More

    8100 ಗಿಡಗಳನ್ನು ನೆಡಲು ಯೋಜನೆ

    ಮುದ್ದೇಬಿಹಾಳ: ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಹವಾಮಾನ ಇಲಾಖೆಯಿಂದ ಲಭ್ಯವಾಗಿದೆ. ಮಳೆಗಾಲ ಹೊಸದಾಗಿ ಸಸಿ, ಗಿಡಗಳನ್ನು ನೆಡಲು ಅತ್ಯುಪಯುಕ್ತ ಕಾಲವಾಗಿದೆ. ಹೀಗಾಗಿ ಜಿಲ್ಲಾ ಪಂಚಾಯತ ಯೋಜನೆಯಡಿ 3900 ಹಾಗೂ ರಾಜ್ಯ ಯೋಜನೆ ಅಡಿ 4200 ಸೇರಿ ಒಟ್ಟು 8100 ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ. ಸಂಗಾಲಿಕ ಹೇಳಿದರು.

    ವಿಜಯಪುರ ರಸ್ತೆ ಪಕ್ಕದಲ್ಲಿರುವ ಬಸರಕೋಡ ಕ್ರಾಸ್ ಹತ್ತಿರ ಗುಡಿಹಾಳದ 4 ಕಿಮಿ ರಸ್ತೆಯ ಎರಡೂ ಬದಿ ಅರಣ್ಯ ಇಲಾಖೆ ವತಿಯಿಂದ 945 ಗಿಡಗಳನ್ನು ನೆಡುವ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

    ಪ್ರತಿ ವರ್ಷದಂತೆ ಈ ವರ್ಷವೂ ರೈತರಿಗೆ ರಾಷ್ಟ್ರೀಯ ಕಷಿ ವಿಕಾಸ ಯೋಜನೆಯಡಿ ರಿಯಾಯಿತಿ ದರದಲ್ಲಿ ಶ್ರೀಗಂಧ, ರಕ್ತ ಚಂದನ, ಸಾಗವಾನಿ, ಮಹಾಗಣಿ, ಹೆಬ್ಬೇವು, ಸೀತಾಲ, ಕರಿಬೇವು, ಲಿಂಬೆ, ಪೇರಲ ಸೇರಿದಂತೆ 32 ವಿಧದ ಗಿಡಗಳನ್ನು ರೈತರಿಗೆ ಕೊಡಲಾಗುತ್ತದೆ. ಆಸಕ್ತ ರೈತರು ತಮ್ಮ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಹೊಲದ ಉತಾರದ ಝರಾಕ್ಸ್ ಪ್ರತಿಗಳನ್ನು ಅರಣ್ಯ ಇಲಾಖೆಗೆ ನೀಡಿ ಕೇಸಾಪೂರ ಹತ್ತಿರ ಇರುವ ಸಾಮಾಜಿಕ ಅರಣ್ಯ ಇಲಾಖೆಯ ಕೋಳೂರು ಸಸ್ಯಪಾಲನಾಲಯದಿಂದ ಅಗತ್ಯ ಸಸಿ, ಗಿಡಗಳನ್ನು ಪಡೆದುಕೊಳ್ಳಬಹುದು ಎಂದರು.

    ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾರಾರ, ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ. ವೀರೇಶ ಇಟಗಿ, ಕಾರ್ಯದರ್ಶಿ ಬಿ.ಎಚ್. ಬಳಬಟ್ಟಿ, ಬಳಗದ ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಬಿ.ಎಸ್. ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ, ವಿ.ಎಸ್.ಪಾಟೀಲ, ಸುರೇಶ ಕಲಾಲ, ಸಂಜೀವ ಕಡೂರ, ಆದೇಶ ಕೋಳೂರ, ಅರಣ್ಯ ಇಲಾಖೆಯ ಎಆರ್‌ಎ್ಓ ಎಅನೀಲ ರಾಠೋಡ, ಅನೀಲ ಚವ್ಹಾಣ, ಪರಮಾನಂದ ಪಾಟೀಲ, ಬಸವರಾಜ ಬ್ಯಾಕೋಡ, ನಿರ್ಮಲಾ ಸಿದ್ನಾಳ, ಶ್ರೀನಿಧಿ ಬಿರಾದಾರ ಸೇರಿ ಹಲವರು ಪಾಲ್ಗೊಂಡಿದ್ದರು.

    ಗಿಡಗಳ ನೆಡುವಿಕೆಗೆ ಚಾಲನೆ ನೀಡುವುದಕ್ಕೂ ಮುನ್ನ ನಿಗದಿತ ಗಿಡದ ಸ್ಥಳವನ್ನು ಚೊಕ್ಕಟಗೊಳಿಸಿ, ರಂಗೋಲಿ ಹಾಕಿ ಅಲಂಕರಿಸಲಾಗಿತ್ತು. ಕೋಳೂರ ಗ್ರಾಮದ ಸಂತೋಷ ಹಿರೇಮಠ ಅವರು ಪೂಜಾ ವಿಧಿ ವಿಧಾನ ನಡೆಸಿಕೊಡುವ ಮೂಲಕ ವಿಶೇಷತೆ ತೋರಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts