More

    ಸನ್ನಿ ಲಿಯೋನ್​ ಬಳಿಕ ಪದವಿ ಕಾಲೇಜು ಪ್ರವೇಶ ಪಡೆದ ಗಾಯಕಿ ನೇಹಾ ಕಕ್ಕರ್​!

    ಕೋಲ್ಕತಾ: ಪದವಿ ಕಾಲೇಜಿನ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್‌ ತಾರೆ ಸನ್ನಿ ಲಿಯೋನ್‌ ಹೆಸರು ಕಾಣಿಸಿಕೊಂಡು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದಂಗಾದ ಘಟನೆ ಕೋಲ್ಕತಾದಲ್ಲಿ ನಿನ್ನೆಯಷ್ಟೇ ನಡೆದಿತ್ತು.

    ಇದನ್ನೂ ಓದಿ: ಪದವಿ ಕಾಲೇಜಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್? ಉಪನ್ಯಾಸಕರು, ವಿದ್ಯಾರ್ಥಿಗಳಲ್ಲಿ ಸಂಚಲನ!

    ಕೋಲ್ಕತಾ ಕಾಲೇಜಿನ ಪದವಿಪೂರ್ವ ತರಗತಿ ಮುಗಿಸಿ ಮೊದಲ ವರ್ಷದ ಬಿಎಗೆ (ಆನರ್ಸ್‌) ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಸನ್ನಿ ಲಿಯೋನ್‌ ಹೆಸರು ಇತ್ತು. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

    ಸನ್ನಿ ಲಿಯೋನ್​ ಬಳಿಕ ಪದವಿ ಕಾಲೇಜು ಪ್ರವೇಶ ಪಡೆದ ಗಾಯಕಿ ನೇಹಾ ಕಕ್ಕರ್​!
    ಬಾಲಿವುಡ್​ನ ಖ್ಯಾತ ಗಾಯಕಿಯ ನೇಹಾ ಕಕ್ಕರ್​ ಹೆಸರು ಕಾಲೇಜಿನ ನೋಟಿಸ್ ಬೋರ್ಡ್​ನಲ್ಲಿ ಕಾಣಿಸಿಕೊಂಡಿದೆ. ಮಾಲ್ಡಾ ಜಿಲ್ಲೆಯ ಮಾಣಿಕ್​ಚಿಕ್​ ಕಾಲೇಜಿನಲ್ಲಿ ಬಿಎ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು. ಆ ಪಟ್ಟಿಯಲ್ಲಿ ನೇಹಾ ಹೆಸರು ಮೊದಲಿಗೆ ಇದ್ದುದನ್ನು ಕಂಡ ವಿದ್ಯಾರ್ಥಿಗಳು ದಂಗಾಗಿ ಹೋಗಿದ್ದಾರೆ.

    ಇದನ್ನೂ ಓದಿ: ಸಿಸಿಬಿ ಕಚೇರಿಗೆ ಬಂದ ಇಂದ್ರಜಿತ್​ ಲಂಕೇಶ್​; ಡ್ರಗ್ಸ್​ ದಂಧೆಯಲ್ಲಿರುವ ಎಲ್ಲರ ಹೆಸರನ್ನೂ ಹೇಳ್ತಾರಂತೆ !

    ಅಂದಹಾಗೆ, ಮೆರಿಟ್​ ಪಟ್ಟಿ ಸಿದ್ಧಮಾಡಿಕೊಡುವ ಬಗ್ಗೆ ಕೊಲ್ಕತ್ತ ಮೂಲದ ಸಂಸ್ಥೆ ಜತೆಗೆ ಕಾಲೇಜು ಮಂಡಳಿ ಒಪ್ಪಂದ ಮಾಡಿಕೊಂಡಿತ್ತು. ಆ ಸಂಸ್ಥೆ ಮಾಡಿದ ಯಡವಟ್ಟಿನಿಂದ ಈ ರೀತಿಯಾಗಿದೆ ಎಂದು ಕಾಲೇಜಿನ ಪ್ರಿನ್ಸಿಪಾಲ್​ ತಿಳಿಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಲಾಗಿದ್ದು, ಸೈಬರ್​ ಕ್ರೈಂ ಗಮನಕ್ಕೂ ತರಲಾಗಿದೆ. (ಏಜೆನ್ಸೀಸ್​)

    ಪ್ರಮೋದ್​ ಶೆಟ್ಟಿ ಅಲಿಯಾಸ್​ ಲಾಫಿಂಗ್​ ಬುದ್ಧನ ದಡೂತಿ ಅವತಾರ ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts