ಕೇಕ್​ನಲ್ಲಿ ಮರ್ಮಾಂಗ! ಸ್ಪೆಷಲ್​ ಕೇಕ್​ ಮಾಡಲು ಹೋಗಿ ಜೈಲು ಪಾಲಾದ ಮಹಿಳೆ

cake
Published on

ಕೈರೋ: ಬರ್ತ್​ ಡೇ ಪಾರ್ಟಿಗಳ ಕೇಕ್​ ಹೇಗಿರಬೇಕು? ಚಿಕ್ಕ ಮಕ್ಕಳಿಗಾದರೆ ಡಾಲ್​, ಮಿಕ್ಕಿ ಮೌಸ್​ ಹೀಗೆ ವಿಶೇಷ ವಿನ್ಯಾಸದ ಕೇಕ್​ ತಯಾರಿಸುವುದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಬ್ಬಳು ಮಹಿಳೆ ಬರ್ತ್​ ಡೇ ಪಾರ್ಟಿಗಾಗಿ ತಯಾರಿಸಿದ್ದ ಕೇಕ್​ ಅದೆಷ್ಟು ವಿಚಿತ್ರವಾಗಿತ್ತೆಂದರೆ ಕೇಕ್​ ನೋಡಿದ ಪೊಲೀಸರು ಸೀದಾ ಬಂದು ಕೇಕ್​ ಮಾಡಿದ ಮಹಿಳೆಯನ್ನು ಬಂಧಿಸಿ ಕರೆದೊಯ್ದಿದ್ದಾರೆ.

ಇಂತದ್ದೊಂದು ವಿಚಿತ್ರ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ. ಇತ್ತೀಚೆಗೆ ಕೈರೋ ಸ್ಪೋರ್ಟ್​ ಕ್ಲಬ್​ನಲ್ಲಿ ಬರ್ತ್​ ಡೇ ಪಾರ್ಟಿ ಒಂದನ್ನು ಹಮ್ಮಿಕೊಳ್ಳಲಾಗಿತ್ತು. ಆ ಪಾರ್ಟಿಗೆ ನೋಂದಣಿ ಪಡೆದಿರುವ ಚೆಫ್​ ಮಹಿಳೆ ಪೇಸ್ಟ್ರಿ ತಯಾರಿಸಿ ಕೊಟ್ಟಿದ್ದಾರೆ. ಅಂದ ಹಾಗೆ ಸಣ್ಣ ಸಣ್ಣ ಕಪ್​ ಕೇಕ್​ಗಳನ್ನೇ ಪಾರ್ಟಿಗೆ ತರಿಸಲಾಗಿದೆ. ಈ ಎಲ್ಲ ಕೇಕ್​ಗಳ ಮೇಲೆ ಗಂಡು ಮಕ್ಕಳ ಮರ್ಮಾಂಗ ಮತ್ತು ಹೆಣ್ಣ ಮಕ್ಕಳ ಒಳುಡುಪಿನ ಚಿತ್ರವನ್ನು ಡಿಸೈನ್​ ಮಾಡಲಾಗಿದೆ. ಈ ವಿಶೇಷ ಕೇಕ್​ಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲೂ ಹರಿಬಿಡಲಾಗಿದೆ.

ಕೇಕ್​ಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದನ್ನು ನೋಡಿದ ಅಲ್ಲಿನ ಪೊಲೀಸರು ತಕ್ಷಣ ಕೇಕ್​ ತಯಾರಿಸಿದ್ದ ಮಹಿಳೆಯನ್ನು ಬಂಧಿಸಿದ್ದಾರೆ. ಧಾರ್ಮಿಕವಾಗಿ ಇಂತಹ ಕೆಲಸ ಮಾಡುವುದು ನಿಷಿದ್ಧ ಎಂದು ಹೇಳಲಾಗಿದೆ. ಇದೀಗ ಈ ರೀತಿ ಕೇಕ್​ ಮಾಡಿಸುವುದರ ಹಿಂದೆ ಕ್ಲಬ್​ನ ಕೈವಾಡವೂ ಇದೆಯೇ ಎನ್ನುವುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಧಾರ್ಮಿಕ ಚಿಂತನೆಗಳನ್ನು ನಂಬುವ ದೇಶದಲ್ಲಿ ಈ ರೀತಿ ಅಸಭ್ಯ ಕೆಲಸ ಮಾಡಿರುವುದು ತಪ್ಪು ಎಂದು ತಿಳಿಸಲಾಗಿದೆ. ಬಂಧಿತಳಾಗಿದ್ದ ಮಹಿಳೆ ಜಾಮೀನು ಪಡೆದು ಹೊರಬಂದಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net