blank

ರೌಡಿಶೀಟರ್​ ಜತೆ ಸಂಬಂಧ! ಪತಿ-ಮಕ್ಕಳು ಬಿಟ್ಟು ಹೋಗಲು ಸಿದ್ಧ: ಕೊನೆಗೂ ಗಂಡ ಮಾಡಿದ್ದೇನು? | Relationship

blank

ತಮಿಳುನಾಡು: ರೌಡಿಶೀಟರ್​ ಜತೆ ಪತ್ನಿ ಸಂಬಂಧ(Relationship) ಹೊಂದಿದ್ದಾಳೆ ಎಂದು ಆಕೆಯ ಪತಿಯೇ ಆಕೆಯನ್ನು ಹತ್ಯೆ ಮಾಡಿದ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಇದನ್ನೂ ಓದಿ:1 ಲಕ್ಷ ಕೋಟಿ ರೂ.ಮೌಲ್ಯದ ಕ್ಷಿಪಣಿ, ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದ ಕೇಂದ್ರ ಸರ್ಕಾರ| Weapons Purchases

ತಿರುನಲ್ವೇಲಿ ಪೆದ್ದ ಕಾಲೋನಿಯ ಕೋಮತಿ (28) ಮೃತೆ. ಈಕೆ ತಿರುನಲ್ವೇಲಿ 26ನೇ ವಾರ್ಡ್​ನ ಪುರಸಭೆ ಕಾರ್ಪೋರೇಟರ್​​ ಆಗಿದ್ದರು. ಅಲ್ಲದೆ, ಕೊಲೆಗೈದ ಆರೋಪಿ ಪತಿ ಸ್ಟೀಫನ್​ ರಾಜ್​(38) ಕೂಡ ಪುರಸಭೆಯ ಕಾರ್ಯದರ್ಶಿಯಾಗಿದ್ದಾರೆ. ಆರೋಪಿ ಸ್ಟೀಫನ್​ ರಾಜ್​ ಮತ್ತು ಈತನ ತಾಯಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ರೌಡಿಶೀಟರ್​ ಪರಿಚಯ

ಕೋಮತಿ ಮತ್ತು ಸ್ಟೀಫನ್​ರಾಜ್​ 2015ರಲ್ಲಿ ಲವ್​ ಮ್ಯಾರೇಜ್​ ಆಗಿದ್ದಾರೆ. ಇಬ್ಬರು ಗಂಡು ಮಕ್ಕಳು ಕೂಡ ಇದ್ದಾರೆ. ಕೋಮತಿಗೆ ಕೆಲ ದಿನಗಳಿಂದೆ ಇಲ್ಲಿನ ರಾಮದಾಸಪುರಂನ ರೌಡಿಶೀಟರ್​ ಮೋಸಸ್ದೇವ ಜತೆ ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದೆ. ಇದು ಆಕ್ರಮ ಸಂಬಂಧಕ್ಕೆ ಕಾರಣವಾಗಿದೆ. ಈ ಬಗ್ಗೆ ಕೆಲ ದಿನಗಳಿಂದ ಗಂಡ-ಹೆಂಡತಿ ನಡುವೆ ಜಗಳ ಏರ್ಪಟ್ಟಿದೆ. ಈ ಹಿಂದೆ ಗಂಡ ಈ ಸಂಬಂಧ ಬಿಡುವಂತೆ ವಾರ್ನಿಂಗ್​ ಮಾಡಿದ್ದಾನೆ ಎನ್ನಲಾಗಿದೆ. ಇದಕ್ಕೂ ಮೀರಿ ಆಕೆ ಮಕ್ಕಳನ್ನು ಮತ್ತು ಪತಿಯನ್ನು ಬಿಟ್ಟು ಓಡಿ ಹೊಗಲು ಸಿದ್ಧಳಾಗಿದ್ದಳು. ಹೀಗಾಗಿ, ಕೋಪಗೊಂಡ ಸ್ಟೀಫನ್​​ರಾಜ್​ ಕತ್ತಿಯಿಂದ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. (ಏಜೆನ್ಸೀಸ್​​)

ಗೆಳೆಯನ ಲಿಂಗ ಪರಿವರ್ತಿಸಿ 18 ದಿನ ಲೈಂಗಿಕ ದೌರ್ಜನ್ಯ ಎಸಗಿದ ಸ್ನೇಹಿತ!

ನೀರವ್​ ಮೋದಿ ಸಹೋದರ ನೀಹಾಲ್​ ಮೋದಿ ಅಮೆರಿಕಾದಲ್ಲಿ ಬಂಧನ: ಭಾರತಕ್ಕೆ ಶೀಘ್ರ ಹಸ್ತಾಂತರ! | Nihal Modi

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…