ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ; ರಾಜ್​ ತರುಣ್​-ಲಾವಣ್ಯ ಕೇಸ್​ ಅಂತ್ಯಕ್ಕೆ ಇದೊಂದೇ ಪರಿಹಾರ: ಆರ್​ಜಿವಿ

ತೆಲಂಗಾಣ: ಕಳೆದ ಒಂದು ತಿಂಗಳಿನಿಂದ ಟಾಲಿವುಡ್ ಅಂಗಳದಲ್ಲಿ ಸಿನಿಮಾ ಸುದ್ದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವುದು ಯುವ ನಟ ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮ ವಿವಾದ. 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ರಾಜ್​ನಿಂದ ನನಗೆ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ವಿಷಯದಲ್ಲಿ ದಿನಕ್ಕೊಂದು, ಕ್ಷಣಕ್ಕೊಂದು ಟ್ವಿಸ್ಟ್​ ಎದುರಾಗುತ್ತಿದ್ದೆಯೇ ವಿನಃ ಪ್ರಕರಣ ಮಾತ್ರ ಅಂತ್ಯಗೊಳ್ಳುತ್ತಿಲ್ಲ. ಸದ್ಯ ಕೋರ್ಟ್​ ರಾಜ್​ ತರುಣ್​ಗೆ ನಿರೀಕ್ಷಣಾ ಜಾಮೀನು ಕೊಡುವ ಮೂಲಕ ಬಿಗ್ ರಿಲೀಫ್​ ನೀಡಿದೆ. ಆದ್ರೆ, ಇವರಿಬ್ಬರ ಜಟಾಪಟಿ ಎಂದಿನಂತೆ ಮುಂದುವರೆದಿದೆ.

ಇದನ್ನೂ ಓದಿ: ಉಪನ್ಯಾಸ ಕಾರ್ಯಕ್ರಮ ಇಂದು

ಲಾವಣ್ಯ ಸಲ್ಲಿಸಿದ್ದ ದೂರಿನ ಮೇರೆಗೆ ನರಸಿಂಗಿ ಪೊಲೀಸರು ಆರೋಪಿ ರಾಜ್ ತರುಣ್​ರನ್ನು ವಿಚಾರಣೆಗೆ ಕರೆದಿದ್ದರು. ಆದ್ರೆ, ಮೊದಲ ವಿಚಾರಣೆಗೆ ಗೈರಾಗಿದ್ದ ನಟ ತನ್ನ ವಕೀಲರ ಮೂಲಕ ನೋಟಿಸ್​ಗೆ ಪ್ರತಿಕ್ರಿಯಿಸಿದ್ದರು. ಈತ ಇದ್ಯಾವುದಕ್ಕೂ ಬಗ್ಗುವುದಿಲ್ಲ ಎಂದು ಭಾವಿಸಿದ ಲಾವಣ್ಯ, ಕೇಸ್​ ಮೇಲೆ ಮತ್ತಷ್ಟು ಒತ್ತಾಯ ಹೇರಿದರು. ಇದೀಗ ಹೈಕೋರ್ಟ್​ ರಾಜ್​ಗೆ ನಿರೀಕ್ಷಣಾ ಜಾಮೀನು ಕೊಟ್ಟಿರುವುದು ಲಾವಣ್ಯಳ ಕೋಪವನ್ನು ದುಪ್ಪಟ್ಟು ಮಾಡಿದೆ. ಇವರಿಬ್ಬರ ವಿವಾದಕ್ಕೆ ಇಲ್ಲಿಯವರೆಗೆ ಯಾವ ಸೆಲೆಬ್ರಿಟಿಗಳು ಕೂಡ ಮಾತನಾಡಿರಲಿಲ್ಲ. ಆದ್ರೆ, ಇದೀಗ ನಿರ್ದೇಶಕ ರಾಮ್​ಗೋಪಾಲ್ ವರ್ಮ ಬಿಚ್ಚು ಮಾತನಾಡಿದ್ದಾರೆ.

“ಕಳೆದ ಕೆಲವು ದಿನಗಳಿಂದ ನಾನು ಕೂಡ ಗಮನಿಸುತ್ತಿದ್ದೇನೆ. ಇವರಿಬ್ಬರ ಪ್ರಕರಣ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಲಾವಣ್ಯ ನೋಡಿದ್ರೆ ಪೊಲೀಸ್ ಠಾಣೆಯಲ್ಲಿ ತನ್ನ ಪ್ರಿಯಕರ ರಾಜ್​ ವಿರುದ್ಧವೇ ದೂರು ಸಲ್ಲಿಸಿದ್ದಾಳೆ. ಇದಲ್ಲದೇ ಅವನು ತನ್ನನ್ನು ಗುಟ್ಟಾಗಿ ಮದುವೆಯಾಗಿದ್ದಾನೆ, ನಾವಿಬ್ಬರು 10 ವರ್ಷಗಳಿಂದ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದೇವೆ ಎನ್ನುತ್ತಾಳೆ. ಜತೆಗೆ ಅವನನ್ನು ಬಿಟ್ಟು ಬದುಕಲಾರೆ ಎಂದು ಕೂಡ ಹೇಳುತ್ತಾಳೆ. ಇದಕ್ಕೆ ಪರಿಹಾರ ಒಂದೇ ಅದು ಹಣ” ಎಂದು ಆರ್​ಜಿವಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಕ್ಕಳು ಗುರಿಯತ್ತ ಗಮನ ಕೇಂದ್ರೀಕರಿಸಬೇಕು, ಉದ್ಯಮಿ ರಾಮನಂದನ ಹೆಗಡೆ ಸಲಹೆ, ಹವ್ಯಕ ಹಬ್ಬದಲ್ಲಿ ಪ್ರತಿಭಾ ಪುರಸ್ಕಾರ, ಸನ್ಮಾನ

“ಅಗ್ನಿಸಾಕ್ಷಿಯಾಗಿ ಮಾಡಿಕೊಂಡ ಮದುವೆಗಳೇ ವಿಚ್ಛೇದನದಲ್ಲಿ ಅಂತ್ಯಗೊಳುತ್ತಿದೆ ಅಂದಮೇಲೆ ಇನ್ನು ಇಂತಹ ಸಂಬಂಧಗಳು ಹೇಗೆ ಉಳಿಯಲು ಸಾಧ್ಯ? ಅವನು ನನಗೆ ಮೋಸ ಮಾಡಿದ್ದಾನೆ ಎಂದು ಹೇಳುತ್ತಿರುವ ಲಾವಣ್ಯ ಈಗ ಅವನನ್ನು ಬಿಟ್ಟು ನನ್ನಿಂದ ಬದುಕಲು ಆಗುವುದಿಲ್ಲ. ನನಗೆ ರಾಜ್ ಬೇಕು ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ರಾಜ್ ತರುಣ್​ ತನ್ನ ಜತೆಯಲ್ಲೇ ಇರಬೇಕು ಎಂದು ಒತ್ತಾಯಿಸುವ ಹಕ್ಕು ಈಕೆಗಿಲ್ಲ. ಈ ಪ್ರಕರಣ ಅಂತ್ಯಗೊಳ್ಳಬೇಕು ಎಂದರೆ ಹಣದ ಒಪ್ಪಂದದಿಂದ ಮಾತ್ರ ಸಾಧ್ಯ. ಹಣ ಎಲ್ಲ ಸಮಸ್ಯೆಯನ್ನು ಬಗೆಹರಿಸುತ್ತದೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).

ಬಾಲ್ಯದಲ್ಲೇ ಹೆತ್ತವರ ಕಳೆದುಕೊಂಡ ಅಮನ್​ ಕಷ್ಟ ಕೇಳಿದ್ರೆ ಕಣ್ಣೀರು ತರಿಸುತ್ತೆ; ಕಂಚಿನ ಹಿಂದೆ ಇಷ್ಟೆಲ್ಲಾ ಶ್ರಮವಿದೆ

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…