ರೇಣುಕಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್​ಗೆ ತಪ್ಪದ ಸಂಕಷ್ಟ; FSL ವರದಿಯಲ್ಲಿ ಬಹಿರಂಗವಾಯ್ತು ಸ್ಫೋಟಕ ಸತ್ಯ

darshan
Published on

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಕೇಸ್​ನಲ್ಲಿ ನಟ ದರ್ಶನ್​, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 17 ಮಂದಿ ಪರಪ್ಪನ ಅಗ್ರಹಾರ ಸೇರಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ನಟನ ಈ ಕೃತ್ಯದಿಂದ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದ್ದು, ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸತ್ಯವೊಂದು ಬಯಲಾಗಿದ್ದು, ದರ್ಶನ್​ ಮತ್ತು ಸಹಚರರಿಗೆ ಜೈಲೂಟ ಗ್ಯಾರಂಟಿ ಎಂದು ಹೇಳಲಾಗಿದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿಯಾಗಿರುವ ನಟ ದರ್ಶನ್​ ವಿರುದ್ಧ ಅತಿದೊಡ್ಡ ರಹಸ್ಯ ರಿವೀಲ್​ ಆಗಿದೆ. ಕೊಲೆ ನಡೆದ ದಿನ ದರ್ಶನ್​ ಧರಿಸಿದ್ದ ಬಟ್ಟೆಯ ಮೇಲೆ ರೇಣುಕಸ್ವಾಮಿಯ ರಕ್ತ ಅಂಟಿದ್ದು, ಇದು FSL ವರದಿಯಲ್ಲಿ ಬಹಿರಂಗವಾಗಿದೆ. ಈ ಸಾಕ್ಷ್ಯ ದರ್ಶನ್ ವಿರುದ್ಧದ ಅರೋಪವನ್ನು ಸಾಬೀತುಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 60ಕ್ಕೂ ಹೆಚ್ಚು ಸಾಕ್ಷಿಗಳನ್ನು ಸಂಗ್ರಹಿಸಿ FSLಗೆ ಕಳುಹಿಸಿದ್ದರು. ಇದರಲ್ಲಿ ದರ್ಶನ್​ ಧರಿಸಿದ್ದ ಬಟ್ಟೆ ಹಾಗೂ ಶೂ ಕೂಡ ಇತ್ತು. ಹತ್ಯೆಯ ದಿನ ದರ್ಶನ್​ ಧರಿಸಿದ್ದರು ಎನ್ನಲಾದ ನೀಲಿ ಬಣ್ಣದ ಪ್ಯಾಂಟ್​ ಹಾಗೂ ಕಪ್ಪು ಬಣ್ಣದ ಟಿ ಶರ್ಟ್​ನಲ್ಲಿ ರಕ್ತದ ಕಲೆ ಕಂಡು ಬಂದಿದೆ. ಇವುಗಳು ರೇಣುಕಾಸ್ವಾಮಿಯ ದೇಹದ ರಕ್ತ ಎಂಬುದು FSl ವರದಿಯಲ್ಲಿ ದೃಢಪಟ್ಟಿದೆ.

ಇದೀಗ ಈ ಬೆಳವಣಿಗೆ ದರ್ಶನ್​ಗೆ ಮತ್ತಷ್ಟು ಸಂಕಷ್ಟ ತಂದೊಡಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.  ಪ್ರಕರಣದ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಅಥವಾ ಸ್ಪೆಷಲ್ ಕೋರ್ಟ್ ಬೇಕು ಎಂದು ಪೊಲೀಸರು ಮನವಿ ಮಾಡಿದ್ದು, ದರ್ಶನ್​ ಮತ್ತು ಗ್ಯಾಂಗ್​ಗೆ ಜೈಲೂಟ ಕಾಯಂ ಆಗುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿ ಕಾಣುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net