Domestic Worker : ಸಾಮಾನ್ಯವಾಗಿ ನಗರ-ಪಟ್ಟಣಗಳಲ್ಲಿ ಖಾಸಗಿ ಅಥವಾ ಸರ್ಕಾರಿ ನೌಕರ ಆಗಲಿ ಎಷ್ಟು ಕೊಟ್ಟರು ಬದುಕಲು ಸಂಬಳ ಸಾಕಾಗುತ್ತಿಲ್ಲ ಎಂಬ ಮಾತುಗಳು ಕೇಳಿರುತ್ತೇವೆ. ಇಂತಹ ಸಮಯದಲ್ಲಿ ಸಾಮಾಜಿಕ ವೇದಿಕೆಯಾದ ರೆಡ್ಡಿಟ್ನಲ್ಲಿ ಮನೆಕೆಲಸ ಮಾಡುವ ಮಹಿಳೆಯೊಬ್ಬಳು ಮಾಸಿಕ(Month) 1 ಲಕ್ಷ ರೂ. ದುಡಿಯುತ್ತಿದ್ದಾಳೆ ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದು, ಇದೀಗ ಈ ಪೋಸ್ಟ್ ಬಾರಿ ವೈರಲ್ ಆಗಿದೆ.
ಹೌದು, ಟಯರ್ ಸಿಟಿ-3ರಲ್ಲಿ ವಾಸಿಸುತ್ತಿರುವ ಮಹಿಳೆ ರೆಡ್ಡಿಟ್ನಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅವರ ಪ್ರಕಾರ ನಮ್ಮ ಮನೆಯಲ್ಲಿ ಕೆಲಸ ಮಾಡುವ ಕೆಲಸದಾಕೆ ಸೇರಿ ಅವರ ಮನೆಯ ಒಟ್ಟು ಆದಾಯ 1.3 ಲಕ್ಷ ರೂ. ಆಗಿದೆ. ಅದೂ ಕೂಡ ತೆರಿಗೆ ಇಲ್ಲದೆ ಟ್ಯಾಕ್ಸ್ ಫ್ರೀ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ; ಸರ್ಕಾರಕ್ಕೆ ಎಂಎಲ್ಸಿ ಐವನ್ ಡಿಸೋಜಾ ಬೇಡಿಕೆ
ಬೆಳಗ್ಗೆ 9 ರಿಂದ 5ರ ವರೆಗೆ ಮನೆ ಕೆಲಸ ಮಾಡುವವರಿಗೆ ಮೂರು ಶಿಫ್ಟ್ಗಳಂತೆ 3 ಮನೆ ಕೆಲಸ ಮಾಡುತ್ತಾರೆ. ಅದರಂತೆ ಒಂದು ತಿಂಗಳಿಗೆ ಮೂರು ಮನೆಗಳ ಸೇರಿ 30,000 ಸಂಪಾದನೆ ಮಾಡುತ್ತಾರೆ ಎಂದು ರೆಡ್ಡಿಟ್ನಲ್ಲಿ ಮಹಿಳೆ ಹಂಚಿಕೊಂಡಿದ್ದಾರೆ.
ಅದೇಗೆ 1 ಲಕ್ಷ ರೂ. ಸಾಧ್ಯ?
ಇನ್ನು 30 ಸಾವಿರ ಸಂಪಾದನೆ ಮಾಡುತ್ತೀರುವ ಆಕೆ ಮನೆಯಲ್ಲಿ ಅದರಂತೆ ಆಕೆಯ ಗಂಡ ತಿಂಗಳಿಗೆ 30 ಸಾವಿರ ಸಂಬಳ ಬರುತ್ತಿದೆ. ಇತ್ತ ಹಿರಿಯ ಮಗ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆತನು 30 ಸಾವಿರ ಸಂಬಳ ಮಾಡುತ್ತಿದ್ದಾರೆ. ಹಾಗೂ ಆಕೆಯ ಕಿರಿಯ ಮಗಳು ಟೈಲರಿಂಗ್ ಮಾಡುತ್ತಿದ್ದಾಳೆ. ಸದ್ಯಕ್ಕೆ 15 ಸಾವಿರ ದಿಂದ 20 ಸಾವಿರ ದುಡಿಯುತ್ತಿದ್ದಾಳೆ. ಅಲ್ಲದೆ, ಈಕೆಗೆ ಕಿರಿಯ ಮಗನೊಬ್ಬ ಶಾಲೆ ಬಿಟ್ಟಿದ್ದು, ಪ್ಲಂಬಿಂಗ್ ಕೆಲಸ ಮಾಡುತ್ತಿದ್ದು, 20 ಸಾವಿರ ಮಾಡುತ್ತಿದ್ದಾನೆ ಒಟ್ಟು ಅಸಾಪಾಸು 1.3 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅವರ ಕುಟುಂಬದ ಒಟ್ಟು ಆದಾಯವು ಪ್ರಸ್ತುತ ತಿಂಗಳಿಗೆ ಸುಮಾರು 98,000 ರೂ.ಗಳಾಗಿದ್ದು, ಕೆಲವೇ ದಿನಗಳಲ್ಲಿ ಇದು ತಿಂಗಳಿಗೆ 1.25 ಲಕ್ಷದಿಂದ 1.35 ಲಕ್ಷ ರೂ.ಗಳಿಗೆ ಏರುವ ನಿರೀಕ್ಷೆಯಿದೆ ಮತ್ತು ಇದೆಲ್ಲವೂ ತೆರಿಗೆ ಮುಕ್ತವಾಗಿದೆ. ಅಲ್ಲದೆ, ಅವರು ತಮ್ಮ ಆನುವಂಶಿಕ ಭೂಮಿಯನ್ನು ಕೃಷಿಗಾಗಿ ಗುತ್ತಿಗೆ ನೀಡಲು ಯೋಜಿಸುತ್ತಿದ್ದಾರೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ 30,000 ರಿಂದ 40,000 ರೂ.ಗಳನ್ನು ಗಳಿಸುವ ನಿರೀಕ್ಷೆಯಿದೆ ಎಂದು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ವಿಷಕಾರಿಯಲ್ಲದ ಹಾವು ಕಚ್ಚಿದರೆ ಏನು ಮಾಡಬೇಕು? ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ… Snakes
ನಾನು ಹೀಗೆ ಪೋಸ್ಟ್ ಮಾಡಿದ್ದಕ್ಕೆ ನನ್ನನ್ನು ತಪ್ಪು ತಿಳಿದುಕೊಳ್ಳಬೇಡಿ. ನನಗೆ ಆಕೆ ಬಗ್ಗೆ ಸಂತೋಷವಾಗುತ್ತದೆ. ಮಹಿಳೆ ಮತ್ತು ಆಕೆಯ ಕುಟುಂಬಸ್ಥರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಹಾಗಾಗಿ ಈ ಎಲ್ಲದಕ್ಕೂ ಆ ಕುಟುಂಬ ಅರ್ಹವಾಗಿದೆ. ಆದ್ರೆ ಇಲ್ಲಿ ನಿಜವಾಗಿ ಮಧ್ಯಮ ವರ್ಗಕ್ಕೆ ಸೇರಿದ್ದು ಯಾರು? ಬಡವ/ಶ್ರೀಮಂತ ಯಾರು ಎಂದು ಕೇಳಿದ್ದಾರೆ. ಇನ್ನು ಈ ಪೋಸ್ಟ್ ಭಾರೀ ತರೇಹವಾರಿ ಕಾಮೆಂಟ್ಳನ್ನು ಮಾಡಿದ್ದು, ಬಡವರ ಯಾಕೆ ತೆರೆಗೆ ಕಟ್ಟಬೇಕು ಎಂದು ಪೋಸ್ಟ್ ವಿರುದ್ಧ ಟೀಕೆ ವ್ಯಕ್ತವಾಗಿದೆ.(ಏಜೆನ್ಸೀಸ್)
ವಿಷಕಾರಿಯಲ್ಲದ ಹಾವು ಕಚ್ಚಿದರೆ ಏನು ಮಾಡಬೇಕು? ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಇಲ್ಲಿದೆ… Snakes
ಗೆಳೆಯನ ಲಿಂಗ ಪರಿವರ್ತಿಸಿ 18 ದಿನ ಲೈಂಗಿಕ ದೌರ್ಜನ್ಯ ಎಸಗಿದ ಸ್ನೇಹಿತ!