ಸಿನಿಮಾ

ಕಾಂಗ್ರೆಸ್​ನ ಸುಳ್ಳಿನ ಆಟದ ಮುಂದೆ ನಮ್ಮ ಪಕ್ಷದ ಹೋರಾಟದ ಸ್ವರೂಪ ಇರಲಿದೆ: ಎಚ್​ಡಿಕೆ

ಬೆಂಗಳೂರು: ನಾವು ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಚುನಾವಣೆಯ ಸಂದರ್ಭದಲ್ಲಿ ಹೇಳಿಕೊಂಡಿದ್ದರು. 200 ಯುನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ ಉಚಿತ ನೀಡಲು ಮಾನದಂಡ ಮಾಡುತ್ತೇವೆ ಎನ್ನುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ವೀರಾವೇಶದಿಂದ ಮಾತನಾಡಿ ಚಪ್ಪಾಳೆ ಹೊಡೆಸಿಕೊಂಡಿದ್ದವರು, ಈಗ ಉಲ್ಟಾ ಹೊಡೆದಿದ್ದಾರೆ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ವಾಗ್ದಾಳಿ ನಡೆಸಿದ ಎಚ್​ಡಿಕೆ, ಸರ್ಕಾರ ರಚನೆಯಾದ ಮೊದಲ ಕ್ಯಾಬಿನೆಟ್‌ನಲ್ಲೇ ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ಉಚಿತ ಮಾಡುತ್ತೇವೆ ಎಂದು ಹೇಳಿದ್ದರು. ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡೋಣ. ಕರೆಂಟ್ ಬಿಲ್ ಕಟ್ಟಬೇಡಿ ಅಂತಾ ನಾವು ಕರೆ ಕೊಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಇದು ಡಬಲ್ ಸ್ಟೇರಿಂಗ್ ಸರ್ಕಾರ; ಬಸ್ಸು ಯಾವ ಕಡೆ ಹೋಗುತ್ತೋ ಗೊತ್ತಿಲ್ಲ: ವಿಜಯೇಂದ್ರ

ಚನಾವಣೆಯ ಸಂದರ್ಭದಲ್ಲಿ ಎದ್ದೇಳು ಕರ್ನಾಟಕ ಎಂದು ಹೇಳಿದ್ದರು. ಈಗ ಎದ್ದೇಳಿಸಿ. ಹೆಣ್ಣು ಮಕ್ಕಳಿಗೆ ಧರ್ಮಸ್ಥಳ,ತಿರುಪತಿಗೆ ತೆರಳಲು ಎಲ್ಲವೂ ಉಚಿತ ಎಂದು ಹೇಳುತ್ತಿದ್ದವರು, ಈಗ ಅಧಿಕಾರಕ್ಕೆ ಬರುತ್ತಿದ್ದಂತೆ ಬೇರೆಯದೇ ಹೇಳುತ್ತಿದ್ದಾರೆ ಎಂದು ಎಚ್​ಡಿಕೆ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.

ಕಾಂಗ್ರೆಸ್ ಘೋಷಿಸಿರುವ ಉಚಿತ ಯೋಜನೆಗಳು ಯಾವ ಸ್ವರೂಪದಲ್ಲಿ ಕಾರ್ಯ ರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇವರ ಸುಳ್ಳಿನ ಆಟದ ಮುಂದೆ ನಮ್ಮ ಪಕ್ಷದ ಹೋರಾಟ ಸ್ವರೂಪ ಇರಲಿದೆ ಎಂದು ಕಾಂಗ್ರೆಸ್​​ ವಿರುದ್ಧ ಎಚ್​​ಡಿಕೆ ಕಿಡಿಕಾರಿದರು.

Latest Posts

ಲೈಫ್‌ಸ್ಟೈಲ್