More

    ಮನೆ ಛಾವಣಿ, ಕಾಂಪೌಂಡ್ ಕುಸಿತ

    ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ಮುಂದುವರಿದಿದೆ.

    ಕರ್ಕೇಶ್ವರ ಗ್ರಾಮ ಪಂಚಾಯಿತಿ ಕೈಮರದಲ್ಲಿ ಮನೆ ಛಾವಣಿ ಕುಸಿದಿದೆ. ಕೈಮರದ ಗುಲಾಬಿ ತಿಮ್ಮೇಗೌಡ ಎಂಬುವರ ಮನೆ ಛಾವಣಿ ಸೋಮವಾರ ಸಂಜೆ ಕುಸಿಯಿತು. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾದರು. ಬನ್ನೂರು ರಾಜನ್ ಎಂಬುವರ ಮನೆಯ ಕಾಂಪೌಂಡ್ ಕುಸಿದಿದೆ. ಸೋಮವಾರ ರಾತ್ರಿಯಿಡಿ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ. ಹಾನಿಗೊಂಡ ಮನೆ ಹಾಗೂ ಕಾಂಪೌಂಡ್‌ಗಳನ್ನು ಗ್ರಾಮ ಲೆಕ್ಕಾಧಿಕಾರಿ ನವೀನ್ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts