More

    ಅಭಿಷೇಕ್​ ತೊಟ್ಟಿರುವ ಈ ಸ್ವೆಟ್​ಶರ್ಟ್​ನ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಿ …

    ಲಾಕ್​ಡೌನ್​ ಮುಗಿಯುತ್ತಿದ್ದಂತೆಯೇ ಬಾಲಿವುಡ್​ ನಟ ಅಭಿಷೇಕ್​ ಬಚ್ಚನ್​ ಕೆಲಸ ಶುರುಹಚ್ಚಿಕೊಂಡಿದ್ದಾರೆ. ತಾವು ಶೂಟಿಂಗ್​ ಮುಗಿಸಿದ ಚಿತ್ರಗಳು ಮತ್ತು ವೆಬ್​ ಸೀರೀಸ್​ನ ಡಬ್ಬಿಂಗ್​ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಅಪ್ಪನ ಸ್ಟಾರ್​ಗಿರಿ ನೆರಳಿಂದ ಅಂತರ ಕಾಯ್ದುಕೊಂಡಿದ್ದೇನೆ: ಟೈಗರ್​ ಶ್ರಾಫ್

    ಇತ್ತೀಚೆಗೆ, ಒಂದು ಚಿತ್ರದ ಡಬ್ಬಿಂಗ್​ಗೆ ಹೋಗುವಾಗ ಅಭಿಷೇಕ್​ ಅವರ ಕೆಲವು ಫೋಟೋಗಳನ್ನು ತೆಗೆಯಲಾಗಿದೆ. ನಾಸಾ ಸ್ವೆಟ್​ಶರ್ಟ್​​, ನೈಕಿ ಬ್ರಾಂಡ್​ನ ಬ್ಲೂ ಟ್ರಾಕ್​ ಪ್ಯಾಂಟ್​ ಮತ್ತು ಸ್ನೀಕರ್ಸ್​ನಲ್ಲಿ ಅಭಿಷೇಕ್​ ಕಾಣಿಸಿಕೊಂಡಿದ್ದು, ಈ ಬಗ್ಗೆ ಸಾಕಷ್ಟು ಚಚೆರ್ಯಾಗುತ್ತಿದೆ.

    ಇದರಲ್ಲಿ ಚರ್ಚೆ ಮಾಡುವ ವಿಷಯವೇನಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಮಾಮೂಲಿ ಬಟ್ಟೆಗಳಾಗಿದ್ದರೆ, ಅಷ್ಟೊಂದು ಚರ್ಚೆಯಾಗುತ್ತಿರಲಿಲ್ಲ. ಆದರೆ, ಅಭಿಷೇಕ್​ ತೊಟ್ಟಿರುವ ಸ್ವೆಟ್​ಶರ್ಟ್​, ಅತ್ಯಂತ ಕಾಸ್ಟ್ಲಿ ಎಂದು ಹೇಳಲಾಗಿದೆ. ಅದೇ ಕಾರಣಕ್ಕೆ ಅಭಿಷೇಕ್​ ಬಗ್ಗೆ ಇದೀಗ ಬಾಲಿವುಡ್​ನಲ್ಲಿ ಚರ್ಚೆಯಾಗುತ್ತಿದೆ.

    ಅಭಿಷೇಕ್​ ತೊಟ್ಟಿರುವ ಎಚ್​ ಆಂಡ್​ ಎಂ ಕಂಪೆನಿಯ ಈ ನಾಸಾ ಸ್ವೆಟ್​ಶರ್ಟ್​ನ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಆಶ್ಚರ್ಯವಾಗುತ್ತದೆ. ಇದೊಂದು ಸ್ವೆಟ್​ಶರ್ಟ್​ನ ಬೆಲೆ 999 ಡಾಲರ್ಸ್​ ಅಂತೆ. ಹೆಚ್ಚೂಕಡಿಮೆ 75 ಸಾವಿರ ರೂಪಾಯಿಗಳ ಮೌಲ್ಯದ್ದು ಈ ಸ್ವೆಟ್​ಶರ್ಟ್​ ಎಂದು ಹೇಳಲಾಗುತ್ತಿದೆ. ಇನ್ನು ನೈಕಿ ಬ್ರಾಂಡ್​ನ ಟ್ರಾಕ್​ ಪಾಂಟ್​ ಮತ್ತು ಸ್ನೀಕರ್ಸ್​ ಇನ್ನಷ್ಟು ದುಬಾರಿಯಾಗಿದ್ದು, 50 ಸಾವಿರ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: PHOTO GALLERY| ಬರ್ತಡೇ ಗರ್ಲ್​ ಅಂಕಿತಾ: ಕಮಲಿ ಫ್ರೆಂಡ್​ ನಿಂಗಿಯ​ ಬೋಲ್ಡ್ ಲುಕ್ಕಿಗೆ ಫಿದಾ ಆಗೋದು ಗ್ಯಾರೆಂಟಿ!

    ಅಭಿಷೇಕ್​ ಅವರ ಈ ಬಟ್ಟೆಗಳನ್ನು ನೋಡಿ, ಎಲ್ಲರೂ ಖುಷಿಪಡುತ್ತಾರೆ ಎಂದು ಹೇಳುವುದು ಕಷ್ಟ. ಮೇಲ್ನೋಟಕ್ಕೆ ಸಾಮಾನ್ಯ ಕ್ಯಾಶುಯಲ್​ ವೇರ್​ ಅಂತನಿಸಿದರೂ, ಅದರ ಬೆಲೆ ಕೇಳಿ ತಲೆ ತಿರುಗಿಬಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ.

    ಲಾಕ್​ಡೌನ್​ನಲ್ಲಿ ಅಕ್ಷಯ್​ ಕುಮಾರ್​ ನಾಸಿಕ್​ಗೆ ಹೆಲಿಕಾಫ್ಟರ್​​ನಲ್ಲಿ ಹೋಗಿದ್ದು ಯಾಕೆ​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts