More

  ಕಾಡಿನಲ್ಲಿ ‘ತ್ರಿದೇವಿ’ಯರು … ಇದು ಮೂವರು ಸಾಹಸಿ ಮಹಿಳೆಯರ ಕಥೆ

  ಬೆಂಗಳೂರು: ಶುಭಾ ಪೂಂಜ ಇದುವರೆಗೂ ಅಳುಮುಂಜಿ, ಬಬ್ಲಿ … ಮುಂತಾದ ಪಾತ್ರಗಳನ್ನು ಮಾಡಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ಆಕ್ಷನ್​ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಅದೇ ‘ತ್ರಿದೇವಿ’.

  ಇದನ್ನೂ ಓದಿ: ಯೆಂಟಮ್ಮಾ ಹಾಡಿನಲ್ಲಿ ಪಂಚೆಗೆ ಅಪಮಾನ; ಮಾಜಿ ಕ್ರಿಕೆಟಿಗನಿಂದ ಖಂಡನೆ

  ಹೆಸರೇ ಹೇಳುವಂತೆ ಇದು ಮೂವರು ಯುವತಿಯರ ಕಥೆ. ಮೂವರು ಯುವತಿಯರು ಕಾಡಿನಲ್ಲಿ ಕಳೆದು ಹೋದಾಗ, ಅಲ್ಲಿ ಏನೆಲ್ಲಾ ಆಗುತ್ತದೆ ಎಂದು ಹೇಳುವ ಕಥೆ. ಶುಭಾ ಪೂಂಜ, ಸಂಧ್ಯಾ ಲಕ್ಷ್ಮೀನಾರಾಯಣ್​ ಮತ್ತು ಜ್ಯೋತ್ಸ್ನಾ ಬಿ ರಾವ್​ ತ್ರಿದೇವಿಯರಾಗಿ ಕಾಣಿಸಿಕೊಂಡಿದ್ದಾರೆ. ಅಶ್ವಿನ್ ಎ. ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

  ‘ತ್ರಿದೇವಿ’ ತಮ್ಮ ಕನಸಿನ ಕೂಸು ಎನ್ನುತ್ತಾರೆ ಶುಭಾ ಪೂಂಜ. ‘ಒಂದೇ ತರಹದ ಪಾತ್ರಗಳನ್ನು ಮಾಡಿ ಬೇಜಾರಾಗಿತ್ತು. ಏನಾದರೂ ಹೊಸ ಪಾತ್ರ ಮಾಡಬೇಕು ಎಂದನಿಸುತ್ತಿತ್ತು. ಗೆಳೆಯ ಅಶ್ವಿನ್ ಮ್ಯಾಥ್ಯೂಗೆ ನನಗಾಗಿ ಡಿಫರೆಂಟ್ ಕಥೆ ಬರೆಯಲು ಹೇಳಿದ್ದೆ. ಒಂದಷ್ಟು ದಿನಗಳ ನಂತರ ಈ ಕಥೆ ಮಾಡಿದರು. ಹುಡುಗಿಯರೆಂದರೆ ಅಮಾಯಕರಲ್ಲ, ಅವರು ಸಾಹಸದಲ್ಲಿ ಹಿಂದೆ ಬಿದ್ದಿಲ್ಲ ಎಂದು ತೋರಿಸುವ ಆ್ಯಕ್ಷನ್ ಪ್ರದಾನ ಚಿತ್ರ ಇದು. ಈ ತಂಡದಲ್ಲಿ ನಾನು ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿದ್ದು, ಒಂದು ಸಿನಿಮಾ ಹೇಗೆ ತಯಾರಾಗುತ್ತದೆ ಎಂಬುದನ್ನು ಈ ಚಿತ್ರದಿಂದ ಕಲಿತಿದ್ದೇನೆ’ ಎನ್ನುತ್ತಾರೆ ಶುಭಾ ಪೂಂಜ.

  ಮಾಡಲಿಂಗ್​ ಕ್ಷೇತ್ರದವರಾದ ಸಂಧ್ಯಾ ಲಕ್ಷ್ಮೀನಾರಾಯಣಗೆ ಸಿನಿಮಾ ಬಗ್ಗೆ ಅಷ್ಟಾಗಿ ಆಸಕ್ತಿ ಇರಲಿಲ್ಲವಂತೆ. ಈ ಸಿನಿಮಾದಲ್ಲಿ ಸಾಕಷ್ಟು ಆಕ್ಷನ್​ ಇರುವುದರಿಂದ ಒಪ್ಪಿ ಈ ಚಿತ್ರದಲ್ಲಿ ನಟಿಸಲು ಮುಂದಾದರಂತೆ. ಇನ್ನು, ಜ್ಯೋತ್ಸ್ನಾ ಬಿ ರಾವ್​ ಮೂಲತಃ ರಂಗಭೂಮಿ ಕಲಾವಿದೆಯಂತೆ. ಚಿತ್ರದ ಕ್ಲೈಮ್ಯಾಕ್ಸ್​ ಇಷ್ಟವಾಗಿ, ಅವರು ಈ ಚಿತ್ರತಂಡಕ್ಕೆ ಸೇರ್ಪಡೆಯಾದರಂತೆ.

  ಇದನ್ನೂ ಓದಿ: ‘ಟೈಗರ್​ ವರ್ಸಸ್​ ಪಠಾಣ್​’ನಲ್ಲಿ ಮತ್ತೆ ಜತೆಯಾಗಲಿದ್ದಾರೆ ಸಲ್ಮಾನ್​ ಮತ್ತು ಶಾರುಖ್​

  ಚಿತ್ರದ ಇತರ ತಾರಾಗಣದಲ್ಲಿ ಅಶ್ವಿನ್ ಎ ಮ್ಯಾಥ್ಯೂ, ಜಯದೇವ ಮೋಹನ್, ಅಮಾನ್, ನಿಖಿಲ್ ಭಾರದ್ವಾಜ್, ಫ್ರೇಯಾ ಕೊಠಾರಿ ಮುಂತಾದವರಿದ್ದಾರೆ. ಆಲ್ಟರ್ಡ್ ಇಗೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಕುಂಜುನ್ನಿ ಎಸ್.ಕುಮಾರ್ ಅವರ ಛಾಯಾಗ್ರಹಣವಿದೆ.

  ಲಾಕ್​ಡೌನ್​ ಸುತ್ತ ‘ಉಂಡೆನಾಮ’; ಕೋಮಲ್​ ಹೊಸ ಚಿತ್ರದ ಟ್ರೇಲರ್​ ಬಿಡುಗಡೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts