ಈ 3 ರಾಶಿಯವರು ಕಠಿಣ ಹೃದಯಿಗಳಂತೆ: ಸೆಂಟಿಮೆಂಟ್​ ಅನ್ನೋ ಪದಕ್ಕೆ ಇವರ ಬಳಿ ಜಾಗವಿಲ್ಲ! Zodiac Signs

Zodiac Signs
Published on

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.

ಅದೇ ರೀತಿ ಕೆಲವು ರಾಶಿಯವರು ಕಠಿಣ ಹೃದಯಗಳೊಂದಿಗೆ ಜನಿಸುತ್ತಾರಂತೆ. ಅಂದರೆ, ಈ ರಾಶಿಯವರು ಯಾವುದೇ ಭಾವನೆಗಳಿಗೆ ಒಳಗಾಗುವುದಿಲ್ಲ. ಸೆಂಟಿಮೆಂಟ್​ ಅನ್ನೋ ಪದಕ್ಕೆ ಇವರ ಬಳಿ ಜಾಗವೇ ಇರುವುದಿಲ್ಲ. ಅಲ್ಲದೆ, ಯಾವುದಕ್ಕೂ ಹೆದರುವುದಿಲ್ಲ. ಈ ರಾಶಿಯವರಿಗೆ ಮಾನಸಿಕವಾಗಿ ಹಾನಿ ಮಾಡಲು ಸಾಧ್ಯವೇ ಇಲ್ಲ. ಹಾಗಾದರೆ, ಆ ರಾಶಿಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮಕರ ರಾಶಿ

ಮಕರ ರಾಶಿಯಲ್ಲಿ ಜನಿಸಿದ ಜನರು ತಮ್ಮ ದೃಢನಿಶ್ಚಯ, ಸ್ವಯಂ ನಿಯಂತ್ರಣ ಮತ್ತು ತಮ್ಮ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಆಲೋಚನೆಗಳು ಮತ್ತು ಮನಸ್ಸಿನ ಶಕ್ತಿ ಇತರರಿಗೆ ಹೋಲಿಸಿದರೆ ಆಶ್ಚರ್ಯಕರವಾಗಿದೆ. ಅವರು ತರ್ಕ ಮತ್ತು ವಾಸ್ತವಿಕ ಪ್ರಕ್ರಿಯೆಗಳಿಗೆ ಮಾತ್ರ ಒತ್ತು ನೀಡುತ್ತಾರೆ. ವಿಶೇಷವಾಗಿ ಗುರಿಗಳನ್ನು ಸಾಧಿಸುವ ವಿಷಯಕ್ಕೆ ಬಂದಾಗ ಕಷ್ಟಕರ ಸಂದರ್ಭಗಳಲ್ಲಿಯೂ ತಮ್ಮ ಭಾವನೆಗಳಿಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡುತ್ತಾರೆ. ತಮ್ಮ ಮೆದುಳು ಹೇಳುವುದನ್ನು ಮಾತ್ರ ಅನುಸರಿಸುತ್ತಾರೆ. ಅವರ ಹೃದಯ ಹೇಳುವುದನ್ನು ಕೇಳುವ ಬದಲು ಬುದ್ಧಿಶಕ್ತಿಯನ್ನು ಅವಲಂಬಿಸಿರುತ್ತಾರೆ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಜನಿಸಿದ ಜನರು ನಿಗೂಢ ವ್ಯಕ್ತಿಗಳಾಗಿರುತ್ತಾರೆ. ಅವರು ತುಂಬಾ ಆಳವಾದ ಭಾವನೆಗಳನ್ನು ಹೊಂದಿದ್ದರೂ, ತಮ್ಮ ಭಾವನೆಗಳನ್ನು ಮರೆಮಾಡುತ್ತಾರೆ. ಅವರು ಮಾನಸಿಕವಾಗಿ ತುಂಬಾ ಬಲಶಾಲಿಗಳು ಮತ್ತು ವಿರಳವಾಗಿ ತಮ್ಮ ದೌರ್ಬಲ್ಯಗಳನ್ನು ತೋರಿಸುತ್ತಾರೆ. ತುಂಬಾ ಹಠಮಾರಿಗಳು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಮ್ಮ ಭಾವನೆಗಳಿಗೆ ಎಂದಿಗೂ ಮಣಿಯುವುದಿಲ್ಲ. ಅವರ ಹೃದಯಗಳು ಭಾವನೆಗಳನ್ನು ಮೀರಿ ಕಾರ್ಯನಿರ್ವಹಿಸುವ ಶಕ್ತಿಯನ್ನು ಹೊಂದಿವೆ.

ಕುಂಭ ರಾಶಿ

ಕುಂಭ ರಾಶಿಯಲ್ಲಿ ಜನಿಸಿದ ಜನರು ಜೀವನದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಸ್ವಾತಂತ್ರ್ಯವನ್ನು ಗೌರವಿಸುತ್ತಾರೆ. ಕಷ್ಟಕರ ಸಂದರ್ಭಗಳಲ್ಲಿಯೂ ಸಹ ಅವರು ತಾರ್ಕಿಕವಾಗಿ ಯೋಚಿಸಲು ಸಮರ್ಥರಾಗಿದ್ದಾರೆ. ಇವರು ಯೋಚಿಸುವಾಗ ಭಾವನೆಗಳಿಗೆ ಪ್ರಾಮುಖ್ಯತೆ ನೀಡುವುದಿಲ್ಲ. ಹೀಗಾಗಿ ಇವರ ಮನಸ್ಸನ್ನು ದುರ್ಬಲಗೊಳಿಸುವುದು ಮತ್ತು ವಿಫಲಗೊಳಿಸುವುದು ದೊಡ್ಡ ಸವಾಲಾಗಿರುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್​ ನೆಟ್​ ಸೈಟ್ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net