ಸ್ನೇಹಿತನೊಬ್ಬ ತನ್ನ ಸ್ನೇಹಿತನಿಗೆ ಬಲವಂತವಾಗಿ ಲಿಂಗ ಪರಿವರ್ತಿಸಿ(ಯುವಕನಿಂದ-ಯವತಿ) ಹೋಟೆಲ್ ಒಂದರಲ್ಲಿ 18 ದಿನ ಕೂಡಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ ವಿಚಿತ್ರ ಘಟನೆ ಮಧ್ಯಪ್ರದೇಶದ ನರ್ಮದಾಪುರಂನಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಪ್ರೇಮ ವೈಫಲ್ಯ: ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ! Instagram
ನನಗೆ ತಿಳಿದಿರುವ ನನ್ನ ಸ್ನೇಹಿತನೊಬ್ಬ ನನಗೆ ತಿಳಿದಂತೆ ನನ್ನ ಲಿಂಗ ಬದಲಾಯಿಸಿದ್ದು, ರೂಮ್ ಒಂದರಲ್ಲಿ ಕೂಡಿ ಹಾಕಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಶುಭಂ ಯಾದವ್ ಎಂಬ ವ್ಯಕ್ತಿ ವಿರುದ್ಧ ಸಂತ್ರಸ್ತೆ ಭೂಪಲ್ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಆರೋಪಿ ಶುಭಂ ನರ್ಮದಾಪುರಂನ ಗ್ವಾಲ್ಟೋಲಿ ನಿವಾಸಿಯಾಗಿದ್ದು, ತಂತ್ರ ವಿದ್ಯಾ ಎಂಬ ಲೈಂಗಿಕ ಕ್ರಿಯೆಯ ಮೂಲಕ ಸಂತ್ರಸ್ತೆಯ ಲಿಂಗವನ್ನು ಬದಲಾಯಿಸಿದ್ದಾನೆ. ಬಳಿಕ ಅವಳನ್ನು ಹುಡುಗಿಯಂತೆ ಬದುಕಬೇಕು ಎಂದು ಒತ್ತಾಯಿಸಿದನು. ನನಗೆ ಮಾದಕ ದ್ರವ್ಯಗಳನ್ನು ನೀಡಿ, 18 ದಿನಗಳ ಕಾಲ ನನಗೆ ಚಾಕು ತೋರಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಪ್ರೇಮ ವೈಫಲ್ಯ: ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟ ಯುವಕ! Instagram
ಶುಭಂ ತನ್ನನ್ನು ಇಂದೋರ್‌ಗೆ ಕರೆದೊಯ್ದು ಬಲವಂತವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದಾಗಿ ಸಂತ್ರಸ್ತೆ ಹೇಳಿದ್ದಾಳೆ. ಸಂತ್ರಸ್ತೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಂಪೂರ್ಣವಾಗಿ ಕುಸಿದಿದ್ದಾಗ ಇದೆಲ್ಲವೂ ಸಂಭವಿಸಿದೆ. ಯಾರಿಗೂ ಸತ್ಯವನ್ನು ಹೇಳದಂತೆ ಆರೋಪಿಯು ತನಗೆ ಅಪಘಾತವಾಗಿದೆ ಎಂದು ಹೇಳುವಂತೆ ಒತ್ತಾಯಿಸಿದ್ದಾನೆ. ಇನ್ನು ಘಟನೆ ಆರು ತಿಂಗಳ ಹಿಂದೆ ನಡೆದಿದೆ. ಇದೀಗ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬಿಸಿದ್ದಾರೆ.(ಏಜೆನ್ಸೀಸ್)
ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ಬೊಲೆರೋ ಅಪಘಾತ: ವರ ಸೇರಿ 8 ಮಂದಿ ದುರ್ಮರಣ | Accident