More

    ಹರ್ಷಲ್ ಪಟೇಲ್ ವಿರುದ್ಧ ಸಿಡಿದೆದ್ದ ಯಜುವೇಂದ್ರ ಚಹಲ್! ಕಾಪಿರೈಟ್​​ ಕೇಸ್​ಗೆ ಆಗ್ರಹಿಸಿದ ಸ್ಟಾರ್ ಬೌಲರ್

    ಚೆನ್ನೈ: ನಿನ್ನೆ (ಮೇ.01) ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್​ ಮತ್ತು ಪಂಜಾಬ್ ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಪಂಜಾಬ್ ಏಳು ವಿಕೆಟ್ ಅಂತರದಿಂದ ಸಿಎಸ್​ಕೆ ವಿರುದ್ಧ ಭರ್ಜರಿ ಜಯ ಸಾಧಿಸಿತು. ಚೆನ್ನೈ ಪಡೆ ನೀಡಿದ 163 ರನ್​ ಗುರಿಯನ್ನು ಚೇಸಿಂಗ್ ಮಾಡಿದ ಕಿಂಗ್ಸ್​ ಪರ ಜಾನಿ ಬೇರ್​ಸ್ಟೊ 46 (30) ಮತ್ತು ರೈಲಿ ರುಸ್ಸೋ 23 ಎಸೆತಗಳಲ್ಲಿ 43 ರನ್​ ಸಿಡಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.

    ಇದನ್ನೂ ಓದಿ: ಮದುವೆಗೂ ಮುನ್ನ ಆರು ಮಂದಿ ಜೊತೆಗೆ ಸುತ್ತಾಡಿದ್ರು ಕೊಹ್ಲಿ ಪತ್ನಿ ಅನುಷ್ಕಾ!

    ಮೊದಲ ಇನ್ನಿಂಗ್ಸ್​ನಲ್ಲಿ ಸಿಎಸ್​ಕೆ ಬ್ಯಾಟ್ಸ್​ಮನ್​ಗಳನ್ನು ಹೆಚ್ಚು ರನ್​ ಕಲೆಹಾಕದಂತೆ ತಡೆದ ರಾಹುಲ್ ಚಾಹರ್​ ಮತ್ತು ಹರ್ಪ್ರಿತ್​ ಬ್ರಾರ್​​ ತಲಾ ಎರಡು ವಿಕೆಟ್​ಗಳನ್ನು ಕಬಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಪಂಜಾಬ್​ ಬೌಲರ್​ಗಳ ಆರ್ಭಟದ ಮಧ್ಯೆಯೂ 62 ರನ್ ಸಿಡಿಸಿದ ಸಿಎಸ್​ಕೆ ಕ್ಯಾಪ್ಟನ್ ರುತುರಾಜ್ ಗಾಯಕ್ವಾಡ್​, ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾದರು.

    ಇನ್ನು ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಲು ಮುಂದಾದ ಸಮೀರ್​ ರಿಜ್ವೀ, ಕಗಿಸೋ ರಬಾಡ ಬೌಲಿಂಗ್​ನಲ್ಲಿ ಕ್ಯಾಚ್ ಔಟ್ ಆಗಿ, ಪೆವಿಲಿಯನ್ ಹಾದಿ ಹಿಡಿದರು. ಆದರೆ, ಸಿಕ್ಸ್​ ಹೊಡೆಯಲು ಹೋದ ರಿಜ್ವೀ ಅವರ ಕ್ಯಾಚ್​ ಅನ್ನು ಬೌಂಡರಿ ಲೈನ್​ನಲ್ಲಿದ್ದ ಹರ್ಷಲ್ ಪಟೇಲ್​ ಸ್ಟೈಲಿಶ್​ ಆಗಿ ಹಿಡಿದರು. ಬಾಲ್​ ಕ್ಯಾಚ್​ ಹಿಡಿದ ಪಟೇಲ್ ಕೆಲವು ಸೆಕೆಂಡ್​ಗಳು ತಮ್ಮ ಸಂತಸವನ್ನು ನೆಲದ ಮೇಲೆ ಹೇಗಿದ್ದರೋ, ಹಾಗೆಯೇ ಉಳಿಯುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

    ಇದನ್ನೂ ಓದಿ: ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯ: ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಶ್ಲಾಘನೆ

    ಹರ್ಷಲ್ ಪಟೇಲ್ ಕ್ಯಾಚ್ ಹಿಡಿದ ಸ್ಟೈಲ್​ ನೋಡಿದ ಕ್ರಿಕೆಟ್ ಅಭಿಮಾನಿಗಳು, ಇದು ಯಜುವೇಂದ್ರ ಚಹಲ್​ ಅವರ ಅನುಕರಣೆ ಇದ್ದಂತಿದೆ ಅಲ್ವಾ? ಎಂದು ಚಹಲ್​ರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಇದನ್ನು ನೋಡಿದ ಯಜುವೇಂದ್ರ ಚಹಲ್​ ಹೌದಲ್ವಾ? ಎಂದು ಒಂದು ನಿಮಿಷ ಅಚ್ಚರಿಗೆ ಒಳಗಾಗಿದ್ದಾರೆ. ಕೂಡಲೇ ಎಕ್ಸ್​ನಲ್ಲಿ (ಈ ಹಿಂದಿನ ಟ್ವಿಟರ್) ಟ್ವೀಟ್ ಮಾಡಿದ ಅವರು, ಹರ್ಷಲ್ ಪಟೇಲ್ ಕಾಪಿರೈಟ್ಸ್​ ನಿಯಮವನ್ನು ಉಲಂಘಿಸಿದ್ದಾರೆ ಎಂದು ಎಕ್ಸ್​ ಮಾಲೀಕ ಎಲೋನ್ ಮಸ್ಕ್​ನ ಟ್ಯಾಗ್ ಮಾಡಿ, ತಿಳಿಸಿದ್ದಾರೆ.

    ಚಹಲ್​ರ ಈ ಟ್ವೀಟ್ ಸಿಕ್ಕಾಪಟ್ಟೆ ಹಾಸ್ಯಸ್ಪದವಾಗಿದ್ದು, ಹಲವರು ಈ ತಮಾಷೆ ಎಂದಿನಂತೆ ಮುಂದುವರೆಯಲಿದೆ ಎಂದು ವ್ಯಾಪಕವಾಗಿ ಅಭಿಪ್ರಾಯಿಸಿದ್ದಾರೆ. ಸದ್ಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).

    ಡರೈಲ್​ ಮಿಚೆಲ್​ಗೆ ಕ್ರೀಸ್​ ಕೊಡಲಿಲ್ಲ ಅನ್ನೋದಕ್ಕೆ ಕಾರಣವಿದೆ! ಧೋನಿ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ

    ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts