Nihal Modi : ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ವಜ್ರ ವ್ಯಾಪಾರಿ, ದೇಶದಿಂದ ಪರಾರಿಯಾಗಿರುವ ನೀರವ್ ಮೋದಿ ಸಹೋದರ ನೇಹಾಲ್ ಮೋದಿಯನ್ನು ಅಮೆರಿಕಾದಲ್ಲಿ ಬಂಧನ ಮಾಡಲಾಗಿದೆ ಎಂದು ಶನಿವಾರ ವರದಿಯಾಗಿದೆ.
ಇದನ್ನೂ ಓದಿ:ಮನೆಕೆಲದಾಕೆ ದುಡಿಯುತ್ತಿದ್ದಾಳೆ ಮಾಸಿಕ 1 ಲಕ್ಷ ರೂ.!: ನಮಗಿಂತ ಅಧಿಕ ಸಂಬಳ ಎಂದ ನೆಟ್ಟಿಗರು |Domestic Worker
ಅಮೆರಿಕಾ ನ್ಯಾಯಾಂಗ ಇಲಾಖೆಯ ಪ್ರಕಾರ, ಬೆಲ್ಜಿಯಂ ಪ್ರಜೆಯಾಗಿರುವ ನೇಹಾಲ್ ಮೋದಿ ಜು.4ರಂದು ವಶಕ್ಕೆ ತಗೆದುಕೊಳ್ಳಲಾಗಿದೆ. ಇದೀಗ ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ವರದಿ ಉಲ್ಲೇಖಿಸಿದೆ. ಅಲ್ಲದೆ, ಗಡೀಪಾರು ಕೋರಿಕೆ ನಂತರ ಭಾರತಕ್ಕೆ ಇದು ರಾಜತಾಂತ್ರಿಕ ದೊಡ್ಡ ಗೆಲವು ಅಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.
ಇನ್ನು ಯುಎಸ್ ಪ್ರಾಸಿಕ್ಯೂಷನ್ ಪ್ರಕಾರ, ನೇಹಾಲ್ ಎರಡು ಆರೋಪಗಳನ್ನು ಎದುರಿಸುತ್ತಿದ್ದಾರೆ. ಒಂದು ಆಕ್ರಮ ಹಣ ವರ್ಗಾವಣೆ ಮತ್ತೊಂದು ಸಾಕ್ಷ್ಯ ನಾಶ.
ನೀರವ್ ಮೋದಿ ಪರವಾಗಿ ಅಪರಾಧದ ಆದಾಯವನ್ನು ಅಕ್ರಮವಾಗಿ ವರ್ಗಾಯಿಸುವಲ್ಲಿ ನೆಹಾಲ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಇಡಿ ಮತ್ತು ಸಿಬಿಐ ನಡೆಸಿದ ತನಿಖೆಗಳು ಬಹಿರಂಗಪಡಿಸಿವೆ, ನೀರವ್ ಮೋದಿ ಕೂಡ ಯುಕೆಯಿಂದ ಹಸ್ತಾಂತರವನ್ನು ಎದುರಿಸುತ್ತಿದ್ದಾರೆ.(ಏಜೆನ್ಸೀಸ್)
ಗೆಳೆಯನ ಲಿಂಗ ಪರಿವರ್ತಿಸಿ 18 ದಿನ ಲೈಂಗಿಕ ದೌರ್ಜನ್ಯ ಎಸಗಿದ ಸ್ನೇಹಿತ!
ಮನೆಕೆಲದಾಕೆ ದುಡಿಯುತ್ತಿದ್ದಾಳೆ ಮಾಸಿಕ 1 ಲಕ್ಷ ರೂ.!: ನಮಗಿಂತ ಅಧಿಕ ಸಂಬಳ ಎಂದ ನೆಟ್ಟಿಗರು |Domestic Worker