More

    ಸೌಂದರ್ಯ ಜಗದೀಶ್​ ಸೂಸೈಡ್​ ಪ್ರಕರಣ; ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪತ್ನಿ ರೇಖಾ

    ಬೆಂಗಳೂರು: ಏಪ್ರಿಲ್​ 14ರಂದು ಆತ್ಮಹತ್ಯೆ ಮಾಡಿಕೊಂಡು ಸಾವಿಗೆ ಶರಣಾಗಿದ್ದ ಉದ್ಯಮಿ, ನಿರ್ಮಾಪಕ ಸೌಂದರ್ಯ ಜಗದೀಶ್​ ಅವರ ಸಾವಿನ ಬಗ್ಗೆ ಪತ್ನಿ ರೇಖಾ ಮಾತನಾಡಿದ್ದು, ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಮೊದಲು ತಾಯಿ ನಿಧನರಾದರು. ಆಮೇಲೆ 15 ದಿನಕ್ಕೆ ಯಜಮಾನರು ತೀರಿಕೊಂಡರು. ಆ ಶಾಕ್​ನಲ್ಲಿ ಏನಾಯಿತು ಎಂಬುದು ನಮಗೆ ಗೊತ್ತಿಲ್ಲ. ಈ ಮನೆಯನ್ನು ನಾನು ಮತ್ತು ಅವರು ಸೇರಿ ಕಟ್ಟಿದ್ದು. ಇಂದು ಅವರು ಇಲ್ಲ ಎಂದಾಗ ಈ ಮನೆಯಲ್ಲಿ ನಮಗೆ ಇರೋಕೆ ಆಗುತ್ತಿಲ್ಲ. ಇದೇ ತಿಂಗಳ 29ಕ್ಕೆ ನಮ್ಮ ಯಜಮಾನರ ಪೂಜೆ ಇದೆ. ಜೂನ್ ನಲ್ಲಿ ನಮ್ಮ ಯಜಮಾನರ ಬರ್ತ್ ಡೇ ಇತ್ತು. ಪೂಜೆ ಇರುವ ಕಾರಣ ಶ್ರೀರಂಗಪಟ್ಟಣದಲ್ಲಿ ಅವರ ಹಳೇ ಬಟ್ಟೆ ಬಿಡಬೇಕು ಅಂತ ಹೇಳಿದ್ದರು.

    Soundarya Jagadeesh

    ಇದನ್ನೂ ಓದಿ: ಒಂದು ವೇಳೆ ಇದನ್ನು ಮಾಡಿದ್ದರೆ ಆರ್​ಸಿಬಿ ಟ್ರೋಫಿ ಗೆಲ್ಲಬಹುದಿತ್ತು; ಮತ್ತೊಮ್ಮೆ ಟೀಕಿಸಿ ಟ್ವೀಟ್​ ಮಾಡಿದ ರಾಯುಡು

    ಅದ್ಕಕೆ ಅವರ ಕಬೋರ್ಡ್​ನಲ್ಲಿದ್ದ ಬಟ್ಟೆಗಳನ್ನು ಹೊರತೆಗೆಯುವ ವೇಳೆ ಡೆತ್​ ನೋಟ್​ ಸಿಕ್ಕಿತ್ತು. ಡೆತ್ ನೋಟ್ ನೋಡಿ ನನಗೆ ತುಂಬಾ ಶಾಕ್ ಆಯ್ತು, ಡೆತ್ ನೋಟ್ ನಲ್ಲಿ ಅವರ ಬ್ಯುಸಿನೆಸ್ ಪಾರ್ಟನರ್ ಸುರೇಶ್, ಹೊಂಬಣ್ಣ, ಸುಧೀಂದ್ರ ಅವರು ನೀಡಿರುವ ಕಿರುಕುಳದ ಬಗ್ಗೆ ಬರೆದಿದ್ದಾರೆ.ನಮ್ಮ ಯಜಮಾನರು ಅವರನ್ನು ತುಂಬಾ ನಂಬಿದ್ದರು, ಅವರು ಮೋಸ ಮಾಡಿದ್ದಾರೆ. ಖಾಲಿ ಚೆಕ್ ಮೇಲೆ ಸಹಿ ಹಾಕಿಸಿಕೊಂಡು ಪೋರ್ಜರಿ ಮಾಡಿದ್ದಾರೆ. ಅವರ ಕಿರುಕುಳದಿಂದಲೇ ನಮ್ಮ ಯಜಮಾನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನನಗೆ ಮತ್ತು ನನ್ನ ಮಗನಿಗೆ ಬೆದರಿಕೆ ಇದೆ. ಅಷ್ಟು ಗಟ್ಟಿಯಾಗಿ ಹುಲಿ ರೀತಿ ಇದ್ದ ಅವರನ್ನು ಕೊನೆಕೊನೆಗೆ ಇಷ್ಟು ಸೈಲೆಂಟ್​ ಆಗುವಂತೆ ಮಾಡಿ ಈ ಹಂತಕ್ಕೆ ತೆಗೆದುಕೊಂಡು ಬಂದವರು ನಾಳೆ ನನಗೆ ಮತ್ತು ನನ್ನ ಮಗನಿಗೆ ಏನು ಮಾಡುತ್ತಾರೋ ಗೊತ್ತಿಲ್ಲ. ನನಗೆ ಆ ಭಯ ಇದೆ. ಡೆತ್​ ನೋಟ್​ಅನ್ನು ತೆಗೆದುಕೊಂಡು ಹೋಗಿ ಪೊಲೀಸರಿಗೆ ಕೊಟ್ಟಿದ್ದೇನೆ. ಅವರು FIR ದಾಖಲಿಸಿದ್ದು, ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿರುವುದಾಗಿ ಸೌಂದರ್ಯ ಜಗದೀಶ್​ ಪತ್ನಿ ರೇಖಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts