More

    ಕನ್ನಡಕ್ಕೆ ಕುಂದುಂಟಾದಾಗಲೆಲ್ಲ ಧ್ವನಿಯೆತ್ತಿದೆ ಸಂಘಟನೆ : ಡಾ.ಸೋಮಣ್ಣ ಅಭಿಮತ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ

    ಕಸಾಪ ಏಕೀಕರಣ ಹೋರಾಟ ಸಂದರ್ಭ ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದಾಗಿಸುವ ಉದ್ದೇಶದಿಂದ ಹುಟ್ಟಿಕೊಂಡ ಸಂಘಟನೆ, ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ, ನಂಜುಂಡಯ್ಯ ಮೊದಲಾದ ಹಿರಿಯರ ಹೋರಾಟ, ಸಂಕಲ್ಪ ಶಕ್ತಿಯಿಂದ ರೂಪುಗೊಂಡ ಈ ಸಂಸ್ಥೆ ಕನ್ನಡಕ್ಕೆ ಕುಂದುಂಟಾದಾಗಲೆಲ್ಲ ಧ್ವನಿಯೆತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ.ಸೋಮಣ್ಣ ಹೇಳಿದರು.
    ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕದ ವತಿಯಿಂದ ವಿ.ವಿ.ಯ ಕನ್ನಡ ವಿಭಾಗದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಆಶಯ ಭಾಷಣ ಮಾಡಿದರು.

    ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಪ್ರಾಧ್ಯಾಪಕ ಡಾ.ನಾಗಪ್ಪ ಗೌಡ ಮಾತನಾಡಿ, ಕನ್ನಡ ಭಾಷೆ, ನಾಡಿನ ರಕ್ಷಣೆಗೆ ಹುಟ್ಟಿಕೊಂಡ ಪರಿಷತ್ತು ಕನ್ನಡದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕನ್ನಡಿಗರಿಗೆ ಉದ್ಯೋಗ ಸಿಗುವಂತೆ ಮಾಡುವ ಹೋರಾಟ ತೀವ್ರಗೊಳ್ಳಬೇಕು ಎಂದರು.

    ಕಸಾಪ ಉಳ್ಳಾಲ ತಾಲೂಕು ಘಟಕ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ. ಸಿಂಡಿಕೇಟ್ ಸದಸ್ಯ ಅಚ್ಯುತ ಗಟ್ಟಿ, ಕಸಾಪ ಪದಾಧಿಕಾರಿಗಳಾದ ಸುರೇಂದ್ರ ರೈ ಗ್ರಾಮಚಾವಡಿ, ರಾಧಾಕೃಷ್ಣ ರಾವ್, ರಹಮಾನ್ ಎ.ಕೆ. ಉಪಸ್ಥಿತರಿದ್ದರು. ಕಸಾಪ ಗೌರವ ಕಾರ್ಯದರ್ಶಿ ರವೀಂದ್ರ ರೈ ಹರೇಕಳ ಸ್ವಾಗತಿಸಿದರು. ಕೋಶಾಧಿಕಾರಿ ಚಂದ್ರಹಾಸ ಶೆಟ್ಟಿ ವಂದಿಸಿದರು.

    ಸಾಹಿತ್ಯ ಪರಿಷತ್ತು ಸ್ಥಾಪನೆ ಪೂರ್ವದಲ್ಲಿಯೇ ಧಾರವಾಡ ವಿದ್ಯಾವರ್ಧಕ ಸಂಘ ಸ್ಥಾಪನೆಗೊಂಡು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಏಕೀಕರಣ ಹೋರಾಟ ಆರಂಭಗೊಂಡಿತು. ಆದರೆ ಸಾಹಿತ್ಯ ಪರಿಷತ್ತು ಸ್ಥಾಪನೆ ಹಾಗೂ ಮೈಸೂರು ವಿವಿಯ ಸ್ಥಾಪನೆ ಕನ್ನಡ ಹೋರಾಟಕ್ಕೆ ವಿಶೇಷ ಶಕ್ತಿ ತುಂಬಿತು.
    – ಡಾ.ಸೋಮಣ್ಣ, ಅಧ್ಯಕ್ಷರು,
    ಮಂಗಳೂರು ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts