More

    ಲಾಕ್​ಡೌನ್​ನಲ್ಲಿ ಅಕ್ಷಯ್​ ಕುಮಾರ್​ ನಾಸಿಕ್​ಗೆ ಹೆಲಿಕಾಫ್ಟರ್​​ನಲ್ಲಿ ಹೋಗಿದ್ದು ಯಾಕೆ​?

    ಲಾಕ್ಡೌನ್ ಸಮಯದಲ್ಲಿ ಅಕ್ಷಯ್​ ಕುಮಾರ್​, ನಾಸಿಕ್​ಗೆ ಹೆಲಿಕಾಫ್ಟರ್​ನಲ್ಲಿ ತೆರಳಿ ಅಲ್ಲಿ ರೆಸಾರ್ಟ್​ವೊಂದರಲ್ಲಿ ಕೆಲವು ದಿನಗಳ ಕಾಲ ಕಳೆದಿದ್ದರು ಎಂಬ ವಿಷಯ ಇದೀಗ ಸಾಕಷ್ಟು ವಿವಾದ ಹುಟ್ಟುಹಾಕಿದೆ.

    ಕರೊನಾದಿಂದ ಇಡೀ ದೇಶಕ್ಕೆ ಲಾಕ್​ಡೌನ್​ ಹೇರಲಾಗಿತ್ತು. ಈ ಸಂದರ್ಭದಲ್ಲಿ ಯಾರೂ ಮನೆ ಬಿಟ್ಟು ಎಲ್ಲೂ ಹೋಗುವಂತಿರಲಿಲ್ಲ. ಒಂದು ಪಕ್ಷ ಹೋದರೂ, ಅದಕ್ಕೆ ಸೂಕ್ತ ಅನುಮತಿ ಪಡೆದು ಪ್ರಯಾಣ ಮಾಡಬೇಕಿತ್ತು. ಆದರೆ, ಈ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​, ನಾಸಿಕ್​ಗೆ ಹೆಲಿಕಾಫ್ಟರ್​ನಲ್ಲಿ ಹೋಗಿದ್ದರು ಎಂಬ ವಿಷಯ ಇದೀಗ ಬಹಿರಂಗಗೊಂಡಿದ್ದು, ಸಾಕಷ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

    ಇದನ್ನೂ ಓದಿ: ಪಿಪಿಇ ಕಿಟ್ ವಿತರಣೆ: ಪೊಲೀಸರಿಗೆ ಇನ್​ಸ್ಪೆಕ್ಟರ್ ವಿಕ್ರಂ ಕಾಣಿಕೆ

    ಈ ವಿಷಯವಾಗಿ, ಮಹಾರಾಷ್ಟ್ರದ ಆಹಾರ ಮತ್ತು ಸರಬರಾಜು ಸಚಿವ ಚಗನ್​ ಭುಜಬಲ್​ ಅವರು ಜಿಲ್ಲಾಡಳಿತಕ್ಕೆ ಸೂಕ್ತ ತನಿಕೆ ಮಾಡುವಂತೆ ಆದೇಶಿಸಿದ್ದಾರೆ. ನಾಸಿಕ್​ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಭುಜಬಲ್​, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಅದೇ ಕಾರಣಕ್ಕೆ ತನಿಖೆ ಮಾಡುವುದಕ್ಕೆ ಆದೇಶಿಸಿದ್ದಾರೆ ಎಂದು ಹೇಳಲಾಗಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ಅಕ್ಷಯ್​ ಕುಮಾರ್​ ಅವರು ಹೆಲಿಕಾಫ್ಟರ್​ ಮೂಲಕ ನಾಸಿಕ್​ಗೆ ಬಂದ ವಿಷಯ ನನಗೆ ಗೊತ್ತಿಲ್ಲ. ಆದರೆ, ಬಹಳಷ್ಟು ಜನ ಈ ವಿಷಯವಾಗಿ ನನಗೆ ದೂರು ಸಲ್ಲಿಸಿದ್ದಾರೆ. ಇಂಥ ಸಂದರ್ಭದಲ್ಲಿ ಹೆಲಿಕಾಫ್ಟರ್​ನಲ್ಲಿ ಪ್ರಯಾಣ ಮಾಡುವುದು, ರೆಸಾರ್ಟ್​ನಲ್ಲಿ ಉಳಿದುಕೊಳ್ಲುವುದು ಸಾಕಷ್ಟು ಚಚೆರ್ಯಾಗುತ್ತಿದೆ. ಅವರು ಯಾವ ಉದ್ದೇಶಕ್ಕಾಗಿ ಬಂದಿದ್ದರು, ಅವರಿಗೆ ಬರುವುದಕ್ಕೆ ಯಾರು ಅನುಮತಿ ಕೊಟ್ಟಿದ್ದರು ಎಂಬ ವಿಷಯಗಳ ಕುರಿತಾಗಿ ತನಿಖೆ ನಡೆಸುವುದಕ್ಕೆ ಹೇಳಿದ್ದೇನೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಅಪ್ಪನ ಸ್ಟಾರ್​ಗಿರಿ ನೆರಳಿಂದ ಅಂತರ ಕಾಯ್ದುಕೊಂಡಿದ್ದೇನೆ: ಟೈಗರ್​ ಶ್ರಾಫ್

    ಮೂಲಗಳ ಪ್ರಕಾರ, ಅಕ್ಷಯ್​ ಕುಮಾರ್ ಅವರು ನಾಸಿಕ್​ನ ತ್ರಯಂಬೇಕೇಶ್ವರದಲ್ಲಿ ಮಾರ್ಷಲ್​ ಆರ್ಟ್ಸ್​ ಮತ್ತು ನ್ಯಾಚುರೋಪತಿ ಕೇಂದ್ರವಾಗಿ ಪ್ರಾರಂಭಿಸುವುದಕ್ಕೆ ಯೋಚಿಸುತ್ತಿದ್ದಾರಂತೆ. ಅದೇ ಕಾರಣಕ್ಕೆ ಅವರು ನಾಸಿಕ್​ಗೆ ಪ್ರಯಾಣ ಬೆಳೆಸಿದ್ದಾರೆ ಎಂದು ಹೇಳಲಾಗುತ್ತದೆ.

    ಇನ್ನೊಂದು ಮೂಲದ ಪ್ರಕಾರ, ಅಕ್ಷಯ್​ ಕುಮಾರ್​ ಅವರು ನ್ಯಾಚುರೋಪತಿ ಚಿಕಿತ್ಸೆ ಪಡೆಯುತ್ತಿದ್ದು, ಅದೇ ಕಾರಣಕ್ಕೆ ನಾಸಿಕ್​ನ ಹೊರವಲಯದಲ್ಲಿರುವ ರೆಸಾರ್ಟ್​​ಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.

    ಕಾರಣ ಏನಾದರೂ ಇರಲಿ, ಒಟ್ಟಿನಲ್ಲಿ ಅಕ್ಷಯ್​ ಕುಮಾರ್​ ಇದೀಗ ತೀವ್ರ ವಿವಾದಕ್ಕೆ ತುತ್ತಾಗಿದ್ದಾರೆ. ಮುಂದೆ ಏನಾಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಸಿನಿಮಾ ಸೀರೆ!: ಇದು ಕನ್ನಡದ ನಟಿಯರಿಗೆ ಅರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts