More

    ಕೋವಿಡ್​ ಸೋಂಕಿತರಿಗೆ ರಿಷಿ ಕಪೂರ್​ ಅಳಿಯನಿಂದ ಪ್ಲಾಸ್ಮಾ ದಾನ

    ಕೋವಿಡ್​ ಸೋಂಕಿತರಿಗೆ ಪ್ಲಾಸ್ಮಾ ಥೆರಪಿಯಿಂದ ಗುಣಮುಖರನ್ನಾಗಿಸಬಹುದೆಂಬ ಸತ್ಯ ಈಗಾಗಲೇ ಗೊತ್ತಾಗಿದ್ದು, ದೇಶದಲ್ಲಿ ಆ ಬಗ್ಗೆ ಈಗಾಗಲೇ ಒಂದಷ್ಟು ಪ್ರಯೋಗಗಳು ನಡೆದು ಯಶಸ್ವಿಯಾಗಿವೆ. ಇದೀಗ ಬಾಲಿವುಡ್​ನ ಹಿರಿಯ ನಟ ರಿಷಿ ಕಪೂರ್ ಅಳಿಯ ಪ್ಲಾಸ್ಮಾ ದಾನಕ್ಕೆ ಮುಂದಾಗಿದ್ದಾರೆ.

    ಇದನ್ನೂ ಓದಿ: ರಾಗಿ ಮುದ್ದೆ ತಿನ್ನೋದು ಹೇಳಿಕೊಟ್ಟಿದ್ದೇ ಡಾ. ರಾಜಕುಮಾರ್​!

    ರಿಷಿ ಕಪೂರ್​ ಪುತ್ರಿ ರಿದ್ಧೀಮಾ ಸಹ್ನಿ ಪತಿ ಭರತ್​ ಸಹ್ನಿ ಪ್ಲಾಸ್ಮಾ ದಾನ ಮಾಡಿದ್ದು, ಅಳಿಯನ ಈ ಕಾರ್ಯಕ್ಕೆ ನಿತು ಕಪೂರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಅಳಿಯ ಭರತ್ ಅವರ ಕಾರ್ಯ ನಿಜಕ್ಕೂ ಹೆಮ್ಮೆ ಎನಿಸುವಂಥದ್ದು. ಗಂಭೀರ ಸ್ಥಿತಿಯಲ್ಲಿರುವ ಕೋವಿಂಡ್​ ಸೋಕಿಂತರಿಗೆ ಪ್ಲಾಸ್ಮಾ ದಾನ ಮಾಡಿದ್ದಾರೆ. ಅವರ ಈ ಕಾರ್ಯ ಇತರರಿಗೂ ಮಾದರಿಯಾಗಲಿ. ಅವರೂ ಪ್ಲಾಸ್ಮಾ ದಾನ ಮಾಡುವಂತಾಗಲಿ’ ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ರಜನಿ ಬಳಿಕ ದಳಪತಿ ವಿಜಯ್​ ಮನೆಗೆ ಬಾಂಬ್​ ಬೆದರಿಕೆ..

    ಇನ್ನು ಪತ್ನಿ ರಿದ್ಧೀಮಾ ಸಹ ಪತಿ ಭರತ್​ ಫೋಟೋ ಶೇರ್​ ಮಾಡಿಕೊಂಡು, ‘ಇನ್ನೊಬ್ಬರ ಜೀವ ಉಳಿಸಲು ನಿಮ್ಮ ಪ್ಲಾಸ್ಮಾ ದಾನ ಮಾಡುತ್ತಿರುವುದು, ನಿಜಕ್ಕೂ ಖುಷಿಯ ವಿಚಾರ‘ ಎಂದು ಪ್ಲಾಸ್ಮಾ ಡೊನೇಟ್​ ಮಾಡುತ್ತಿರುವ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.
    ಬಹುಮುಖ್ಯವಾದ ವಿಚಾರ ಏನೆಂದರೆ, ಕರೊನಾಕ್ಕೆ ತುತ್ತಾಗಿ ಅದರಿಂದ ಗುಣಮುಖರಾದವರಷ್ಟೇ ಪ್ಲಾಸ್ಮಾ ನೀಡಬಹುದು. ಹಾಗಾದರೆ, ನಿತು ಕಪೂರ್​ ಅಳಿಯನಿಗೆ ಕರೊನಾ ಪಾಸಿಟಿವ್​ ವರದಿಯಾಗಿತ್ತಾ? ಅದರಿಂದ ಗುಣಮುಖರಾಗಿ ಅವರು ಪ್ಲಾಸ್ಮಾ ನೀಡಲು ಮುಂದಾದರಾ? ಈ ಬಗ್ಗೆ ಕುಟುಂಬದ ಮೂಲಗಳು ಉತ್ತರಿಸಿಲ್ಲ. (ಏಜೆನ್ಸೀಸ್​)

    ‘ಮರ್ಡರ್​’ ಸಿನಿಮಾ ವಿವಾದದ ಬೆನ್ನಲ್ಲೇ ಆರ್​ಜಿವಿ ಕೊಟ್ಟರು ಹೀಗೊಂದು ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts