ಸುಶಾಂತ್​ ಸಿಂಗ್​ ಸಾವಿನಲ್ಲಿ ರಿಯಾ ಚಕ್ರವರ್ತಿಯೇ ಸುಪಾರಿ ಕಿಲ್ಲರ್​; ಸಿಡಿದೆದ್ದ ಬಿಹಾರ ಸಚಿವ

Rhea- maheshwar-hajari
Published on

ಪಟನಾ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣವೀಗ ಇನ್ನಷ್ಟು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಕೇಸ್​ನೊಂದಿಗೆ ರಾಜಕೀಯ ಕೂಡ ಅಷ್ಟೇ ಜೋರಾಗಿಯೇ ತಳಕು ಹಾಕಿಕೊಂಡಿದೆ.

ಬಿಹಾರದ ಜೆಡಿಯು ನಾಯಕ ಹಾಗೂ ಸಚಿವ ಮಹೇಶ್ವರಿ ಹಜಾರಿ ಭಾರಿ ಹೇಳಿಕೆ ನೀಡುವುದರೊಂದಿಗೆ ಸುಶಾಂತ್​ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಹರಿಹಾಯ್ದಿದ್ದಾರೆ.

ರಿಯಾ ಚಕ್ರವರ್ತಿ ವಿಷಕನ್ಯೆಯಿದ್ದಂತೆ. ಆಕೆ ಸುಪಾರಿ ಕಿಲ್ಲರ್ ರೀತಿಯಲ್ಲಿ ಕೆಲಸ ಮಾಡಿದ್ದಾಳೆ. ಸುಶಾಂತ್​ನನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ತನ್ನ ಕಾರ್ಯ ಸಾಧಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ದೇಶದ ಮೂಲೆಮೂಲೆಗಳಿಂದ ಪ್ರತಿಭಾವಂತರು ಚಲನಚಿತ್ರ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಲು ಬಯಸುತ್ತಾರೆ. ಆದರೆ, ಅವರ ವಿರುದ್ಧ ಕೆಲಸ ಮಾಡುವ ಬಹುದೊಡ್ಡ ಗ್ಯಾಂಗ್​ ಕೂಡ ಅಲ್ಲಿದೆ. ಭಾರಿ ಷಡ್ಯಂತ್ರವನ್ನು ನಡೆಸಿಯೇ ರಿಯಾಳನ್ನು ಸುಶಾಂತ್​ ಬಳಿಗೆ ಕಳುಹಿಸಲಾಗಿತ್ತು ಎಂದು ಅವರು ದೂರಿದ್ದಾರೆ.

ಸರ್ಕಾರ ಸುಶಾಂತ್​ ಕುಟುಂಬದವರು, ಆತನ ಅಭಿಮಾನಿಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿದೆ ಎಂದು ಹೇಳಿರುವ ಹಜಾರಿ, ಪ್ರಕರಣದ ಸಿಬಿಐ ತನಿಖೆ ನಡೆಸಬೇಕು ಎಂಬುದನ್ನು ಬೆಂಬಲಿಸುತ್ತೇನೆ. ತನಿಖೆ ನಡೆಸಿದ್ದೇ ಆದಲ್ಲಿ, ತಾನು ಹೇಳಿರುವ ಸತ್ಯವೇ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ನಡುವೆ ರಿಯಾ ಚಕ್ರವರ್ತಿಯ ಇಡೀ ಕುಟುಂಬದ ವಿರುದ್ಧವೇ ಸುಶಾಂತ್​ ಸಿಂಗ್​ ತಂದೆ ಕೆ.ಕೆ. ಸಿಂಗ್​ ದೂರು ನೀಡಿದ್ದಾರೆ. ರಿಯಾ ತಂದೆ ಇಂದ್ರಜಿತ್​ ಚಕ್ರವರ್ತಿ, ತಾಯಿ ಸಂಧ್ಯಾ, ಸಹೋದರ ಶೋವಿಕ್​ ಚಕ್ರವರ್ತಿ ಹಾಗೂ ಶ್ರುತಿ ಮೋದಿ ವಿರುದ್ಧ ದೂರು ನೀಡಿದ್ದಾರೆ.

ಸುಶಾಂತ್​ನನ್ನು ಆರ್ಥಿಕವಾಗಿ ರಿಯಾ ದಿವಾಳಿ ಮಾಡಿದ್ದಳು. ಆಕೆಯ ಇಡೀ ಕುಟುಂಬವೇ ಇದರಲ್ಲಿ ಭಾಗಿಯಾಗಿತ್ತು ಎಂದು ಕೆ.ಕೆ. ಸಿಂಗ್​ ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net