More

    ‘ಮರ್ಡರ್​’ ಸಿನಿಮಾ ವಿವಾದದ ಬೆನ್ನಲ್ಲೇ ಆರ್​ಜಿವಿ ಕೊಟ್ಟರು ಹೀಗೊಂದು ಸ್ಪಷ್ಟನೆ

    ಮರ್ಡರ್​ ಸಿನಿಮಾದ ವಿವಾದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಆರ್​ಜಿವಿ ಪ್ರತಿಕ್ರಿಯಿಸಿದ್ದಾರೆ. 2018ರಲ್ಲಿ ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದೆ ಹತ್ಯೆ ಆಧಾರಿತ ಸಿನಿಮಾ ಪೋಸ್ಟರ್​ ಅನ್ನು ಇತ್ತಿಚೆಗಷ್ಟೇ ರಾಮ್​ ಗೋಪಾಲ್​ ವರ್ಮಾ ಬಿಡುಗಡೆ ಮಾಡಿದ್ದರು. ಆ ಪೋಸ್ಟರ್​ ಬಿಡುಗಡೆ ಬೆನ್ನಲ್ಲೇ ಪ್ರಣಯ್​ ತಂದೆ ಬಾಲಾಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು. ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ಕೋರ್ಟ್ ಆದೇಶ ಹೊರಡಿಸಿತ್ತು. ಇದೀಗ ಈ ಬೆಳವಣಿಗೆಯ ಬಗ್ಗೆ ವರ್ಮಾ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಅಭಿಷೇಕ್​ ತೊಟ್ಟಿರುವ ಈ ಸ್ವೆಟ್​ಶರ್ಟ್​ನ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ …

    ‘ಮರ್ಡರ್​ ಸಿನಿಮಾ ಒಂದಷ್ಟು ನೈಜ ಘಟನೆ ಮತ್ತು ಒಂದಷ್ಟು ಘಟನೆಗಳಿಂದ ಸ್ಫೂರ್ತಿ ಪಡೆದು ಸಿದ್ಧವಾದ ಸಿನಿಮಾ ಆಗಿದೆಯೇ ಹೊರತು, ಸತ್ಯವನ್ನಲ್ಲ. ಅದೇ ರೀತಿ ಸಿನಿಮಾದಲ್ಲಿ ಯಾವುದೇ ಜಾತಿಯನ್ನು ಬಳಕೆ ಮಾಡಿಕೊಂಡಿಲ್ಲ’ ಎಂದು ಆರ್​ಜಿವಿ ಟ್ವಿಟ್​ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.
    ಹೌದು, ಆರ್​ಜಿವಿ ನಿರ್ದೇಶನದ ಮರ್ಡರ್​ ಚಿತ್ರಕ್ಕೆ ಪ್ರಣಯ್​ ತಂದೆ ಬಾಲಾಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿ, ಆರ್​ಜಿವಿ ಚಿತ್ರ ಪ್ರಣಯ್​ ಕೊಲೆ ಪ್ರಕರಣದ ಮೇಲೆ ಪರಿಣಾಮ ಬೀಳಲಿದೆ ಎಂದು ಪ್ರಣಯ್​ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ಬಾಲಾಸ್ವಾಮಿ ಅವರ ಅರ್ಜಿ ಪುರಸ್ಕರಿಸಿದ ನಲ್ಗೊಂಡ ವಿಶೇಷ ಪರಿಶಿಷ್ಟ ವರ್ಗ/ಪಂಗಡ ನ್ಯಾಯಾಲಯ, ಮಿರಿಯಾಲಗುಡ ಪೊಲೀಸ್​ ಠಾಣೆಗೆ ನಿರ್ದೇಶಕ ಆರ್​ಜಿವಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ಹೊರಡಿಸಿತ್ತು.

    ಇದನ್ನೂ ಓದಿ: ಶ್ರೀದೇವಿ ಪೋಸ್ಟ್​ ಮಾರ್ಟಮ್​ ರಿಪೋರ್ಟ್​ ಬಿಡುಗಡೆ ಮಾಡಿದರಾ ಕಂಗನಾ?

    ಕಳೆದ ಅಪ್ಪಂದಿರ ದಿನದಿಂದು ಆರ್​ಜಿವಿ “ಮರ್ಡರ್​” ಹೆಸರಿನ ಮುಂದಿನ ಚಿತ್ರದ ಪೋಸ್ಟರ್​ ಅನ್ನು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಬರೆದುಕೊಂಡಿದ್ದ ವರ್ಮಾ, ಅಮೃತಾ ರಾವ್​ ಹಾಗೂ ಮಾರುತಿ ರಾವ್​ ಜೀವನಾಧಾರಿತ ಚಿತ್ರವು ಒಂದು ಮನಕಲಕುವ ಕತೆಯಾಗಲಿದೆ. ಮಗಳನ್ನು ತುಂಬಾ ಪ್ರೀತಿಸುವ ತಂದೆಯ ಅಪಾಯಕಾರ ಸಾಹಸಗಳು ಪ್ರೇಕ್ಷಕರ ಹೃದಯವನ್ನು ತಟ್ಟಲಿದೆ ಎಂದು ಅಪ್ಪಂದಿರ ದಿನದಂದೇ ಪೋಸ್ಟರ್​ ಬಿಡುಗಡೆ ಮಾಡಿ, ಸ್ಯಾಡ್​ ಫಾದರ್ಸ್​ ಡೇ ಎಂದು ಬರೆದುಕೊಂಡಿದ್ದರು. (ಏಜೆನ್ಸೀಸ್​)

    ರಾಗಿ ಮುದ್ದೆ ತಿನ್ನೋದು ಹೇಳಿಕೊಟ್ಟಿದ್ದೇ ಡಾ. ರಾಜಕುಮಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts