More

    ೯೦ರ ದಶಕದ ಪ್ರೇಮಕಥೆ ‘ವಿಷ್ಣು ಪ್ರಿಯಾ’; ಟೀಸರ್​ ಬಿಡುಗಡೆ

    ಬೆಂಗಳೂರು: ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್​ ಅಭಿನಯದ ‘ವಿಷ್ಣು ಪ್ರಿಯಾ’ ಕಳೆದ ವರ್ಷವೇ ಬಿಡುಗಡೆಯಾಗಿಬೇಕಿತ್ತು. ಆದರೆ, ಅಷ್ಟರಲ್ಲಿ ಅವರದ್ದೇ ‘ರಾಣ’ ಬಿಡುಗಡೆಯಾದ್ದರಿಂದ ಚಿತ್ರ ಮುಂದೂಡಲ್ಪಟ್ಟು, ಈ ಜೂನ್​ನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಶ್ರೇಯಸ್​ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಟೀಸರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ಯೋಗಿ ಈಗ ‘ರೋಜಿ’; ‘ಲೂಸ್​ ಮಾದ’ನ 50ನೇ ಚಿತ್ರಕ್ಕೆ ಚಾಲನೆ

    ೯೦ರ ದಶಕದ ಪ್ರೇಮಕಥೆ 'ವಿಷ್ಣು ಪ್ರಿಯಾ'; ಟೀಸರ್​ ಬಿಡುಗಡೆಇಲ್ಲಿ ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ತೊಂಭತ್ತರ ದಶಕದ ಪ್ರೇಮಕಥೆ ಇರುವ ಈ ಚಿತ್ರವನ್ನು ಕೆ.ಮಂಜು ಅವರೇ ನಿರ್ಮಾಣ ಮಾಡಿದ್ದಾರೆ. ಶ್ರೇಯಸ್​ಗೆ ನಾಯಕಿಯಾಗಿ ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯಿಸಿದ್ದು, ಈ ಚಿತ್ರದ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಲಯಾಳಂನ ವಿ.ಕೆ.ಪ್ರಕಾಶ್ ಈ ಚಿತ್ರದ ನಿರ್ದೇಶಕರು. ಇನ್ನು, ‘ವಿಜಯಾನಂದ’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಗೋಪಿಸುಂದರ್ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದಾರೆ.

    ‘ವಿಷ್ಣು ವ್ರಿಯಾ’ ಬಗ್ಗೆ ಮಾತನಾಡುವ ಕೆ. ಮಂಜು, ”ಪಡ್ಡೆಹುಲಿ’ ನಂತರ ಒಳ್ಳೆಯ ಕಥೆಗಾಗಿ ಹುಡುಕುತ್ತಿದ್ದೆ. ರೀಮೇಕ್ ಮಾಡಲು ನನ್ನ ಮಗ ಒಪ್ಪಲಿಲ್ಲ, ಒಳ್ಳೆಯ ಕಥೆಯಿದ್ದರೆ ತನ್ನಿ ಅಂತ ಪೇಪರ್ ಆಡ್ ಕೊಟ್ಟೆ. ಆಗ ೬೫ ಕಥೆಗಳು ಬಂದವು. ಅದರಲ್ಲಿ ಧಾರವಾಡದ ಸಿಂಧುಶ್ರೀ ಅವರು ಕಥೆ ತುಂಬಾ ಚೆನ್ನಾಗಿತ್ತು. ಅದರ ಒಂದು ಲೈನ್ ತಗೊಂಡು ಈ ಸ್ಕ್ರಿಪ್ಟ್ ಮಾಡಿದ್ದೇವೆ. ಪ್ರಕಾಶ್, ಗೋಪಿಸುಂದರ್​ರಂತಹ ತಂತ್ರಜ್ಞರನ್ನು ಒಪ್ಪಿಸಿದೆ. ಮೊದಲು ಮಾಡಿದ ಚಿತ್ರದ ಕ್ಲೈಮ್ಯಾಕ್ಸ್ ತೃಪ್ತಿಯಾಗಲಿಲ್ಲ. ಹಾಗಾಗಿ, ಅದನ್ನು ಮತ್ತೆ ರೀಶೂಟ್ ಮಾಡಿದ್ದೇವೆ. ಜೀವನದಲ್ಲಿ ‌ಪ್ರೀತಿ ಎಷ್ಟು ಮುಖ್ಯ ಅಂತ ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು.

    ಈ ಚಿತ್ರವನ್ನು ಮಂಜು ಕೆಲವು ನಿರ್ದೇಶಕರಿಗೆ ತೋರಿಸಿದರಂತೆ. ‘ನಿರ್ದೇಶಕರಾದ ಮಹೇಶ್, ಅನಿಲ್ ಮುಂತಾದವರು ಸಿನಿಮಾ ನೋಡಿ ಕಣ್ಣೀರು ಹಾಕಿದರು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಚಿತ್ರವು ಶ್ರೇಯಸ್​ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಬೇಕಿತ್ತು. ಎಲೆಕ್ಷನ್ ಅಡ್ಡ ಬಂತು. ಹಾಗಾಗಿ, ಜೂನ್ ಮೊದಲ ವಾರ ಪ್ಲಾನ್ ಮಾಡಿದ್ದೇವೆ. ೧೫ ದಿನದಲ್ಲಿ ಆಡಿಯೋ ಕಾರ್ಯಕ್ರಮ ಗ್ರ್ಯಾಂಡ್ ಆಗಿ ನಡೆಯುತ್ತದೆ’ ಎಂದು ಹೇಳಿದರು.

    ಇದನ್ನೂ ಓದಿ: ಯೋಗಿ ಈಗ ‘ರೋಜಿ’; ‘ಲೂಸ್​ ಮಾದ’ನ 50ನೇ ಚಿತ್ರಕ್ಕೆ ಚಾಲನೆ

    ನಂತರ ಮಾತನಾಡಿದ ಶ್ರೇಯಸ್​, ‘ವಿಷ್ಣು ಒಬ್ಬ ಸಿಂಪಲ್ ಹುಡುಗ, ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕ. 90ರ ಕಾಲಘಟ್ಟದ ಚಿತ್ರವಾದ್ದರಿಂದ ಅದೇ ತರಹ ಬಟ್ಟೆಗಳ ಜತೆಗೆ ಅದೇ ತರಹದ ಬೈಕ್​ಗಳನ್ನು ಹುಡುಕಿ ತಂದಿದ್ದೇವೆ. ನನ್ನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ಈ ಚಿತ್ರ ಕನ್ನಡವಲ್ಲದೆ, ಮಲಯಾಳಂನಲ್ಲೂ ಬಿಡುಗಡೆಯಾಗುತ್ತಿದೆ’ ಎಂದು ಮಾಹಿತಿ ಕೊಟ್ಟರು.

    ಇದನ್ನೂ ಓದಿ:

    ‘ವಿಷ್ಣು ಪ್ರಿಯಾ’ ಚಿತ್ರಕ್ಕೆ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದು, ವಿನೋದ್​ ಭಾರತಿ ಛಾಯಾಗ್ರಹಣ ಮತ್ತು ಸುರೇಶ್​ ಅರಸ್​ ಅವರ ಸಂಕಲನವಿದೆ.

    ಮೈ ಬೇಬಿ, ಬೊಮ್ಮಾ..ಜಾಕ್ವೆಲಿನ್…ತಿಹಾರ್ ಜೈಲಿನಿಂದಲೇ ಪತ್ರ ಬರೆದ ಸುಕೇಶ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts