ಪ್ರಮೋದ್​ ಶೆಟ್ಟಿ ಅಲಿಯಾಸ್​ ಲಾಫಿಂಗ್​ ಬುದ್ಧನ ದಡೂತಿ ಅವತಾರ ಬಹಿರಂಗ

collage (25)
Published on

ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದ ನಟ ಪ್ರಮೋದ್ ಶೆಟ್ಟಿ ಒಂದು ಶಿಕಾರಿಯ ಕಥೆ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಸಿನಿಮಾ ಬತ್ತಳಿಕೆಗೆ ಹೊಸ ಸಿನಿಮಾವೊಂದು ಸೇರ್ಪಡೆಗೊಂಡಿದೆ. ಅದೇ ಲಾಫಿಂಗ್​ ಬುದ್ಧ.

ಈ ಹಿಂದೆಯೇ ಲಾಫಿಂಗ್​ ಬುದ್ಧ ಸಿನಿಮಾದಲ್ಲಿ ಪ್ರಮೋದ್​ ಶೆಟ್ಟಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತಾದರೂ, ಚಿತ್ರದಲ್ಲಿ ಅವರ ಲುಕ್​ ಹೇಗಿರಲಿದೆ. ಅವರು ನಿಭಾಯಿಸುವ ಕೆಲಸ ಎಂಥದ್ದು ಎಂಬ ಬಗ್ಗೆ ಚಿತ್ರತಂಡ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಆ ವಿಚಾರ ಬಹಿರಂಗವಾಗಿದೆ.

ಅಂದರೆ, ಇಂದು ಪ್ರಮೋದ್​ ಶೆಟ್ಟಿ ಅವರ ಜನ್ಮದಿನ. ಆ ನಿಮಿತ್ತ ಚಿತ್ರ ನಿರ್ಮಾಪಕ ರಿಷಬ್​ ಶೆಟ್ಟಿ, ಸಿನಿಮಾದ ಫಸ್ಟ್ ಲುಕ್​ ಬಿಡುಗಡೆ ಮಾಡಿದ್ದಾರೆ. ಪೊಲೀಸ್​ ಇನ್​ಸ್ಪೆಕ್ಟರ್ ಅವತಾರದಲ್ಲಿ ಎದುರಾಗಿರುವ ಅವರು, ದಡೂತಿ ದೇಹವನ್ನೂ ಹೊಂದಿದ್ದಾರೆ.

ಸದ್ಯಕ್ಕೆ ಫಸ್ಟ್​ ಲುಕ್​ ಬಿಡುಗಡೆ ಮಾಡಿಕೊಂಡಿರುವ ಚಿತ್ರತಂಡ, ಶೀಘ್ರದಲ್ಲಿ ಶೂಟಿಂಗ್​ ಆರಂಭಿಸಲು ಯೋಜನೆ ರೂಪಿಸಿದೆ. ರಿಷಬ್ ಜತೆ ವಿಕಾಸ್​ ಮತ್ತು ಶ್ರೀಕಾಂತ್​ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಎಂ. ಭರತ್ ರಾಜ್​ ನಿರ್ದೇಶನ, ದೀಪಕ್​ ಛಾಯಾಗ್ರಹಣ ನಿಭಾಯಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net