More

    ಅಪ್ಪನ ಸ್ಟಾರ್​ಗಿರಿ ನೆರಳಿಂದ ಅಂತರ ಕಾಯ್ದುಕೊಂಡಿದ್ದೇನೆ: ಟೈಗರ್​ ಶ್ರಾಫ್

    ದಿನೇದಿನೆ ಬಾಲಿವುಡ್​ನಲ್ಲಿ ನೆಪೋಟಿಸಂ ಕುರಿತ ಚರ್ಚೆಗಳು ಹೆಚ್ಚಾಗುತ್ತಿವೆ. ಒಬ್ಬರಾದ ಮೇಲೊಬ್ಬರು ಚರ್ಚೆಗೆ ಧುಮುಕುತ್ತಿದ್ದಾರೆ. ಗಾಡ್​ಫಾದರ್​ ಇಲ್ಲದೆ ಸಿನಿಮಾ ಇಂಡಸ್ಟ್ರಿಗೆ ಬಂದವರು ತಮ್ಮ ಕಥೆಗಳನ್ನು ತೆರೆದಿಡುತ್ತಿದ್ದಾರೆ. ಅನುಭವಿಸಿದ ಕಷ್ಟ, ಸಿನಿಮಾ ಅವಕಾಶ ಕಳೆದುಕೊಂಡ ನೋವು ಎಲ್ಲವನ್ನೂ ಹೊರಹಾಕುತ್ತಿದ್ದಾರೆ. ಆದರೆ, ಸಿನಿಮಾ ಇಂಡಸ್ಟ್ರಿಯ ನೆರಳಲ್ಲೇ ಸಿನಿಮಾಕ್ಕೆ ಬಂದವರು ಈ ಚರ್ಚೆಗೆ ಇಳಿದಿರಲಿಲ್ಲ. ಇದೀಗ ಆ ಬಗ್ಗೆ ಮಾತನಾಡಿದ್ದಾರೆ ಜಾಕಿ ಶ್ರಾಫ್​ ಪುತ್ರ ಟೈಗರ್​ ಶ್ರಾಫ್.

    ಇದನ್ನೂ ಓದಿ: ಸಿನಿಮಾ ಸೀರೆ!: ಇದು ಕನ್ನಡದ ನಟಿಯರಿಗೆ ಅರ್ಪಣೆ

    ‘ನಾನು ನನ್ನ ಅಪ್ಪನ ಮಗನೇ ಇರಬಹುದು. ಆದರೆ, ನಾನು ಒಬ್ಬ ಸ್ಟಾರ್​ ನಟನ ಮಗ ಎಂದು ಹೇಳಿಕೊಳ್ಳುವುದಕ್ಕೆ ಕೊಂಚ ಭಯವೆನಿಸುತ್ತದೆ. ಜನ ಅಂದುಕೊಳ್ಳುತ್ತಾರೆ, ಅವನು ಸ್ಟಾರ್ ನಟನ ಮಗ ಎಂದು. ಆತನಿಗೆ ಸಿನಿಮಾ ರಂಗದಲ್ಲಿ ಎಲ್ಲವೂ ಸಲೀಸೆಂದು. ಅದು ನಿಜವೇ.. ನಾನು ಅದನ್ನು ಇಲ್ಲ ಎಂದೆನ್ನುವುದಿಲ್ಲ. ಅದರಿಂದ ಜನ ನನ್ನನ್ನು ಗುರುತಿಸುತ್ತಾರೆ. ನೆನಪಿರಲಿ, ಇದೆಲ್ಲದರ ನಡುವೆ ನಾವು ಬೆಳೆದು ನಿಲ್ಲುವುದು ಅಷ್ಟು ಸುಲಭದ ಕೆಲಸವಲ್ಲ. ಇಂಡಸ್ಟ್ರಿ ಹಿನ್ನೆಲೆ ಒಂದೆಡೆಯಾದರೆ, ಅದರ ಎರಡರಷ್ಟು ಶ್ರಮ ನಾವು ಕೊಡಲೇಬೇಕು. ಅಂದಾಗ ಮಾತ್ರ ನಮ್ಮತನ ಆಚೆ ಬರುವುದು. ಹಾಗಾಗಿ ನಾನು ನನ್ನ ಅಪ್ಪನ ಸ್ಟಾರ್​ಗಿರಿ ನೆರಳಿನಿಂದ ಈಗಲೂ ಅಂತರ ಕಾಯ್ದುಕೊಂಡಿದ್ದೇನೆ’ ಎನ್ನುತ್ತಾರೆ ಟೈಗರ್​ ಶ್ರಾಫ್.

    ಇದನ್ನೂ ಓದಿ: ಪ್ರಣಯ್​, ಅಮೃತಾರನ್ನು ವಿಲನ್​ ರೀತಿ ಬಿಂಬಿಸಲು ಮುಂದಾದ ಆರ್​ಜಿವಿಗೆ ಶಾಕ್​ ಕೊಟ್ಟ ಕೋರ್ಟ್​!​

    ‘ನನ್ನಪ್ಪ ಕಳೆದ 30 ವರ್ಷಗಳಿಂದ ಸಿನಿಮಾದಲ್ಲಿದ್ದಾರೆ. ಏರಿಳಿತಗಳನ್ನು ಕಂಡಿದ್ದಾರೆ. ಅದರ ನಡುವೆಯೂ ನಮ್ಮನ್ನು ಕಾಪಾಡಿಕೊಂಡು ಬಂದಿದ್ದಾರೆ’ ಎನ್ನುವ ಟೈಗರ್ ಸಿನಿಮಾ ಹಿನ್ನೆಲೆ ಕುಟುಂಬದಿಂದ ಬಂದವರಿಗೂ ಕಷ್ಟ ಇದೆ ಎಂಬುದನ್ನು ಹೇಳಿಕೊಳ್ಳುತ್ತಾರೆ. (ಏಜೆನ್ಸೀಸ್​)

    PHOTO GALLERY| ಬರ್ತಡೇ ಗರ್ಲ್​ ಅಂಕಿತಾ: ಕಮಲಿ ಫ್ರೆಂಡ್​ ನಿಂಗಿಯ​ ಬೋಲ್ಡ್ ಲುಕ್ಕಿಗೆ ಫಿದಾ ಆಗೋದು ಗ್ಯಾರೆಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts