More

    ವಿಷ್ಣುವರ್ಧನ್​ ಅವರ ನೆನಪಲ್ಲಿ 500 ಗಿಡ ನೆಟ್ಟ ವಿಷ್ಣು ಸೇನಾ

    ಬೆಂಗಳೂರು: ಡಾ. ವಿಷ್ಣುವರ್ಧನ್​ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ 500 ಗಿಡಗಳನ್ನು ನೆಡುವುದಾಗಿ ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್​ ಹೇಳಿಕೊಂಡಿದ್ದರು. ಅದರಂತೆ, ಶುಕ್ರವಾರ ಶ್ರೀನಿವಾಸ್​ ಮತ್ತು ಸಂಗಡಿಗರು, 500 ಗಿಡಗಳನ್ನು ನೆಟ್ಟು ಸಾರ್ಥಕ ಕೆಲಸ ಮಾಡಿದ್ದಾರೆ.

    ಇದನ್ನೂ ಓದಿ: ಕಾಮಿಡಿ ಕಿಲಾಡಿಗಳು ಮತ್ತೆ ಬರ್ತಿದ್ದಾರೆ

    ವಿಷ್ಣುವರ್ಧನ್​ ಅವರ ನೆನಪಲ್ಲಿ 500 ಗಿಡ ನೆಟ್ಟ ವಿಷ್ಣು ಸೇನಾ

    ಈ ಬಾರಿ ವಿಷ್ಣುವರ್ಧನ್​ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ರಾಜ್ಯಾದ್ಯಂತ 70 ಸಾವಿರ ಗಿಡಗಳನ್ನು ನೆಡಬೇಕು ಎಂದು ಡಾ.ವಿಷ್ಣು ಸೇನಾ ಸಮತಿ ಯೋಜನೆಯೊಂದನ್ನು ಹಾಕಿಕೊಂಡಿದೆ. ಈಗಾಗಲೇ ಈ ನಿಟ್ಟಿನಲ್ಲಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್​ ಅಭಿಮಾನಿಗಳಿಗೆ ಕರೆ ನೀಡಿದ್ದು, ರಾಜ್ಯದ್ಯಂತ 12 ಸಾವಿರ ಗಿಡಗಳನ್ನು ನೆಡಲಾಗಿದೆ.

    ಇನ್ನು ಸೆಪ್ಟೆಂಬರ್​ 11ರಂದು ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಅವರು 500 ಗಿಡಗಳನ್ನು ನೆಡುವುದಾಗಿ ಹೇಳಿದ್ದರು. ಇದಕ್ಕಾಗಿ ಅಲ್ಲಿ ಗುಂಡಿಗಳನ್ನು ಸಹ ತೆಗೆಯಲಾಗಿತ್ತು. ಶುಕ್ರವಾರ ವಿಶ್ವವಿದ್ಯಾಲಯದ ಆವರಕ್ಕೆ ಹೋದ ಶ್ರೀನಿವಾಸ್​ ಮತ್ತು ವಿಷ್ಣುವರ್ಧನ್​ ಅಭಿಮಾನಿಗಳು ಹೋಗಿ ಗಿಡ ನೆಟ್ಟು ಬಂದಿದ್ದಾರೆ. ಮುಂದಿನ ಶುಕ್ರವಾರ, ಅಂದರೆ ಸೆಪ್ಟೆಂಬರ್​ 18ರಂದು, ಅಲ್ಲೇ ಇನ್ನೂ 200 ಗಿಡಗಳನ್ನು ನೆಡಲಾಗುವುದು ಎಂದು ವೀರಕಪುತ್ರ ಶ್ರೀನಿವಾಸ್​ ತಿಳಿಸಿದ್ದಾರೆ.

    ಇದನ್ನೂ ಓದಿ: ನಮ್ ಲೈಫೇ ಬರ್ನ್ ಆಗ್ಹೋಯ್ತು ಎಂದು ಅಲವತ್ತುಕೊಂಡ ರಾಗಿಣಿ: ವಿಡಿಯೋ ವೈರಲ್

    ಇನ್ನು ವಿಷ್ಣುವರ್ಧನ್​ ಅವರ ಹುಟ್ಟುಹಬ್ಬಕ್ಕೆ ಕೇವಲ ಆರು ದಿನಗಳು ಮಾತ್ರ ಬಾಕಿ ಇದ್ದು, ವಿಷ್ಣುವರ್ಧನ್​ ಅವರ ಅಭಿಮಾನಿಗಳಾಗಿ ಅವರ ಅಭಿಮಾನಕ್ಕೆ ಕನಿಷ್ಠ 20 ಸಾವಿರ ಸಸಿಗಳನ್ನಾದರೂ ನೆಟ್ಟರೆ, ಶ್ರಮ ಸಾರ್ಥಕ ಎಂದು ಶ್ರೀನಿವಾಸ್​ ಹೇಳಿದ್ದಾರೆ.

    ರಾಕುಲ್​ ಸೇರಿ ಮೂವರು ನಟಿಯರ ಹೆಸರು ಹೇಳಿದ ರಿಯಾ: ಎನ್​ಸಿಬಿ ಪಟ್ಟಿಯಲ್ಲಿದೆ ಸ್ಪೋಟಕ ಮಾಹಿತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts