

ಬೆಂಗಳೂರು: ಲೀಗ್ ಹಂತದ ಕೊನೇ ದಿನದ ಹಣಾಹಣಿಗಳಲ್ಲಿ ಪೂರಕ ಲಿತಾಂಶಗಳು ಬಂದ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕೊನೇಕ್ಷಣದಲ್ಲಿ ನಾಕೌಟ್ ಪ್ರವೇಶ ಒಲಿಸಿಕೊಂಡಿದೆ. ಎಲೈಟ್ ಎ ಗುಂಪಿನಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲನುಭವಿಸಿ 16 ಅಂಕಗಳೊಂದಿಗೆ 2ನೇ ಸ್ಥಾನ ಪಡೆದ ಕರ್ನಾಟಕ ತಂಡ, ರನ್‌ರೇಟ್ ಲೆಕ್ಕಾಚಾರದಲ್ಲಿ ಎಂಟರ ಘಟ್ಟಕ್ಕೇರಿದೆ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ
ಅಗ್ರಸ್ಥಾನದಲ್ಲಿರುವ ಪಂಜಾಬ್ ತಂಡ ಎ ಗುಂಪಿನಿಂದ ಅಜೇಯ ಸಾಧನೆಯೊಂದಿಗೆ ಕ್ವಾರ್ಟರ್‌ೈನಲ್‌ಗೇರಿದೆ. ಬಿ ಗುಂಪಿನಲ್ಲಿ ಬಂಗಾಳ ತಂಡ ತನ್ನ ಕಡೇ ಲೀಗ್ ಪಂದ್ಯದಲ್ಲಿ ತಮಿಳುನಾಡಿಗೆ ಶರಣಾಗಿದ್ದು, ಇ ಗುಂಪಿನಲ್ಲಿ ಕೇರಳ ತಂಡ ಹರಿಯಾಣ ತಂಡಕ್ಕೆ ಶರಣಾಗಿದ್ದು ಕರ್ನಾಟಕ ತಂಡದ ಪಾಲಿಗೆ ವರದಾನವಾಯಿತು. ರನ್‌ರೇಟ್ ಲೆಕ್ಕಾಚಾರದಲ್ಲಿ ಮುನ್ನಡೆ ಸಾಧಿಸಿದ ಕರ್ನಾಟಕ 8ನೇ ತಂಡವಾಗಿ ಅರ್ಹತೆ ಪಡೆಯಿತು.
ಇದನ್ನೂ ಓದಿ: ಜಾಹ್ನವಿ ಆಯ್ತು, ಈಗ ಆಕೆಯ ತಂಗಿಯೂ ಬಣ್ಣ ಹಚ್ಚಲು ರೆಡಿ
ಜನವರಿ 26ರಿಂದ 31 ರವರೆಗೆ ಅಹಮದಾಬಾದ್‌ನ ಸರ್ದಾರ್ ವಲ್ಲಭಾಯ್ ಪಟೇಲ್ ಸ್ಟೇಡಿಯಂನಲ್ಲಿ ನಾಕೌಟ್ ಹಂತ ನಡೆಯಲಿದೆ.