

Tuition Teacher : ಕೇರಳದಲ್ಲಿ ಮಾದಕವಸ್ತು ಕಳ್ಳಸಾಗಣೆಯಲ್ಲಿ ಪ್ರಮುಖ ಕೊಂಡಿಯಾಗಿರುವ ವ್ಯಕ್ತಿಯನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಮಾದಕವಸ್ತು ಗ್ಯಾಂಗ್ MDMA ಖರೀದಿಸಲು ಹಣ ಕಳುಹಿಸಿದ ಖಾತೆಯ ಮಾಲಕಿ 52 ವರ್ಷದ ಸೀಮಾ ಸಿನ್ಹಾಳನ್ನು ತ್ರಿಶೂರ್ ನಗರ ಪೊಲೀಸರು ಹರಿಯಾಣದಲ್ಲಿ ಬಂಧಿಸಲಾಗಿದೆ.
ಕಳೆದ ಫೆಬ್ರವರಿಯಲ್ಲಿ, ಚಾವಕ್ಕಾಡ್ ನಿವಾಸಿಗಳಾದ ಫಜಲ್ ಮತ್ತು ನೆಜಿಲ್ ಅವರನ್ನು ತ್ರಿಶೂರ್ ರೈಲ್ವೆ ನಿಲ್ದಾಣದಲ್ಲಿ MDMA ಯೊಂದಿಗೆ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ಸೀಮಾ ಸಿನ್ಹಾಳ ಹೆಸರನ್ನು ಬಾಯ್ಬಿಟ್ಟಿದ್ದರು. ನಮಗೆ MDMA ಕೊಟ್ಟಿದ್ದು ಸೀಮಾ ಸಿನ್ಹಾ ಎಂದು ಆರೋಪಿಗಳು ಪೊಲೀಸರ ಮುಂದೆ ಹೇಳಿದ್ದರು.
ದಂಧೆಯ ಕಿಂಗ್ಪಿನ್ ಸೀಮಾ ಸಿನ್ಹಾ ಟ್ಯೂಷನ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಬಿಹಾರದ ರಾಜಧಾನಿ ಪಟನಾದ ನಿವಾಸಿ. ಈ ದಂಧೆಯಿಂದಲೇ ಕಳೆದ ಎರಡು ವರ್ಷಗಳಲ್ಲಿ ಆಕೆ 20 ಕೋಟಿ ರೂಪಾಯಿಗಳ ವಹಿವಾಟು ನಡೆಸಿದ್ದಾಳೆ. ಇದನ್ನು ಕೇಳಿ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ. ಅಷ್ಟರ ಮಟ್ಟಿಗೆ ಡ್ರಗ್ಸ್ ಜಾಲದಲ್ಲಿ ಆಕೆಯ ಪ್ರಭಾವ ಇತ್ತು.
ಅಂದಹಾಗೆ, ಆರೋಪಿ ಸೀಮಾ ನೈಜೀರಿಯಾ ಮೂಲದ ವ್ಯಕ್ತಿಯ ಮೂಲಕ ವಹಿವಾಟು ನಡೆಸುತ್ತಿದ್ದರು. ಆತನನ್ನು ಬಂಧಿಸಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ತ್ರಿಶೂರ್ ಎಸಿಪಿ ಸಲೀಶ್ ಎನ್. ಶಂಕರನ್ ನೇತೃತ್ವದ ಪೊಲೀಸ್ ತಂಡ ಸೀಮಾ ಸಿನ್ಹಾಳನ್ನು ಬಂಧಿಸಿದೆ. (ಏಜೆನ್ಸೀಸ್)