More

    ಚಿಲ್ಲರೆ ವ್ಯಾಪಾರಿಗಳು ಗ್ರಾಹಕರಿಗೆ ಮೊಬೈಲ್ ಸಂಖ್ಯೆ ನೀಡುವಂತೆ ಒತ್ತಾಯಿಸುವಂತಿಲ್ಲ: ಗ್ರಾಹಕ ವ್ಯವಹಾರಗಳ ಸಚಿವಾಲಯ

    ದೆಹಲಿ: ಆಧುನಿಕ ಯುಗದಲ್ಲಿ ಫೋನ್ ಕರೆ ಮತ್ತು ಸಂದೇಶಗಳ ಮೂಲಕ ವಂಚನೆಗಳು ಹೆಚ್ಚುತ್ತಿದ್ದು, ಗ್ರಾಹಕ ವ್ಯವಹಾರಗಳ ಸಚಿವಾಲಯವು ಸಾರ್ವಜನಿಕರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಗ್ರಾಹಕರು ತಮ್ಮ ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳದೇ ಇದ್ದರೆ, ಮಾರಾಟಗಾರರು ತಮ್ಮ ಉತ್ಪನ್ನ ಅಥವಾ ಸೇವೆಗಳನ್ನು ಒದಗಿಸಲು ನಿರಾಕರಿಸುತ್ತಾರೆ ಎಂದು ಹಲವಾರು ಗ್ರಾಹಕರು ದೂರನ್ನು ನೀಡಿದ್ದರು.

    ಇದನ್ನೂ ಓದಿ: ಸೈಡ್ ಇಂಡಿಕೇಟರ್ ರಾಂಗ್‌ ಹಾಕಿರೋದನ್ನ ಪ್ರಶ್ನಿಸಿದಕ್ಕೆ ಕೊಲೆ; ಮಾಜಿ ಶಾಸಕನ ಪುತ್ರ, ಮೊಮ್ಮಕ್ಕಳು ಅರೆಸ್ಟ್

    ಈ ಬಗ್ಗೆ ಮಾತನಾಡಿದ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್, ವೈಯಕ್ತಿಕ ಸಂಪರ್ಕ ವಿವರಗಳನ್ನು ಒದಗಿಸುವವರೆಗೆ ಅಂಗಡಿಯವರು ಬಿಲ್ ತೆಗೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಆದರೆ, ಇದು ಗ್ರಾಹಕ ಸಂರಕ್ಷಣಾ ಕಾಯಿದೆಯಡಿಯಲ್ಲಿ ಅನ್ಯಾಯವಾಗಿದ್ದು, ಗ್ರಾಹಕರ ಮಾಹಿತಿಯನ್ನು ಸಂಗ್ರಹಿಸುವುದರ ಹಿಂದೆ ಯಾವುದೇ ತರ್ಕಬದ್ಧತೆ ಇಲ್ಲ ಎಂದರು.

    ಅಲ್ಲದೇ, ಖರೀದಿದಾರರ ವೈಯಕ್ತಿಕ ಸಂಪರ್ಕದ ವಿವರಗಳನ್ನು ನೀಡುವಂತೆ ಒತ್ತಾಯಿಸಬಾರದು ಎಂದು ಚಿಲ್ಲರೆ ವ್ಯಾಪಾರಿಗಳಿಗೆ ಸಲಹೆ ನೀಡಲಾಗಿದೆ. ಗ್ರಾಹಕರು ವಸ್ತಗಳನ್ನು ಖರೀದಿಸಿದ ನಂತರ ತಮ್ಮ ಮೊಬೈಲ್ ಸಂಖ್ಯೆಯನ್ನು ಅಂಗಡಿಯವರೊಂದಿಗೆ ಹಂಚಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts