆ ಆರಕ್ಕೆ ಯೂಟ್ಯೂಬ್​ನ ಲಹರಿ ಆಡಿಯೋ ಚಾನಲ್​ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಬಿಡುಗಡೆಯಾದ 18 ಗಂಟೆಗಳಲ್ಲಿ ಒಂದು ಮಿಲಿಯನ್ ಹಿಟ್ಸ್​ ಕಂಡಿರುವುದರ ಜತೆಗೆ, ಸೋಷಿಯಲ್​ ಮೀಡಿಯಾದಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡ್​ ಆಗುತ್ತಿದೆ.

    ಇದನ್ನೂ ಓದಿ: ವಿಷ್ಣುವರ್ಧನ್​ ಅವರ ನೆನಪಲ್ಲಿ 500 ಗಿಡ ನೆಟ್ಟ ವಿಷ್ಣು ಸೇನಾ

    ‘ಎನ್​ಕೆ 04’ ಎಂಬ ಹೆಸರಿನಲ್ಲಿ ಈ ವರ್ಷದ ಆರಂಭದಲ್ಲಿ ಪ್ರಾರಂಭವಾಗಿದ್ದ ನಿಖಿಲ್​ ಕುಮಾರ್​ ಅಭಿನಯದ ಹೊಸ ಚಿತ್ರದ ಹೆಸರು, ಫಸ್ಟ್​ ಲುಕ್​ ಮತ್ತು ಮೋಷನ್​ ಪೋಸ್ಟರ್​ ಇದೇ ಶುಕ್ರವಾರದಂದು ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿ ಬಂದಿತ್ತು. ಅದರಂತೆ ಶುಕ್ರವಾರ ಸಂಜೆ ಬಿಡುಗಡೆಯಾದ ಈ ಮೋಷನ್​ ಪೋಸ್ಟರ್​ ವೈರಲ್​ ಆಗಿದೆ. ಇದೊಂದು ಪಕ್ಕಾ ಆಕ್ಷನ್​ ಪೋಸ್ಟರ್​ ಆಗಿದ್ದು, ನಿಖಿಲ್​ ಅಭಿಮಾನಿಗಳಿಗೆ ಖುಷಿಕೊಟ್ಟಿದೆ.

    ‘ರೈಡರ್​’ ಚಿತ್ರವನ್ನು ಲಹರಿ ಫಿಲಂಸ್​ನಡಿ ಚಂದ್ರು ಮನೋಹರನ್​ ನಿರ್ಮಿಸುತ್ತಿದ್ದು, ತೆಲುಗಿನ ಜನಪ್ರಿಯ ನಿರ್ದೇಶಕ ವಿಜಯ್​ ಕುಮಾರ್​ ಕೊಂಡಾ ಅವರು ಕಥೆ, ಚಿತ್ರಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತವಿದ್ದು, ಶ್ರೀಷ ಕೂದುವಳ್ಳಿ ಛಾಯಾಗ್ರಹಣ ಮಾಡುತ್ತಿದ್ದಾರೆ.

    ಈಗಾಗಲೇ ಅರ್ಧದಷ್ಟು ಮುಗಿದಿರುವ ‘ರೈಡರ್​’ ಚಿತ್ರದ ಚಿತ್ರೀಕರಣವನ್ನು ಲಾಕ್​ಡೌನ್​ ಕಾರಣಕ್ಕೆ ನಿಲ್ಲಿಸಲಾಗಿದೆ. ಕರೊನಾ ಹಾವಳಿ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ, ಚಿತ್ರೀಕರಣ ಪುನಃ ಪ್ರಾರಂಭವಾಗಲಿದೆ. ಬಹುಶಃ ಅಕ್ಟೋಬರ್​ ಕೊನೆಗೆ ಅಥವಾ ನವೆಂಬರ್​ನಲ್ಲಿ ಈ ಚಿತ್ರದ ಚಿತ್ರೀಕರಣ ಪುನಃ ಪ್ರಾರಂಭವಾಗುವ ಸಾಧ್ಯತೆ ಇದೆ.

    ಇದನ್ನೂ ಓದಿ: ‘ಬಾಹುಬಲಿ’ ದಾಖಲೆಯನ್ನು ಮುರಿಯತ್ತಾ ‘ಆದಿಪುರುಷ್​’?

    ನಿಖಿಲ್​ಗೆ ನಾಯಕಿಯಾಗಿ ಕಾಶ್ಮೀರಾ ಪರದೇಶಿ ನಟಿಸುತ್ತಿದ್ದು, ಕಿರುತೆರೆಯಲ್ಲಿ ಹೆಸರು ಮಾಡಿರುವ ಸಂಪದ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ರಾಜೇಶ್​ ನಟರಂಗ, ಚಿಕ್ಕಣ್ಣ, ಸಂಪದ, ಶಿವರಾಜ್​ ಕೆ.ಆರ್​. ಪೇಟೆ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಕಂಗನಾ ಬಿಲ್ಡಿಂಗ್​ ರಿಪೇರಿ ಮಾಡಿಸೋಕೆ ಅಂಬಾನಿಗಳು 200 ಕೋಟಿ ಕೊಡ್ತಾರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts