ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ಬೊಲೆರೋ ಅಪಘಾತ: ವರ ಸೇರಿ 8 ಮಂದಿ ದುರ್ಮರಣ | Accident

dk - 2025-07-05T115051.418
Published on

Accident: ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ಬೊಲೆರಾ ವಾಹನವೊಂದು ಕಾಲೇಜಿನ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ವರ ಸೇರಿ 8 ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್​​ ಜಿಲ್ಲೆಯಲ್ಲಿ ನಡೆದಿದೆ.

ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಮೂವರು ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು NDTV ವರದಿ ಮಾಡಿದೆ. ಘಟನೆಯ ಸಮಯದಲ್ಲಿ, ಕಾರಿನಲ್ಲಿ 10 ಜನರು ಇದ್ದರು. ಮದುವೆಯ ತಂಡವು ಹರ್ ಗೋವಿಂದಪುರ ಗ್ರಾಮದಿಂದ ಬುದೌನ್‌ನ ಸಿರ್ತೌಲ್‌ಗೆ ತೆರಳುತ್ತಿತ್ತು. ಈ ಘಟನೆ ಸಂಭಾದ ಜುನವೈ ಪ್ರದೇಶದಲ್ಲಿ ನಡೆದಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ವರ ಸೂರಜ್ (24), ಅವರ ಅತ್ತಿಗೆ ಆಶಾ (26), ಅವರ ಮಗಳು ಐಶ್ವರ್ಯ (2) ಮತ್ತು ವಿಷ್ಣು (6) ಸೇರಿದ್ದಾರೆ. ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಗೋಡೆಗೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳ ಹೇಳಿದ್ದಾರೆ.

ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಅವರನ್ನು ಅಲಿಘರ್‌ನ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net