ಆ ಪೇಂಟಿಂಗ್ ನೋಡಿದಾಗ ಸುಶಾಂತ್ಗೆ ಏನಾಯ್ತು? ರಿಯಾ ಹೇಳ್ತಾರೆ ಕೇಳಿ

Sushant Singh - Rhea Chakraborty
Published on

ಸುಶಾಂತ್ ಸಿಂಗ್ ರಜಪೂತ್ ಕಳೆದ ವರ್ಷ ಗೆಳತಿ ರಿಯಾ ಚಕ್ರವರ್ತಿ ಜತೆಗೆ ಯೂರೋಪ್‍ಗೆ ಹೋಗಿ ಬಂದಿದ್ದು ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಅಲ್ಲಿಂದ ಬಂದ ನಂತರ ಅವರಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಅವರ ಆಪ್ತವಲಯದವರು ಹೇಳಿದ್ದಾರೆ. ಇಷ್ಟಕ್ಕೂ ಸುಶಾಂತ್‍ಗೆ ಯೂರೋಪ್‍ನಲ್ಲಿದ್ದಾಗ ಏನಾಯಿತು?

ಈ ಬಗ್ಗೆ ರಿಯಾ ಚಕ್ರವರ್ತಿ ವಿಚಾರಣೆ ವೇಳೆಯಲ್ಲಿ ಬಾಯಿ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇಟಲಿಯ ಫ್ಲಾರೆನ್ಸ್‍ನಲ್ಲಿದ್ದಾಗ ಸುಶಾಂತ್ ಅವರಲ್ಲಿ ಒಂದು ಮಹತ್ತರ ಬದಲಾವಣೆಯಾಗಿದ್ದನ್ನು ರಿಯಾ ಅಧಿಕಾರಿಗಳ ಮುಂದೆ ಹೇಳಿದ್ದಾರಂತೆ.

ಅದರ ಪ್ರಕಾರ, ಫ್ಲೋರೆನ್ಸ್‍ನಲ್ಲಿ ಇದ್ದ ಸಂದರ್ಭದಲ್ಲಿ, 600 ವರ್ಷಗಳ ಹಳೆಯದಾದ ಒಂದು ಕಟ್ಟದಲ್ಲಿರುವ ಹೋಟೆಲ್‍ನಲ್ಲಿ ಸುಶಾಂತ್ ಮತ್ತು ರಿಯಾ ತಂಗಿದ್ದರಂತೆ. ಆ ಹೋಟೆಲ್‍ನಲ್ಲಿ ದೊಡ್ಡ ದೊಡ್ಡ ರೂಮ್‍ಗಳು ಮತ್ತು ಪೇಂಟಿಂಗ್‍ನಲ್ಲಿ ಇದ್ದವಂತೆ. ಒಂದು ಪೇಯಿಂಟಿಂಗ್‍ನಲ್ಲಿ ಸ್ಯಾಟರ್ನ್ ತನ್ನ ಮಗುವನ್ನು ತಿನ್ನುವ ದೃಶ್ಯವನ್ನು ಬಿಡಿಸಲಾಗಿತ್ತಂತೆ. ಇದನ್ನು ನೋಡಿ, ಸುಶಾಂತ್ ವಿಚಿತ್ರವಾಗಿ ವರ್ತಿಸುವುದಕ್ಕೆ ಶುರು ಮಾಡಿದರಂತೆ. ಒಂದು ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡುವುದಕ್ಕೆ ಶುರು ಮಾಡಿದರಂತೆ.

ಇನ್ನೊಂದು ರೂಮ್‍ನಲ್ಲಿ ರಿಯಾ ಬಂದ ನೋಡಿದಾಗ, ಸುಶಾಂತ್ ಸಾಕಷ್ಟು ಹೆದರಿದ್ದರಂತೆ. ಏನಾಯ್ತು ಅಂತ ಕೇಳಿದರೂ ಉತ್ತರ ಕೊಡಲಿಲ್ಲವಂತೆ. ಕೊನೆಗೆ ಸುಶಾಂತ್ ಅವರನ್ನು ಕರೆದುಕೊಂಡು ತಮ್ಮ ರೂಮ್‍ನಲ್ಲಿ ರಿಯಾ ಮಲಗಿಸಿಕೊಂಡರಂತೆ. ಆ ನಂತರ ಸುಶಾಂತ್ ಬಹಳ ಡಿಸ್ಟರ್ಬ್ ಆದಂತೆ ಕಂಡುಬಂದರಂತೆ. ಸುಶಾಂತ್‍ರಲ್ಲಾದ ಬದಲಾವಣೆಗಳಿಂದ ಭಯಗೊಂಡ ರಿಯಾ, ನಾಲ್ಕು ದಿನಗಳ ಮುಂಚಿತವಾಗಿಯೇ ಭಾರತಕ್ಕೆ ಕರೆದುಕೊಂಡು ಬಂದರಂತೆ.

ಭಾರತಕ್ಕೆ ಬಂದ ನಂತರ, ಸುಶಾಂತ್ ಅವರ ಕಂಡೀಷನ್ ಇನ್ನಷ್ಟು ಬಿಗಡಾಯಿಸಿತಂತೆ. ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಕೂಗುತ್ತಿದ್ದರಂತೆ. ಇನ್ನೊಮ್ಮೆ ವಿಚಿತ್ರವಾಗಿ ಅಳುತ್ತಿದ್ದರಂತೆ. ಸುಶಾಂತ್ ಈ ಕುರಿತು ಚಿಕಿತ್ಸೆ ಪಡೆಯುತ್ತಿದ್ದರೂ, ಮತ್ತೆ ಮೊದಲಿನಂತಾಗಲಿಲ್ಲ ಎಂದು ರಿಯಾ ಹೇಳಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಸುಶಾಂತ್ ಜತೆ ಇದ್ದೂಇದ್ದು ಅವರು ಸಹ ಡಿಪ್ರೆಶನ್‍ಗೆ ಒಳಗಾಗಿದ್ದರಂತೆ. ಜಾಗ ಬದಲಾದರೆ, ಸರಿ ಹೋಗಬಹುದು ಎಂಬ ಕಾರಣಕ್ಕೆ ಸುಶಾಂತ್ ಮನೆಯಿಂದ ಜೂನ್ 8ನೇ ತಾರೀಖು ತಮ್ಮ ಮನೆಗೆ ಹೊರಟಿದ್ದಾಗಿ ಹೇಳಿಕೊಂಡಿದ್ದಾರೆ. ಅದಾಗಿ ಎರಡು ದಿನಗಳಿಗೆ ಸುಶಾಂತ್ ಮೆಸೇಜ್ ಮಾಡಿ, ಆರೋಗ್ಯ  ವಿಚಾರಿಸಿದ್ದಾಗಿ ರಿಯಾ ಹೇಳಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net