ಈ ವರ್ಷದ ಆರ್​ಸಿಬಿ ಪ್ಲೇಯರ್ಸ್ ಇವರೇ.. ಹೇಗಿದೆ ನೋಡಿ ಟೀಮ್​

rcb
Published on

ಬೆಂಗಳೂರು: ಐಪಿಎಲ್​ 2020 ಮುಗಿದು ಕೆಲವೇ ತಿಂಗಳಾಗಿದೆ. ಅಷ್ಟರಲ್ಲೇ 2021ರ ಐಪಿಎಲ್​ಗೆ ಸಿದ್ಧತೆ ಆರಂಭವಾಗಿದ್ದು, ರಾಯಲ್​ ಚಾಲೆಂಜರ್ಸ್​ ಆಫ್​ ಬೆಂಗಳೂರಿನ ತಂಡವೂ ಸಿದ್ಧವಾಗಿದೆ. ಈ ವರ್ಷ ಯಾವೆಲ್ಲ ಪ್ಲೇಯರ್ಸ್​ ಬೆಂಗಳೂರು ತಂಡಕ್ಕೆ ಆಡಲಿದ್ದಾರೆ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

ಪ್ರತಿ ವರ್ಷದಂತೆ ಈ ವರ್ಷವೂ ವಿರಾಟ್​ ಕೊಹ್ಲಿ ಕ್ಯಾಪ್ಟನ್ ಆಗಿರಲಿದ್ದಾರೆ. ಅವರ ಜತೆಯಲ್ಲಿ ಎಲ್ಲರ ಫೇವರಿಟ್​, 360 ಡಿಗ್ರಿ ಖ್ಯಾತಿಯ ಎಬಿ ಡೆ ವಿಲಿಯರ್ಸ್ ಇರಲಿದ್ದಾರೆ. ಹಾಗೇ ಸ್ಪಿನ್ನರ್​ ಯಜುವೆಂದರ್ ಚಹಲ್ ಸಹ ಇದ್ದಾರೆ. ಅವರ ಜತೆಯಲ್ಲಿ ವಾಷಿಂಗ್ಟನ್ ಸುಂದರ್, ಮೊಹಮದ್ ಸಿರಾಜ್, ನವದೀಪ್ ಸೈನಿ, ಅಡಮ್ ಜಾಂಪ, ಶಾಬಾಜ್ ಅಹಮದ್, ಜೋಷ್ ಫಿಲಿಪಿ, ಕೇನ್ ರಿಚರ್ಡಸನ್ ಟೀಂನಲ್ಲಿದ್ದಾರೆ. ಕರ್ನಾಟಕದ ದೇವದತ್ ಪಡಿಕಲ್ ಮತ್ತು ಪವನ್ ದೇಶಪಾಂಡೆ ಆರ್​ಸಿಬಿಯಲ್ಲಿ ಮಿಂಚಲು ಸಿದ್ಧರಾಗಿದ್ದಾರೆ.

2020ರಲ್ಲಿ ಆರ್​ಸಿಬಿಯಿಂದ ಫೀಲ್ಡ್​ಗಿಳಿದಿದ್ದ ತಂಡದ ಸದಸ್ಯರಲ್ಲಿ ಬಹುತೇಕರು ಈ ವರ್ಷವೂ ಕಾಣಿಸಿಕೊಳ್ಳಲಿದ್ದಾರೆ. ಆದರೆ 2020ರ ಪಂದ್ಯಾವಳಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದ ಕ್ರಿಸ್ ಮೋರಿಸ್ ಮತ್ತು ಆರನ್ ಫಿಂಚ್​ರನ್ನು ತಂಡ ಈ ಬಾರಿ ಬಿಟ್ಟುಕೊಟ್ಟಿದೆ. ಅವರ ಜತೆ ಮೊಯೀನ್ ಅಲಿ, ಇಸುರು ಉದಾನಾ, ಡೇಲ್ ಸ್ಟೇನ್, ಶಿವಮ್ ದೂಬೆ, ಉಮೇಶ್ ಯಾದವ್, ಪವನ್ ನೇಗಿ, ಗುರ್ಕೀರತ್ ಮನ್, ಪಾರ್ಥಿವ್ ಪಟೇಲ್ ಕೂಡ ತಂಡದ ಪಟ್ಟಿಯಿಂದ ಹೊರಗುಳಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net