More

    ಬ್ರಿಸ್ಬೇನ್ ಹೀರೋ ರಿಷಭ್ ಪಂತ್ ಈಗ ವಿಶ್ವ ನಂ. 1 ವಿಕೆಟ್​ ಕೀಪರ್-ಬ್ಯಾಟ್ಸ್‌ಮನ್

    ದುಬೈ: ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಅಮೋಘ ಬ್ಯಾಟಿಂಗ್ ನಿರ್ವಹಣೆ ತೋರಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದ ರಿಷಭ್ ಪಂತ್ ಅವರು ಈಗ ವಿಶ್ವದ ನಂ. 1 ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 13ನೇ ಸ್ಥಾನಕ್ಕೇರುವ ಮೂಲಕ 23 ವರ್ಷದ ರಿಷಭ್ ಪಂತ್ ಈ ಸಾಧನೆ ಮಾಡಿದ್ದಾರೆ.

    ಗಾಬಾ ಟೆಸ್ಟ್‌ನ ಅಂತಿಮ ದಿನ ಕೆಚ್ಚೆದೆಯ 89 ರನ್ ಸಿಡಿಸಿದ ಸಾಧನೆಗಾಗಿ ರಿಷಭ್ ಪಂತ್ ಭಾರಿ ಏರಿಕೆ ಕಂಡಿದ್ದು, ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ (15ನೇ ಸ್ಥಾನ) ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್‌ನಲ್ಲಿ ನಂ. 1 ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಪಂತ್ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ ಗರಿಷ್ಠ ಸ್ಥಾನ ಪಡೆದ ಭಾರತೀಯ ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ಫಾರೂಖ್ ಇಂಜಿನಿಯರ್ 17 ಮತ್ತು ಎಂಎಸ್ ಧೋನಿ 19ನೇ ಸ್ಥಾನಕ್ಕೇರಿದ್ದು ಹಿಂದಿನ ಗರಿಷ್ಠ.

    ಇದನ್ನೂ ಓದಿ: ನಟರಾಜನ್ ನೋಬಾಲ್‌ಗೆ ಸ್ಪಾಟ್ ಫಿಕ್ಸಿಂಗ್ ಎಂದ ವಾರ್ನ್, ಸಿಡಿದೆದ್ದ ಅಭಿಮಾನಿಗಳು

    ಕೊಹ್ಲಿ 4ನೇ ಸ್ಥಾನಕ್ಕೆ ಕುಸಿತ: ಪಿತೃತ್ವ ರಜೆಯಿಂದ ಸರಣಿಯ ಕೊನೇ 3 ಟೆಸ್ಟ್ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2016ರ ನವೆಂಬರ್ ಬಳಿಕ ಇದೇ ಮೊದಲ ಬಾರಿಗೆ ಅಗ್ರ 3ರಿಂದ ಹೊರಬಿದ್ದಿದ್ದಾರೆ. ಕೊಹ್ಲಿ (862) 4ನೇ ಸ್ಥಾನಕ್ಕಿಳಿದಿದ್ದರೆ, ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ (878) ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದಾರೆ. ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ 1,514 ದಿನಗಳ ಬಳಿಕ ಅಗ್ರ 3ರಿಂದ ಕೆಳಗಿನ ಸ್ಥಾನ ಪಡೆದಿದ್ದಾರೆ.

    ಉಳಿದಂತೆ ಚೇತೇಶ್ವರ ಪೂಜಾರ 7ನೇ ಸ್ಥಾನಕ್ಕೇರಿದ್ದರೆ, ಅಜಿಂಕ್ಯ ರಹಾನೆ 9ನೇ ಸ್ಥಾನಕ್ಕಿಳಿದಿದ್ದಾರೆ. ರೋಹಿತ್ ಶರ್ಮ 18 ಮತ್ತು ಮಯಾಂಕ್ ಅಗರ್ವಾಲ್ 23ನೇ ಸ್ಥಾನಕ್ಕಿಳಿದಿದ್ದಾರೆ. ಬ್ರಿಸ್ಬೇನ್‌ನಲ್ಲಿ 91 ರನ್ ಸಿಡಿಸಿ ಯಶಸ್ವಿ ಚೇಸಿಂಗ್‌ಗೆ ಬುನಾದಿ ಹಾಕಿಕೊಟ್ಟಿದ್ದ ಶುಭಮಾನ್ ಗಿಲ್ 68ರಿಂದ 47ನೇ ಸ್ಥಾನಕ್ಕೇರಿದ್ದಾರೆ.

    ಇದನ್ನೂ ಓದಿ: ಸ್ಪಿನ್​ ದಿಗ್ಗಜ ಬಿಎಸ್ ಚಂದ್ರಶೇಖರ್‌ಗೆ ಅನಾರೋಗ್ಯ, ಬೆಂಗಳೂರಿನ ಆಸ್ಪತ್ರೆಯಲ್ಲಿ ಚೇತರಿಕೆ

    ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಆರ್. ಅಶ್ವಿನ್ ಮತ್ತು ಜಸ್‌ಪ್ರೀತ್ ಬುಮ್ರಾ ಬ್ರಿಸ್ಬೇನ್ ಟೆಸ್ಟ್‌ನಿಂದ ಹೊರಗುಳಿದ ನಡುವೆಯೂ ಕ್ರಮವಾಗಿ 8, 9ನೇ ಸ್ಥಾನಕ್ಕೇರಿದ್ದಾರೆ. ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ 7ರಿಂದ 11ನೇ ಸ್ಥಾನಕ್ಕೆ ಕುಸಿದಿರುವುದು ಇದಕ್ಕೆ ಕಾರಣವಾಗಿದೆ. ಪ್ಯಾಟ್ ಕಮ್ಮಿನ್ಸ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

    ಗಾಬಾದಲ್ಲಿ ಚೊಚ್ಚಲ 5 ವಿಕೆಟ್ ಗೊಂಚಲು ಪಡೆದ ವೇಗಿ ಮೊಹಮದ್ ಸಿರಅಜ್ 32 ಸ್ಥಾನ ಜಿಗಿದು 45ನೇ ಸ್ಥಾನ ಗಳಿಸಿದ್ದಾರೆ. ಪದಾರ್ಪಣೆ ಪಂದ್ಯವಾಡಿದ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ 82 ಮತ್ತು ಬೌಲಿಂಗ್‌ನಲ್ಲಿ 97ನೇ ಸ್ಥಾನ ಗಳಿಸಿದ್ದಾರೆ. ಆಲ್ರೌಂಡ್ ನಿರ್ವಹಣೆ ತೋರಿದ ಶಾರ್ದೂಲ್ ಠಾಕೂರ್ ಬ್ಯಾಟಿಂಗ್‌ನಲ್ಲಿ 113 ಮತ್ತು ಬೌಲಿಂಗ್‌ನಲ್ಲಿ 65ನೇ ಸ್ಥಾನ ಗಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts