

ಜೋಧ್ಪುರ್: ಬೌಲರ್ಗಳ ಸಂಘಟಿತ ದಾಳಿಯ ಫಲವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 112ರನ್ಗಳ ಜಯ ಗಳಿಸಿದೆ.
ಜೋಧ್ಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171ರನ್ ಗಳಿಸಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಬೆಂಗಳೂರು ತಂಡಕ್ಕೆ ನಾಯಕ ಫಾಪ್ ಡು ಪ್ಲೆಸಿಸ್(55 ರನ್, 44 ಎಸೆತ, 3 ಬೌಂಡರಿ, 2 ಸಿಕ್ಸರ್), ಗ್ಲೆನ್ ಮ್ಯಾಕ್ಸ್ವೆಲ್(54 ರನ್, 33 ಎಸೆತ, 5 ಬೌಂಡರಿ, 3 ಸಿಕ್ಸರ್), ಅನುಜ್ ರಾವತ್(29 ರನ್, 11 ಎಸೆತ, 3 ಬೌಂಡರಿ, 2 ಸಿಕ್ಸರ್) ಬಿರುಸಿನ ಆಟದ ಫಲವಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171ರನ್ ಗಳಿಸಿತ್ತು.
ರಾಜಸ್ಥಾನ ಪರ ಆ್ಯಡಂ ಜಂಪಾ(4-0-25-2), ಕೆ.ಎಂ. ಆಸಿಫ್(4-0-42-2), ಸಂದೀಪ್ ಶರ್ಮಾ(4-0-34-1), ಯಜುವೇಂದ್ರ ಚಹಲ್(4-0-37-0), ಆರ್. ಅಶ್ವಿನ್(4-0-33-0) ರನ್ ನೀಡಿ ವಿಕೆಟ್ ಪಡೆದಿದ್ದಾರೆ.
ಗುರಿ ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರ್ಸಿಬಿ ಬೌಲರ್ಗಳು ಬಿಟ್ಟು ಬಿಡದಂತೆ ಕಾಡಿದರು. ಶಿಮ್ರೋನ್ ಹೆಟ್ಮೆಯರ್(35 ರನ್, 19 ಎಸೆತ, 1 ಬೌಂಡರಿ, 4 ಸಿಕ್ಸರ್) ರಾಜಸ್ಥಾನ ತಂಡಕ್ಕೆ ಅಲ್ಪ ಚೇತರಿಕೆ ನೀಡಿದರೂ ಸಹ ಆರ್ಸಿಬಿ ಬೌಲರ್ಗಳ ಸಂಘಟಿತ ದಾಳಿಗೆ ನಲುಗಿದ ತಂಡವು 59ರನ್ಗಳಿಗೆ ಸರ್ವಪತನವಾಯಿತು.
ಬೆಂಗಳೂರು ಪರ ವೇಯ್ನ್ ಪಾರ್ನೆಲ್(3-0-10-3), ಮೈಕೆಲ್ ಬ್ರೇಸ್ವೆಲ್(3-0-16-2), ಮೊಹಮ್ಮದ್ ಸಿರಾಜ್(2-0-10-1), ಗ್ಲೆನ್ ಮ್ಯಾಕ್ಸ್ವೆಲ್(1-0-3-1), ಕರ್ಣ್ ಶರ್ಮಾ(1.3-0-19-2) ರನ್ ನೀಡಿ ವಿಕೆಟ್ ಪಡೆದಿದ್ಧಾರೆ.