More

    ಡ್ರಗ್ಸ್ ಕೇವಲ ಸ್ಯಾಂಡಲ್​​ವುಡ್​ ಅಲ್ಲ..ಇಡೀ ಕರ್ನಾಟಕಕ್ಕೇ ಅಂಟಿದ ಕಳಂಕ: ನಟ ದರ್ಶನ್​

    ದಾವಣಗೆರೆ: ಇಂದು ಸಿಸಿಬಿ ಕಚೇರಿಯಲ್ಲಿ ಇಂದ್ರಜಿತ್ ಲಂಕೇಶ್​ ಅವರ ವಿಚಾರಣೆ ನಡೆಯುತ್ತಿದ್ದು, ಅವರ ಲ್ಯಾಪ್​ಟಾಪ್​​ನಲ್ಲಿ ಖ್ಯಾತ ನಟಿಯೋರ್ವಳು ನಶೆಯಲ್ಲಿ ತೇಲುತ್ತಿರುವ ಫೋಟೋ ಇದೆ ಎಂಬ ಮಾಹಿತಿಯೂ ಸಿಕ್ಕಿದೆ.

    ಅದರ ಬೆನ್ನಲ್ಲೇ ದಾವಣಗೆರೆಗೆ ಖಾಸಗಿ ಕಾರ್ಯಕ್ರಮಕ್ಕೆ ತೆರಳಿರುವ ನಟ ದರ್ಶನ್​ ಅವರು ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್​ ದಂಧೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಇಂಡಸ್ಟ್ರಿಗೆ ಬಂದು 26 ವರ್ಷವಾಯಿತು. ಓರ್ವ ಲೈಟ್​ಮ್ಯಾನ್​ ಆಗಿ..ಇಲ್ಲಿಯವರೆಗೆ ಇದ್ದೇನೆ. ಆದರೆ ಒಂದು ದಿನವೂ ಡ್ರಗ್ಸ್​ ಬಗ್ಗೆ ಕೇಳಿಯೇ ಇರಲಿಲ್ಲ. ನನಗೆ ಅದು ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರೊನಾ ಕೋಲಾಹಲ: ಶಾಸಕರೇ ನೀವು ಸೋಂಕಿತರು ಎನ್ನುವಷ್ಟರಲ್ಲಿಯೇ ಬಂತು ನೆಗೆಟಿವ್‌ ವರದಿ!

    ಸದ್ಯ ಡ್ರಗ್ಸ್​ ಮಾಫಿಯಾ ಬಗ್ಗೆ ವಿವರಗಳು, ದಾಖಲೆಗಳೆಲ್ಲ ಪೊಲೀಸರ ಕೈಯಲ್ಲಿ ಇದೆ. ಅವರು ಹೇಳಲಿ..ಅದಕ್ಕೂ ಮೊದಲೇ ನೀವೇ ಯಾಕೆ ಆ ನಟ..ಈ ನಟಿ ಎಂದು ಹೇಳುತ್ತಿದ್ದೀರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.  ಡ್ರಗ್ಸ್​ ಎಂಬುದು ಕೇವಲ ಸ್ಯಾಂಡಲ್​ವುಡ್​​ನಲ್ಲಿ ಮಾತ್ರವಲ್ಲ…ಇಡೀ ಕರ್ನಾಟಕಕ್ಕೇ ಅಂಟಿದ ಕಳಂಕ ಅದು. ಸುಮ್ಮನೆ ಮಾತನಾಡಬಾರದು ಎಂದು ದರ್ಶನ್​ ಹೇಳಿದರು.

    ಹಾಗೇ ಮೃತ ನಟ ಚಿರಂಜೀವಿ ಸರ್ಜಾ ಹೆಸರು ಕೇಳಿಬರುತ್ತಿದೆ. ಇದು ಸರಿಯಲ್ಲ. ಪಾಪ ಅವರು ಸತ್ತು ಮೂರು ತಿಂಗಳು ಆಯಿತು..ಯಾರೇ ಆಗಿರಲಿ..ಅವರು ಸತ್ತ ಮೇಲೆ ಒಳ್ಳೆಯ ಮಾತಾಡಬೇಕು. ಹಾಗೊಮ್ಮ ತಪ್ಪು ನಡೆದಿದ್ದರೂ ಈಗ ಶಿಕ್ಷೆ ನೀಡಲು ಸಾಧ್ಯ ಇದೆಯಾ ಎಂದೂ ಪ್ರಶ್ನಿಸಿದ್ದಾರೆ.

    ಪೊಲೀಸರೇ ಸ್ಪಷ್ಟವಾದ ಮಾಹಿತಿ ನೀಡುವವರೆಗೂ ಈ ಬಗ್ಗೆ ಮಾತನಾಡದೆ ಇರುವುದೇ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಿಸಿಬಿ ಕಚೇರಿಗೆ ಬಂದ ಇಂದ್ರಜಿತ್​ ಲಂಕೇಶ್​; ಡ್ರಗ್ಸ್​ ದಂಧೆಯಲ್ಲಿರುವ ಎಲ್ಲರ ಹೆಸರನ್ನೂ ಹೇಳ್ತಾರಂತೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts