ರಾಮ್​ಗೋಪಾಲ್​ ವರ್ಮಾಗೆ ಕರೊನಾ ಪಾಸಿಟಿವ್​!

Rgv
Published on

ಇತ್ತೀಚೆಗಷ್ಟೇ ನಿರ್ದೇಶಕ ರಾಮ್​ ಗೋಪಾಲ್​ ವರ್ಮಾಗೆ ಕರೊನಾ ಸೋಂಕು ತಗುಲಿದೆ ಎಂಬ ವಿಚಾರ ಹರಿದಾಡಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ಆರ್​ಜಿವಿ, ’ನನ್ನ ಬಗ್ಗೆ ಸಖತ್​ ರೂಮರ್​ಗಳು ಹಬ್ಬಿವೆ. ಆದರೆ, ನನಗೇನೂ ಇಲ್ಲ. ಸೂಪರ್​ ಫಿಟ್​ ಆಗಿದ್ದೇನೆ. ನಾನ್​-ಸ್ಟಾಪ್​ ಕೆಲಸ ಮಾಡುತ್ತಿರುವ ನಾನು, ಕೆಲವು ಆಸಕ್ತಿಕರ ಸಿನಿಮಾಗಳನ್ನು ಮಾಡುತ್ತಿದ್ದೇನೆ. ನನಗೆ ಹುಷಾರಿಲ್ಲ ಎಂದು ಕೆಲವರಿಗೆ ಖುಷಿಯಾಗಿರಬಹುದು. ಆದರೆ, ನಾನು ಸಖತ್​ ಫಿಟ್​ ಆಗಿದ್ದೇನೆ‘ ಎಂದಿದ್ದರು. ಇದೀಗ ಆ ಮಾತು ಉಲ್ಟಾ ಹೊಡೆದಿದೆ.

ಅಂದರೆ, ಫಿಟ್​ನೆಸ್​ ಬಗ್ಗೆ ವಿಡಿಯೋ ಪೋಸ್ಟ್ ಮಾಡಿ ತನಗೇನೂ ಆಗಿಲ್ಲ ಎಂದಿದ್ದ ರಾಮ್​ಗೋಪಾಲ್​ ವರ್ಮಾಗೆ ಕರೊನಾ ಪಾಸಿಟಿವ್​ ಇರುವುದು ದೃಢಪಟ್ಟಿದೆ. ಹಾಗಂತ ಈ ವಿಚಾರವನ್ನು ಸ್ವತಃ ಅವರೇ ಬಹಿರಂಗಪಡಿಸಿಲ್ಲ. ಬದಲಿಗೆ, ನಲಗೊಂಡದಲ್ಲಿರುವ ಆರ್​ಜಿವಿ ಅವರ ವಕೀಲ ಅಧಿಕೃತ ಮಾಡಿದ್ದಾರೆ.

ಕಾಂಟ್ರವರ್ಸಿ ಸಿನಿಮಾಗಳ ಮೂಲಕವೇ ಸುದ್ದಿಯಲ್ಲಿರುವ ಆರ್​ಜಿವಿ ಸಿನಿಮಾ ಮಾಡುವುದರ ಜತೆಗೆ ಅಷ್ಟೇ ಪ್ರಮಾಣದ ಕೇಸ್​ಗಳು ಅವರ ಮೇಲಿವೆ. ಹೀಗಿರುವಾಗಲೇ ಅಫಿಡವಿಟ್​ ಬಗ್ಗೆ ಸಹಿ ಹಾಕಿಸಿಕೊಳ್ಳುವ ಬಗ್ಗೆ ನೆಲಗೊಂಡದ ವಕೀಲರು ಆರ್​ಜಿವಿ ಅವರನ್ನು ಫೋನ್​ ಮೂಲಕ ಸಂಪರ್ಕಿಸಿದಾಗ, ಕರೊನಾ ದೃಢಪಟ್ಟಿರುವುದಾಗಿ ಹೇಳಿಕೊಂಡಿದ್ದರು. ಆ ವಿಚಾರವನ್ನೇ ವಕೀಲರು ಬಹಿರಂಗಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net