ಯೋಗಿ ಈಗ ‘ರೋಜಿ’; ‘ಲೂಸ್​ ಮಾದ’ನ 50ನೇ ಚಿತ್ರಕ್ಕೆ ಚಾಲನೆ

blank

ಬೆಂಗಳೂರು: ಕಳೆದ ವರ್ಷ ಬಿಡುಗಡೆಯಾದ ಧನಂಜಯ್​ ಅಭಿನಯದ ‘ಹೆಡ್​ ಬುಷ್​’ ಚಿತ್ರದಲ್ಲಿ ಗಂಗ ಎಂಬ ಪಾತ್ರ ನಿರ್ವಹಿಸಿದ್ದ ‘ಲೂಸ್​ ಮಾದ’ ಖ್ಯಾತಿಯ ಯೋಗಿ, ಈಗ ಅದೇ ನಿರ್ದೇಶಕರ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೇ ‘ರೋಜಿ’. ಇದು ಅವರ ಅಭಿನಯದ 50ನೇ ಚಿತ್ರವಾಗಿದ್ದು, ಚಾಲನೆ ಸಿಕ್ಕಿದೆ.

ಇದನ್ನೂ ಓದಿ: ಕಾಡಿನಲ್ಲಿ ‘ತ್ರಿದೇವಿ’ಯರು … ಇದು ಮೂವರು ಸಾಹಸಿ ಮಹಿಳೆಯರ ಕಥೆ

ಭಾನುವಾರ, ರಾಜಾಜಿನಗರದ ನವರಂಗ್​ ಚಿತ್ರಮಂದಿರದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಧನಂಜಯ್​ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಚಿತ್ರಕ್ಕೆ ಚಾಲನೆ ನೀಡುವುದರ ಜತೆಗೆ ಹೆಸರು ಅನಾವರಣ ಮಾಡಿದ್ದಾರೆ.

‘ರೋಜಿ’ ಚಿತ್ರದಲ್ಲಿ ಯೋಗಿ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಯೋಗಿ, ‘ಇದಕ್ಕೂ ಮುನ್ನ ಕೆಲವು ಚಿತ್ರಗಳಲ್ಲಿ ಗ್ಯಾಂಗ್​ಸ್ಟರ್​ ಆಗಿ ಕಾಣಿಸಿಕೊಂಡಿದ್ದೆ. ಆ ನಂತರ ಬೇರೆ ತರಹದ ಪಾತ್ರಗಳನ್ನೂ ಮಾಡಿದೆ. ಇದು ನನ್ನ 50ನೇ ಚಿತ್ರ. ಈ ಚಿತ್ರದಲ್ಲಿ ಪುನಃ ಗ್ಯಾಂಗ್​ಸ್ಟರ್​ ಆಗಿ ನಟಿಸುತ್ತಿದ್ದೇನೆ. ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ವಿಭಿನ್ನ ಪಾತ್ರ ಎನ್ನಬಹುದು. ಶೂನ್ಯ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಯೋಗಿ.

ಈ ಚಿತ್ರದ ಮುಹೂರ್ತವನ್ನು ಚಿತ್ರಮಂದಿರದಲ್ಲಿ ಮಾಡುತ್ತಿರುವ ಬಗ್ಗೆ ಮಾತನಾಡಿದ ಶೂನ್ಯ, ‘ಚಿತ್ರರಂಗದವರಿಗೆ ಚಿತ್ರಮಂದಿರ ದೇವಸ್ಥಾನವಿದಂತೆ. ಹಾಗಾಗಿ ನಮ್ಮ ಚಿತ್ರವನ್ನು ಚಿತ್ರಮಂದಿರದಲ್ಲಿ ಆರಂಭಿಸಿದ್ದೇವೆ. ಈ ಚಿತ್ರದಲ್ಲಿ ಯೋಗಿ ಅವರ ಹೆಸರೇ ರೋಜಿ ಎಂದಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ನೀಡುತ್ತೇವೆ’ ಎನ್ನುತ್ತಾರೆ.

ಇದನ್ನೂ ಓದಿ: ಕಿಸ್​ ಮಾಡಿದ ಬಳಿಕ ಕ್ಷಮೆ ಕೋರಿದರು! ನಾಗಚೈತನ್ಯ ಬಗ್ಗೆ ಯುವ ನಟಿ ನೀಡಿದ ಹೇಳಿಕೆ ವೈರಲ್​

‘ರೋಜಿ’ ಚಿತ್ರವನ್ನು ಡಿ.ವೈ ರಾಜೇಶ್​ ನಿರ್ಮಿಸುತ್ತಿದ್ದು, ಮೇನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ನಾನು ಮೊದಲು ಮನುಷ್ಯಳು ನಂತರ ತಾಯಿ, ಸೆಲೆಬ್ರಿಟಿ; ನಟಿ ಪ್ರೀತಿ ಜಿಂಟಾ ಹೀಗೆ ಹೇಳಿದ್ಯಾಕೆ?

Share This Article

ರಾತ್ರಿ ಚೆನ್ನಾಗಿ ನಿದ್ದೆ ಮಾಡಬೇಕೆಂದರೆ ಈ ಒಂದು ಕೆಲಸ ಮಾಡಿ: ಬೆಳಗ್ಗೆ ಉತ್ಸಾಹದಿಂದ ಎದ್ದೇಳಬಹುದು.. sleeping tips

sleeping tips : ಸಾಕಷ್ಟು ನಿದ್ರೆ ಬರದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಾವು ಎಷ್ಟು…

ಮಧ್ಯರಾತ್ರಿ ಕಳೆದರೂ ನಿದ್ದೆ ಬರ್ತಿಲ್ವಾ? ಹಾಗಾದರೆ ಈ ಸಮಸ್ಯೆಗಳನ್ನು ಎದುರಿಸಲು ನೀವು ರೆಡಿಯಾಗಿ! Sleep

Sleep : ಇಂದಿನ ಕಾರ್ಯನಿರತ ಜೀವನದಲ್ಲಿ ಕಾಲದ ಜೊತೆಗೆ, ಜನರ ಜೀವನಶೈಲಿಯಲ್ಲಿಯೂ ಅನೇಕ ದೊಡ್ಡ ಬದಲಾವಣೆಗಳಾಗಿವೆ.…

Toilet ಬಳಸಿದ ನಂತರ ಈ ತಪ್ಪು ಎಂದಿಗೂ ಮಾಡಬೇಡಿ: ಅಪಾಯ ಕಾದಿದೆಯಂತೆ!

Toilet : ನಮಲ್ಲಿ ಹಲವರು ಶೌಚಾಲಯ (ಪಾಶ್ಚಾತ್ಯ ಶೌಚಾಲಯ) ಬಳಸಿದ ನಂತರ ಟಾಯ್ಲೆಟ್​ನ ಮುಚ್ಚುಳ ಮುಚ್ಚದೇ…