

ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಕೇಸಿನಲ್ಲಿ, ಗೆಳತಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಅವರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ತನಿಖೆ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹೊಸ ವಿಷಯವೆಂದರೆ, ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ರಿಯಾ ಕೆನ್ನೆಗೆ, ನೂಪರ್ ಪ್ರಸಾದ್ ಬಾರಿಸಿದ್ದಾರೆ ಎಂಬ ಸುದ್ದಿಯೊಂದು ಓಡಾಡುತ್ತಿದೆ.
ಹೌದು, ರಿಯಾ ಚಕ್ರವರ್ತಿ ಅವರನ್ನು ತನಿಖೆ ಮಾಡುವುದಕ್ಕೆಂದು ಅಧಿಕಾರಿ ನೂಪುರ್ ಪ್ರಸಾದ್ ಎನ್ನುವವರನ್ನು ಮುಂಬೈಗೆ ಕರೆಸಲಾಗಿದ್ದು, ಕೆಲವು ದಿನಗಳಿಂದ ಅವರು ವಿಚಾರಣೆ ಮಾಡುತ್ತಿದ್ದಾರೆ. ಆದರೆ, ಈ ವಿಚಾರಣೆಯಲ್ಲಿ ರಿಯಾ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಆಕೆಯ ಕೆನ್ನೆಗೆ ನೂಪುರ್ ಪ್ರಸಾದ್ ಎಂಬ ಸುದ್ದಿ ಕೇಳಿ ಬಂದಿದೆ.
ಈ ಸುದ್ದಿ ನಿಜವೋ ಅಥವಾ ಸುಳ್ಳೋ ಗೊತ್ತಿಲ್ಲ. ಆದರೆ, ಇಂಟರ್ನೆಟ್ನಲ್ಲಿ ಇಂಥದ್ದೊಂದು ಸುದ್ದಿ ಜೋರಾಗಿ ಓಡಾಡುತ್ತಿದ್ದು, ಬಹಳಷ್ಟು ಜನ ಈ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಸುಶಾಂತ್ ಅಭಿಮಾನಿಗಳಂತೂ, ರಿಯಾ ಕಪಾಳಕ್ಕೆ ಅಧಿಕಾರಿಯೊಬ್ಬರು ಹೊಡೆದರು ಎಂಬ ವಿಷಯವನ್ನು ಕೇಳಿ ಸಂತೋಷದಿಂದ ಕುಣಿದಾಡುತ್ತಿದ್ದಾರೆ. ಅಷ್ಟೇ ಅಲ್ಲ, ಇದು ತಮಗೆ ಸಂತೋಷದ ವಿಷಯ ಎಂದು ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ.
ಕೆಲವರು ಇದು ತಮ್ಮ ಪಾಲಿಗೆ ಸಂತೋಷದ ವಿಷಯ ಎಂದರೆ, ಇಂಥದ್ದೊಂದು ಕ್ಷಣಕ್ಕಾಗಿ ಕಾಯುತ್ತಿದ್ದೆ ಎಂದು ಇನ್ನೂ ಕೆಲವರು ಹೇಳಿಕೊಂಡಿದ್ದಾರೆ. ಕೆಲವರಂತೂ ರಿಯಾ ಅವರನ್ನು ಎರಡು ತಲೆಯ ಹಾವು ಎಂದು ಕರೆದಿದ್ದು, ಆಕೆಗೆ ಹೊಡೆದಿದ್ದು ಇಲ್ಲಿಯವರೆಗೂ ಕೇಳಿದರೆ ಎಷ್ಟು ಚೆನ್ನಾಗಿರುತಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಗೌರವ್ ಮಿಶ್ರ ಎನ್ನುವವರು ಟ್ವೀಟ್ ಮಾಡಿದ್ದು, ರಿಯಾಗೆ ಕಪಾಳಕ್ಕೆ ಹೊಡೆದಿದ್ದು ನಿಜವಾ ಎಂದು ಪ್ರಶ್ನಿಸಿದ್ದಾರೆ. ಒಂದು ಪಕ್ಷ ಹೊಡೆದಿದ್ದರೆ ತಮಗೆ ಬಹಳ ಖುಷಿಯಾಗುತ್ತದೆ, ಹೊಡೆಯದಿದ್ದರೆ, ನನ್ನದೂ ಸೇರಿಸಿ ಎರಡು ಬಾರಿಸಿ ಎಂದು ಹೇಳಿದ್ದಾರೆ.