More

    ತೋಟಗಾರಿಕೆ ಕ್ಷೇತ್ರ ಹಾಗೂ ನರ್ಸರಿಗಳಲ್ಲಿ ವಿವಿಧ ಸಸಿಗಳು ಮಾರಾಟಕ್ಕೆ ಲಭ್ಯ

    ಹಾವೇರಿ: ಜಿಲ್ಲೆಯ ತೋಟಗಾರಿಕೆ ಇಲಾಖೆಯ ಅಧೀನದ ತೋಟಗಾರಿಕೆ ಕ್ಷೇತ್ರ ಹಾಗೂ ನರ್ಸರಿಗಳಲ್ಲಿ ಉತ್ತಮ ಗುಣಮಟ್ಟದ ಕಸಿ ಮತ್ತು ಸಸಿಗಳು ರೈತರಿಗೆ ಹಾಗೂ ಸಾರ್ವಜನಿಕರಿಗೆ ಇಲಾಖೆಯ ಎಸ್.ಆರ್. ದರದಲ್ಲಿ ನೀಡಲಾಗುತ್ತದೆ.
    ಹಾನಗಲ್ಲ, ಸವಣೂರ ಹಾಗೂ ಯತ್ತಿನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಅಡಕೆ (25ರೂ.) ಸಸಿಗಳು, ಚೌಡಯ್ಯದಾನಪುರ, ಹಂಸಭಾವಿ, ಸವಣೂರ ತೋಟಗಾರಿಕೆ ಕ್ಷೇತ್ರದಲ್ಲಿ ತೆಂಗು (75 ರೂ.) ಸಸಿಗಳು, ಹಾನಗಲ್ಲ ತೋಟಗಾರಿಕೆ ಕ್ಷೇತ್ರದಲ್ಲಿ ತೆಂಗು ಹೈಬ್ರಿಡ್(170ರೂ.) ಸಸಿಗಳು, ಸವಣೂರ ತೋಟಗಾರಿಕೆ ಕ್ಷೇತ್ರದಲ್ಲಿ ಕರಿಬೇವು(15 ರೂ.) ಸಸಿಗಳು, ಸವಣೂರ ಹಾಗೂ ಯತ್ತಿನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ನಿಂಬೆ (20 ರೂ. ಹಾಗೂ 30 ರೂ.) ಸಸಿಗಳು, ಸವಣೂರ ಹಾಗೂ ಯತ್ತಿನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಮಾವು (42ರೂ.) ಹಾಗೂ ಹಾವೇರಿ ಕಚೇರಿ ನರ್ಸರಿಯಲ್ಲಿ ಅಲಂಕಾರಿಕ ಗಿಡಗಳು (25ರೂ.) ಮಾರಾಟಕ್ಕೆ ಲಭ್ಯವಿದೆ ಎಂದು ತೋಟಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts