More

    ಧ್ರುವ ಸರ್ಜಾ ಪ್ಯಾನ್ ಇಂಡಿಯಾ ‘ಮಾರ್ಟಿನ್’ ಬಿಡುಗಡೆ ದಿನಾಂಕ ಘೋಷಣೆ!

    ಬೆಂಗಳೂರು: ಸ್ಯಾಂಡಲ್‌ವುಡ್‌ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ನಟನೆಯ ಮಾರ್ಟಿನ್ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.

    ಇದನ್ನೂ ಓದಿ: ಚಾರ್‌ ಧಾಮ್‌ ಯಾತ್ರೆಯಲ್ಲಿ 15 ದಿನಗಳಲ್ಲಿ 50ಕ್ಕೂ ಹೆಚ್ಚು ಯಾತ್ರಾರ್ಥಿಗಳು ಸಾವು

    ಈ ವರ್ಷ ಅಕ್ಟೋಬರ್​ 11ಕ್ಕೆ ಕನ್ನಡ, ತೆಲುಗು ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ. ಶುಕ್ರವಾರ ಬೆಂಗಳೂರಿನ ಸ್ಟಾರ್‌ ಹೋಟೆಲ್‌ವೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರತಂಡ ಘೋಷಣೆ ಮಾಡಿತು.

    ಧ್ರುವ ಸರ್ಜಾ ಪ್ಯಾನ್ ಇಂಡಿಯಾ 'ಮಾರ್ಟಿನ್' ಬಿಡುಗಡೆ ದಿನಾಂಕ ಘೋಷಣೆ!

    ಮಾರ್ಟಿನ್ ಸಿನಿಮಾ ಬಹುಕೋಟಿ ಸಿನಿಮಾ ಆಗಿದೆ. ಹೆಚ್ಚು ಕಡಿಮೆ 240 ದಿನ ಇದರ ಚಿತ್ರೀಕರಣ ಆಗಿದೆ. ಡೈರೆಕ್ಟರ್ ಎ.ಪಿ.ಅರ್ಜುನ್ ಇದನ್ನ ವಿಶೇಷವಾಗಿಯೇ ತೆಗೆದಿದ್ದಾರೆ. ಆ್ಯಕ್ಷನ್ ಮಾಸ್ಟರ್ ರವಿ ವರ್ಮಾ ಮತ್ತು ರಾಮ್-ಲಕ್ಷ್ಮಣ ಚಿತ್ರಕ್ಕೆ ಅದ್ಭುತ ಆ್ಯಕ್ಷನ್ ಮಾಡಿಕೊಟ್ಟಿದ್ದಾರೆ. ಸತ್ಯ ಹೆಗಡೆ ಛಾಯಾಚಿತ್ರಗ್ರಹಣ ಮಾಡಿದ್ದಾರೆ.

    Dhruva Sarja Martin Film

    ಈ ಸಿನಿಮಾದಲ್ಲಿ ಇರೋ ಆ್ಯಕ್ಷನ್‌ಗಳು ತುಂಬಾನೆ ಥ್ರಿಲ್ಲಿಂಗ್ ಆಗಿವೆ. ಸಿನಿಮಾ ಟೀಸರ್ ಅದರ ಝಲಕ್ ಕೊಟ್ಟಿವೆ. ಇಡೀ ಸಿನಿಮಾದಲ್ಲಿ ಇನ್ನು ಏನೆಲ್ಲ ಇರುತ್ತದೆ ಅನ್ನೋದೆ ಸದ್ಯದ ಕುತೂಹಲ ಆಗಿದೆ.

    ಧ್ರುವ ಸರ್ಜಾ ಪ್ಯಾನ್ ಇಂಡಿಯಾ 'ಮಾರ್ಟಿನ್' ಬಿಡುಗಡೆ ದಿನಾಂಕ ಘೋಷಣೆ!

    ಮಾರ್ಟಿನ್ ಸಿನಿಮಾದ ಕಥೆಯನ್ನ ಅರ್ಜುನ್ ಸರ್ಜಾ ಅವರು ಬರೆದಿದ್ದಾರೆ. ಈ ಕಥೆಯನ್ನೆ ಡೈರೆಕ್ಟರ್ ಎ.ಪಿ.ಅರ್ಜುನ್ ಅದ್ಭುತವಾಗಿಯೇ ತೆರೆ ಮೇಲೆ ತಂದಿದ್ದಾರೆ. ಈ ಮೂಲಕ ಇಡೀ ಒಂದು ಕಥೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಹೊಸ ಮತ್ತು ಅತಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಪೊಗರು ಸಿನಿಮಾ ಬಳಿಕ 3 ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಧ್ರುವ ಸರ್ಜಾ ಮತ್ತೊಂದು ಸಿನಿಮಾ ಬಿಡುಗಡೆಯಾಗಲಿದೆ.

    ಪುಣೆ ಪೋರ್ಶೆ ಕಾರು ಅಪಘಾತ: ಸುಪ್ರೀಂ ಕೋರ್ಟ್ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದ ಮೃತರ ಪೋಷಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts