More

    ಕೆಲಸದ ಸಮಯದಲ್ಲಿ ಫೋನ್​ ಬಳಸಿದ ಯುವತಿ: ವಜಾ ಮಾಡಿ ಮನೆಗೆ ಕಳುಹಿಸಿದ ಮಾಲೀಕ

    ಮ್ಯಾಂಚೆಸ್ಟರ್: ಕೆಲಸದ ಸಮಯದಲ್ಲಿ ಫೋನ್​ ಬಳಸಿದಳೆಂದಯ ಆಕೆಯನ್ನು ವಜಾ ಮಾಡಿರುವ ವಿಚಿತ್ರ ಘಟನೆ ಯುನೈಟೆಡ್ ಕಿಂಗ್‌ಡಂನ ಮ್ಯಾಂಚೆಸ್ಟರ್​​ನಲ್ಲಿ ನಡೆದಿದೆ.

    ಇದನ್ನೂ ಓದಿ: ಅವರಿಬ್ಬರ ನಡುವೆ ‘ಅವನು’ ಬಂದ: ಪೊಲೀಸರ ಸಮ್ಮುಖದಲ್ಲಿ ಗಂಡನ ಬಿಟ್ಟು ‘ಆತನನ್ನು’ ವಿವಾಹವಾದ ಪತ್ನಿ

    ಸೋಫಿ ಅಲ್ಕಾಕ್ (20) ಎಂಬಾಕೆಯೇ ಕೆಲಸ ಕಳೆದುಕೊಂಡ ಯುವತಿಯಾಗಿದ್ದು, ಮ್ಯಾಂಚೆಸ್ಟರ್‌ನಲ್ಲಿರುವ ಟೋಸ್ಟ್ ಎಂಬ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದಳು. ವಿನಾಕಾರಣದಿಂದ ತನ್ನನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಇದು ತನ್ನ ಜೀವನದ ಅತ್ಯಂತ ಕೆಟ್ಟದಿನ ಎಂದು ಹೇಳಿಕೊಂಡಿದ್ದಾಳೆ.

    ಎರಡು ವಾರಗಳ ಹಿಂದೆ ತಾನು ಕಾಲೇಜು ಫಲಿತಾಂಶಕ್ಕಾಗಿ ಕಾಯುತ್ತಿದ್ದೆ. ಈ ವೇಳೆ ತಾನು ಹೋಟೆಲ್​ ಹೋಗಿದ್ದು, ಅಲ್ಲಿ ತನ್ನನ್ನು ಕೆಲಸದಿಂದ ತೆಗೆದು ಹಾಕುವ ಬಗೆ ಉಳಿದ ಸಿಬ್ಬಂದಿ ಮಾತನಾಡಿಕೊಳ್ಳುತ್ತಿದ್ದರು. ಈ ವೇಳೆ ಅದನ್ನು ದೃಢಪಡಿಸಿಕೊಳ್ಳಲು ಆಕೆ ಹೋಟೆಲ್​ನ ಮಾಲೀಕರಿಗೆ ಇಮೇಲ್​ ಮಾಡಿದ್ದು, ಅದಕ್ಕೆ ಪ್ರತಿಯಾಗಿ ಆಕೆಗೆ ಇನ್ನು ಮುಂದೆ ಕೆಲಸ ಮಾಡುವ ಅಗತ್ಯವಿಲ್ಲ ಎಂದು ರಿಪ್ಲೈ ಬಂದಿದೆ.

    ಅಲ್ಲದೇ, ಆಕೆ ಕೆಲಸದ ಸಮಯದಲ್ಲಿ ಮೊಬೈಲ್​ ಉಪಯೋಗಿಸುತ್ತಿದ್ದಳು ಹೀಗಾಗಿ ಆಕೆಯನ್ನು ವಜಾ ಮಾಡಲಾಗಿದೆ ಎಂದು ಹೋಟೆಲ್ ತಿಳಿಸಿದೆ. ಆದರೆ ಈ ಆರೋಪವನ್ನು ನಿರಾಕರಿಸಿರುವ ಆಕೆ, ಗ್ರಾಹಕರಿಗೆ ನಿಗದಿತ ಸಮಯಕ್ಕೆ ಊಟವನ್ನು ನೀಡಿದ್ದೇನೆ. ತನ್ನನ್ನು ವಜಾ ಮಾಡಿದ ವಿಧಾನವು ವೃತ್ತಿಪರವಲ್ಲ. ತನಗೆ ನ್ಯಾಯಯುತ ಕಾರಣವನ್ನು ಒದಗಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಹೇಳಿದ್ದಾಳೆ.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts